
ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಾರಣ, ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿರುತ್ತದೆ. ಪಬ್ಲಿಕ್ನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳು ಆಟೋಗ್ರಾಫ್, ಸೆಲ್ಫಿ ಎಂದು ಮುಗಿ ಬೀಳುತ್ತಾರೆ. ಈ ಕಾರಣಕ್ಕೆ ಸೆಲೆಬ್ರಿಟಿಗಳು ಇಂಥ ಸಾಹಸಕ್ಕೆ ಮುಂದಾಗುವುದಿಲ್ಲ. ಆದರೆ, ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ, ತಮಿಳು ಲೇಡಿ ಸೂಪರ್ಸ್ಟಾರ್ ನಯನತಾರಾ ಹಾಗೂ ನಟ ವಿಜಯ್ ಸೇತುಪತಿ ಈಗ ಬಸ್ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹಾಗಂತ ಈ ಮೂವರು ಎಲ್ಲಿಯೋ ಪ್ರಯಾಣಕ್ಕೆ ಹೊರಟಿಲ್ಲ. ಬದಲಿಗೆ, ಸಿನಿಮಾಗಾಗಿ ಈ ರೀತಿ ಮಾಡಿದ್ದಾರೆ.
ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ‘ಕಾದು ವಾಕುಲಾ ರೆಂಡು ಕಾದು’ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ ಹಾಗೂ ಸಮಂತಾ ನಟಿಸುತ್ತಿದ್ದಾರೆ. ಈ ಮೂವರನ್ನು ಇದೇ ಮೊದಲ ಬಾರಿಗೆ ಒಂದೇ ಫ್ರೆಮ್ನಲ್ಲಿ ತರಲಾಗಿದೆ. ಗೋವಾದಲ್ಲಿ ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿದೆ. ಸದ್ಯ, ಸೆಟ್ನ ವಿಡಿಯೋ ಲೀಕ್ ಆಗಿದೆ. ಇದರಲ್ಲಿ, ಬಸ್ ಫುಟ್ಬೋರ್ಡ್ ಮೇಲೆ ನಿಂತು ಈ ಮೂವರು ಸಾಗುತ್ತಿದ್ದಾರೆ.
ನಯನತಾರಾ ಹಾಗೂ ಸಮಂತಾ ಒಂದೇ ತೆರನಾದ ಸೀರೆ ಉಟ್ಟಿದ್ದಾರೆ. ವಿಜಯ್ ಸೇತುಪತಿ ಬಿಳಿ ಬಣ್ಣದ ಶರ್ಟ್ ತೊಟ್ಟು ಅದಕ್ಕೆ ಫಾರ್ಮಲ್ ಪ್ಯಾಂಟ್ ಧರಿಸಿದ್ದಾರೆ. ಈ ಸಿನಿಮಾ ರೆಟ್ರೋ ಲುಕ್ನಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಸಿನಿಮಾ ದೃಶ್ಯಗಳು ಲೀಕ್ ಆದ ಬಗ್ಗೆ ಚಿತ್ರತಂಡಕ್ಕೆ ಚಿಂತೆ ಕಾಡಿದೆ.
ವಿಘ್ನೇಶ್ ಶಿವನ್ ಮತ್ತು ನಯನತಾರಾ ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರು ಗುಟ್ಟಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಈಗ ಇಬ್ಬರೂ ಮತ್ತೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ.
ಇದನ್ನೂ ಓದಿ:Nayanthara: ಗುಟ್ಟಾಗಿ ಎಂಗೇಜ್ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ