ಬಿಗ್ ಬಾಸ್ ಸ್ಪರ್ಧಿ, ನಟಿ ವನಿತಾ ವಿಜಯ್ಕುಮಾರ್ ಅವರು ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿ ಆಗುತ್ತಿರುತ್ತಾರೆ. ಈಗಾಗಲೇ ಅವರು ಮೂರು ಮದುವೆ ಆಗಿದ್ದು, ಮೂರೂ ಸಂಬಂಧಗಳು ಮುರಿದು ಬಿದ್ದಿವೆ. ಹೀಗಿರುವಾಗಲೇ ಅವರು ನಾಲ್ಕನೇ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ಕಾರಣವಾಗಿದ್ದು ಒಂದು ಫೋಟೋ. ಶೂಟಿಂಗ್ನಲ್ಲಿ ಬರುವ ಮದುವೆ ದೃಶ್ಯದ ಫೋಟೋ ಇಟ್ಟುಕೊಂಡು ವನಿತಾ ನಾಲ್ಕನೇ ಮದುವೆ ಆಗಿದ್ದಾರೆ ಎಂದು ಅನೇಕರು ಬಿಂಬಿಸಿದ್ದರು. ಇದಕ್ಕೆ ಅವರು ಈಗ ತಿರುಗೇಟು ನೀಡಿದ್ದಾರೆ.
ವನಿತಾ ವಿಜಯ್ಕುಮಾರ್ 2007ರಲ್ಲಿ ಆಕಾಶ್ ಹಾಗೂ 2010ರಲ್ಲಿ ಆನಂದ್ ರಾಜ್ ಜತೆ ವಿಚ್ಛೇದನ ಪಡೆದುಕೊಂಡಿದ್ದರು. ಕಳೆದ ವರ್ಷ ಜೂನ್ 27ರಂದು ಪೀಟರ್ ಪೌಲ್ ಜತೆ ಅವರು ಮದುವೆ ಆಗಿದ್ದರು. ಪೀಟರ್ ಪೌಲ್ಗೆ ಆಗಲೇ ವಿವಾಹ ಆಗಿತ್ತು. ಪೀಟರ್ ಮೊದಲನೇ ಪತ್ನಿ ಜಗಳ ತೆಗೆದಿದ್ದರು. ‘ನನಗೆ ವಿಚ್ಛೇದನ ನೀಡದೇ ನನ್ನ ಪತಿ ಎರಡನೇ ಮದುವೆ ಆಗಿದ್ದಾನೆ. ಹೀಗಾಗಿ, ಆತನ ಎರಡನೇ ಮದುವೆಗೆ ಕಾನೂನಿನಲ್ಲಿ ಮನ್ನಣೆ ಇಲ್ಲ’ ಎಂದು ಅವರ ಪತ್ನಿ ವಾದಿಸಿದ್ದರು. ಪೀಟರ್ ಹೆಚ್ಚಾಗಿ ಕುಡಿಯುತ್ತಿದ್ದ. ಕೆಲ ಸಮಯ ಇದನ್ನು ವನಿತಾ ಸಹಿಸಿಕೊಂಡರು. ಕೊನೆಗೆ ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರೂ ಬೇರೆ ಆದರು. ಈ ಮೂಲಕ ವನಿತಾ ಮೂರನೇ ಸಂಬಂಧವೂ ಮುರಿದು ಬಿದ್ದಿತ್ತು.
ಇತ್ತೀಚೆಗೆ ಹಾಸ್ಯ ನಟ ಶ್ರೀನಿವಾಸನ್ ಜೊತೆ ವನಿತಾ ಹಾರ ಬದಲಾಯಿಸಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿತ್ತು. ಇದು ಅವರು ನಟಿಸಿರುವ ಹೊಸ ಸಿನಿಮಾದ ಫೋಟೋ ಎಂಬುದು ನಂತರದಲ್ಲಿ ಗೊತ್ತಾಗಿತ್ತು. ಸಂದರ್ಶನವೊಂದರಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಇದಕ್ಕೆ ವನಿತಾ ಖಾರವಾಗಿ ಉತ್ತರಿಸಿದ್ದಾರೆ. ‘ನಾನು ನಾಲ್ಕಲ್ಲ, ನಲವತ್ತು ಬಾರಿ ಮದುವೆ ಆಗುತ್ತೇನೆ’ ಎಂದಿದ್ದಾರೆ. ನಂತರ ‘ನಾನು ಸಿಟ್ಟಲ್ಲಿ ಆ ರೀತಿ ಹೇಳಿದ್ದೇನೆ ಅಷ್ಟೆ. ಆ ರೀತಿಯ ಆಲೋಚನೆ ಇಲ್ಲ’ ಎಂದು ಅವರು ನಕ್ಕಿದ್ದಾರೆ.
ವನಿತಾ ‘ಬಿಗ್ ಬಾಸ್ ಜೋಡಿಗಳ್’ ಶೋನಲ್ಲಿ ಸ್ಪರ್ಧಿಯಾಗಿದ್ದರು. ಇದರ ಜತೆಗೆ ಅವರು ತಮ್ಮ ಟಿವಿ ಶೋ ಹಾಗೂ ಯೂಟ್ಯೂಬ್ ಚಾನೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್
Published On - 3:55 pm, Fri, 20 August 21