‘ಲೈಗರ್’ ಪ್ರಮೋಷನ್ ಮಾಡಲು ಯೂಟ್ಯೂಬರ್ ಜತೆ ಫೈಟ್ ಮಾಡಿದ ವಿಜಯ್ ದೇವರಕೊಂಡ

ನಿಹಾರಿಕಾ ಎನ್​.ಎಂ ಅವರ ವಿಡಿಯೋ ಕಂಟೆಟ್​ಗಳು ಅನೇಕರಿಗೆ ಇಷ್ಟವಾಗುತ್ತದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 28 ಲಕ್ಷ ಜನ ಹಿಂಬಾಲಕರಿದ್ದಾರೆ.

‘ಲೈಗರ್’ ಪ್ರಮೋಷನ್ ಮಾಡಲು ಯೂಟ್ಯೂಬರ್ ಜತೆ ಫೈಟ್ ಮಾಡಿದ ವಿಜಯ್ ದೇವರಕೊಂಡ
ವಿಜಯ್-ನಿಹಾರಿಕಾ
Edited By:

Updated on: Aug 24, 2022 | 10:07 PM

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ (Liger) ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಅವರು ಭರ್ಜರಿ ಪ್ರಮೋಷನ್ ಕೊಡುತ್ತಿದ್ದಾರೆ. ಕೊನೆಯ ಕ್ಷಣದವರೆಗೂ ವಿಜಯ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ಈಗ ಅವರ ಫೈಟ್ ವಿಡಿಯೋ ವೈರಲ್ ಆಗಿದೆ. ಸಿನಿಮಾ ಪ್ರಚಾರಕ್ಕೋಸ್ಕರ ಯೂಟ್ಯೂಬರ್ ಜತೆ ಫೈಟ್ ಮಾಡಿದ್ದಾರೆ! ಹಾಗಂತ ಇದು ಗಂಭೀರ ಕಿತ್ತಾಟ ಅಲ್ಲ. ಇದನ್ನು ಮಾಡಿದ್ದು ಕೇವಲ ಫನ್​​ಗೋಸ್ಕರ.

ನಿಹಾರಿಕಾ ಎನ್​.ಎಂ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಲಕ್ಷಾಂತರ ಮಂದಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ. ಅವರು ಕಂಟೆಂಟ್ ಕ್ರಿಯೇಟರ್ ಕೂಡ ಹೌದು. ಅವರು ಈಗ ‘ಲೈಗರ್’ ಪ್ರಮೋಷನ್​ಗೆ ಕೈ ಜೋಡಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು’; ಇದು ಸೋನು ಶ್ರೀನಿವಾಸ್ ಗೌಡ ಪಾಠ
ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ
ಕಂಟೆಂಟ್ ಕ್ರಿಯೇಟರ್ ನಿಹಾರಿಕಾಗೆ ಪಂಚ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್​; ವಿಡಿಯೋ ವೈರಲ್
Niharika Konidela: ರೇವ್​ ಪಾರ್ಟಿ ಮೇಲೆ ಪೊಲೀಸ್​ ದಾಳಿ; ಚಿರಂಜೀವಿ ಕುಟುಂಬದ ಮನೆ ಮಗಳು ನಿಹಾರಿಕಾ ಕೊನಿಡೆಲಾ ವಶಕ್ಕೆ​

ವಿಜಯ್ ದೇವರಕೊಂಡ ಹಾಗೂ ನಿಹಾರಿಕಾ ಫೈಟ್​ಗೆ ಇಳಿಯುತ್ತಾರೆ. ವಿಜಯ್ ದೇವರಕೊಂಡ ಆ್ಯಕ್ಷನ್ ಕಂಡು ನಿಹಾರಿಕಾ ಭಯ ಬೀಳುತ್ತಾರೆ. ಇಬ್ಬರ ನಡುವಿನ ಕಿತ್ತಾಟ ಮುಂದುವರಿಯುತ್ತದೆ. ಕೊನೆಯಲ್ಲಿ ನಿಹಾರಿಕಾ ಭಯ ಬಿದ್ದು ಅಲ್ಲಿಂದ ಕಾಲ್ಕೀಳುತ್ತಾರೆ. ಈ ವಿಡಿಯೋ ಸಖತ್ ಫನ್ನಿ ಆಗಿದೆ. ವಿಜಯ್ ಅವರು ಈ ವಿಡಿಯೋದಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ.

ನಿಹಾರಿಕಾ ಎನ್​.ಎಂ ಅವರ ವಿಡಿಯೋ ಕಂಟೆಂಟ್​ಗಳು ಅನೇಕರಿಗೆ ಇಷ್ಟವಾಗುತ್ತದೆ. ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 28 ಲಕ್ಷ ಜನ ಹಿಂಬಾಲಕರಿದ್ದಾರೆ. ಅವರ ಬಳಿ ಸಿನಿಮಾ ಪ್ರಚಾರ ಮಾಡಿಸಿದರೆ ದೊಡ್ಡ ಮಟ್ಟದಲ್ಲಿ ಮೈಲೇಜ್ ಸಿಗಲಿದೆ. ಈ ಕಾರಣದಿಂದ ಅನೇಕರು ಅವರ ಮೂಲಕ ಸಿನಿಮಾ ಪ್ರಚಾರ ಮಾಡಿಸುತ್ತಿದ್ದಾರೆ. ‘ಲೈಗರ್’ ತಂಡ ಕೂಡ ಇದೇ ಮಾರ್ಗ ತುಳಿದಿದೆ.

ಇದನ್ನೂ ಓದಿ: ‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನವಿದೆ. ಈ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದೆ. ಅನನ್ಯಾ ಪಾಂಡೆ ಈ ಚಿತ್ರಕ್ಕೆ ನಾಯಕಿ. ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕೂಡ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Published On - 10:03 pm, Wed, 24 August 22

TV9 Web

TV9 Kannada

Read More
Loading...
Unable to load recommendations.
Follow Us