ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್​​ ಬೆಲೆ ಏರಿಕೆ ಇಲ್ಲ

ದೊಡ್ಡ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರ ಹೆಚ್ಚಳಕ್ಕೆ ತೆಲುಗು ರಾಜ್ಯಗಳು ಅನುಮತಿ ನೀಡುತ್ತವೆ. ‘ರಾಮಾಯಣ’ ಭಾರತದಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಎರಡೂ ರಾಜ್ಯಗಳಲ್ಲಿ ಸರ್ಕಾರಕ್ಕೆ ಆಪ್ತವಾಗಿರುವ ದಿಲ್ ರಾಜು ಅವರು ‘ರಾಮಾಯಣ’ ಸಿನಿಮಾ ವಿತರಣೆ ಹಕ್ಕು ಖರೀದಿ ಮಾಡಿದ್ದಾರೆ. ಆದರೆ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅವರು ಅನುಮತಿಯನ್ನೇ ಕೇಳಿಲ್ಲ. ಆ ಮೂಲಕ ಜಾಣ ನಿರ್ಣಯ ಮಾಡಿದ್ದಾರೆ.

ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್​​ ಬೆಲೆ ಏರಿಕೆ ಇಲ್ಲ
Dil Raju Yash Ramayana

Updated on: Oct 22, 2026 | 11:30 AM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಅಡ್ವಾನ್ಸ್ ಬುಕಿಂಗ್
  • ತೆಲುಗು ರಾಜ್ಯಗಳಲ್ಲಿ ಟಿಕೆಟ್ ಬೆಲೆ ಏರಿಕೆ ಇಲ್ಲ
  • ಕುಟುಂಬ ಪ್ರೇಕ್ಷಕರ ಸೆಳೆಯಲು ನಿರ್ಣಯ

ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಯಾವುದೇ ದೊಡ್ಡ ಬಜೆಟ್ ಸಿನಿಮಾ ಬಿಡುಗಡೆ ಆಗುವಾಗ ಮೊದಲ ಹತ್ತು ಕೆಲವೊಮ್ಮೆ ಮೊದಲ ಎರಡು ವಾರಗಳಿಗೆ ಟಿಕೆಟ್ ಬೆಲೆ ಏರಿಕೆ ಹಾಗೂ ಹೆಚ್ಚುವರಿ ಶೋಗಳನ್ನು ಹಾಕಲು ಸರ್ಕಾರಕ್ಕೆ ಅರ್ಜಿ ಹಾಕಿ ಅನುಮತಿ ಪಡೆಯಲಾಗುತ್ತದೆ. ದೊಡ್ಡ ಬಜೆಟ್ ಸಿನಿಮಾಗಳಿಗೆ ಮಾತ್ರ ಎರಡೂ ರಾಜ್ಯದ ಸರ್ಕಾರಗಳು ಅನುಮತಿ ನೀಡುತ್ತವೆ. ‘ರಾಮಾಯಣ’ ಭಾರತದಲ್ಲಿಯೇ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದ್ದು, ಎರಡೂ ರಾಜ್ಯಗಳಲ್ಲಿ ಸರ್ಕಾರಕ್ಕೆ ಆಪ್ತವಾಗಿರುವ ದಿಲ್ ರಾಜು ಅವರು ‘ರಾಮಾಯಣ’ ಸಿನಿಮಾ ವಿತರಣೆ ಹಕ್ಕು ಖರೀದಿ ಮಾಡಿದ್ದಾರೆ. ಆದರೆ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅವರು ಅನುಮತಿಯನ್ನೇ ಕೇಳಿಲ್ಲ. ಆ ಮೂಲಕ ಜಾಣ ನಿರ್ಣಯ ಮಾಡಿದ್ದಾರೆ.

ಉದ್ದೇಶಪೂರ್ವಕವಾಗಿ ‘ರಾಮಾಯಣ’ ಸಿನಿಮಾಕ್ಕೆ ಟಿಕೆಟ್ ದರವನ್ನು ಹೆಚ್ಚಳ ಮಾಡದೆ ಕಡಿಮೆ ದರಕ್ಕೆ ರಿಲೀಸ್ ಮಾಡುವ ನಿರ್ಣಯನ್ನು ವಿತರಕ ದಿಲ್ ರಾಜು ಮಾಡಿದ್ದಾರೆ. ‘ರಾಮಾಯಣ’ ಸಿನಿಮಾ ಕುಟುಂಬದವರು ಒಟ್ಟಿಗೆ ನೋಡುವ ಸಿನಿಮಾ, ಟಿಕೆಟ್ ದರ ಹೆಚ್ಚಿದ್ದರೆ ಕೌಟುಂಬಿಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಿಲ್ಲ ಹಾಗಾಗಿ ದಿಲ್ ರಾಜು ಅವರು ಟಿಕೆಟ್ ದರ ಹೆಚ್ಚಿಸದೆ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕೆಲ ವಾರಗಳ ಹಿಂದೆ ಬಿಡುಗಡೆ ಆದ ‘ಇರುಮುಡಿ’ ಸಿನಿಮಾ ಕುಟುಂಬ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು ಈ ಸಿನಿಮಾ. ‘ಇರುಮುಡಿ’ ಸಿನಿಮಾದ ಟಿಕೆಟ್ ದರಗಳನ್ನು ಸಹ ಹೆಚ್ಚಿಸಲಾಗಿರಲಿಲ್ಲ. ಇದೇ ಟ್ರಿಕ್ ಅನ್ನು ಈಗ ದಿಲ್ ರಾಜು ಸಹ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ಟಿಕೆಟ್ ದರ ಹೆಚ್ಚಿಸಿ 10 ದಿನ ಓಡಿಸುವುದಕ್ಕಿಂತಲೂ ಟಿಕೆಟ್ ದರ ಹೆಚ್ಚಿಸದೆ ತಿಂಗಳು ಸಿನಿಮಾ ಓಡಿಸಿದರೆ ಹೆಚ್ಚು ಲಾಭ ಆಗಲಿದೆ. ಇದು ‘ಇರುಮುಡಿ’ ಸಿನಿಮಾ ಮೂಲಕ ಈಗಾಗಲೇ ಸಾಬೀತಾಗಿದೆ. ಅಲ್ಲದೆ, ‘ರಾಮಾಯಣ’ ಸಿನಿಮಾನಲ್ಲಿ ಸ್ಥಳೀಯ ಸ್ಟಾರ್ ನಟರು ಅಂದರೆ ತೆಲುಗಿನ ಸ್ಟಾರ್ ನಟರುಗಳು ಇಲ್ಲವಾದ್ದರಿಂದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಕಡಿಮೆ ಟಿಕೆಟ್ ದರವನ್ನೇ ಇಡಬೇಕಾದ ಒತ್ತಡವೂ ವಿತರಕರಿಗೆ ಇದೆ.

ಇದನ್ನೂ ಓದಿ:ಸಾಯಿ ಕುಮಾರ್ ಮಗನ ಹೊಸ ಚಿತ್ರ ‘ಆದಿ ರುದ್ರ’: 5 ಭಾಷೆಗಳಲ್ಲಿ ಬರಲಿದೆ ಈ ಸಿನಿಮಾ

ದಿಲ್ ರಾಜು ಅವರು ‘ರಾಮಾಯಣ’ ಸಿನಿಮಾದ ವಿತರಣೆಯನ್ನು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಮಾಡಲಿದ್ದಾರೆ. ರಿಲೀಸ್​ಗೆ ಎರಡು ವಾರಗಳ ಮುಂಚೆಯೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭ ಮಾಡಲಾಗಿದೆ. ಪ್ರಸ್ತುತ ಹಿಂದಿ ಮತ್ತು ತೆಲುಗು ಆವೃತ್ತಿಗಳನ್ನು ಹೈದರಾಬಾದ್​​ನಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ‘ರಾಮಾಯಣ’ ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ನಟನೆ ಮಾಡಿದ್ದಾರೆ. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us