ಬಾಲಿವುಡ್ನಲ್ಲಿ ನುಸ್ರತ್ ಬರುಚಾ ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ಸೋನು ಕೆ ಟಿಟ್ಟೂ ಕಿ ಸ್ವೀಟಿ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದಾರೆ. ಹಾಗಂತ ನಿಜ ಜೀವನದಲ್ಲಲ್ಲ. ಅವರ ಮುಂದಿನ ಚಿತ್ರದಲ್ಲಿ ಹೀಗೊಂದು ಭಿನ್ನ ಪಾತ್ರವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ರಾಜ್ ಶಾಂಡಿಲ್ಯ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನುಸ್ರತ್ ಬರುಚಾ ನಟಿಸುತ್ತಿದ್ದಾರೆ. ಜನ್ಹಿತ್ ಮೆ ಜಾರಿ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದೆ. ಈ ಚಿತ್ರಕ್ಕಾಗಿ ನುಸ್ರತ್ ಈ ಹೊಸ ಅವತಾರ ತಾಳಿದ್ದಾರಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಈ ಬಗ್ಗೆ ಸಿನಿಮಾ ನಿರ್ದೇಶಕ ಶಾಂಡಿಲ್ಯ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ‘ಯುವತಿಯೊಬ್ಬಳು ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೆಲ್ಸ್ ಎಕ್ಸಿಕ್ಯೂಟಿವ್ ಜಾಬ್ ಸಿಗಲಿದೆ. ಪ್ರತಿ ಮೆಡಿಕಲ್ ಸ್ಟೋರ್ಗೆ ಹೋಗಿ ಕಾಂಡೋಮ್ ಮಾರುವ ಕೆಲಸ ಕಥಾ ನಾಯಕಿಯದ್ದು. ಇಡೀ ಚಿತ್ರದಲ್ಲಿ ಇದುವೇ ಹೈಲೈಟ್. ಸಿನಿಮಾ ನೋಡಿದ ಪ್ರತಿಯೊಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ’ ಎಂದಿದ್ದಾರೆ ಅವರು.
ಈ ಸಿನಿಮಾದ ಶೂಟಿಂಗ್ ಏಪ್ರಿಲ್ನಲ್ಲಿ ಆರಂಭವಾಗಬೇಕಿತ್ತು. ಆದರೆ, ಕೊವಿಡ್ ಕಾರಣಕ್ಕೆ ಸಿನಿಮಾ ಶೂಟಿಂಗ್ ವಿಳಂಬವಾಗುತ್ತಿದೆ. ಕೊವಿಡ್ ಎರಡನೇ ಅಲೇ ಜೋರಿರುವುದರಿಂದ ಸಿನಿಮಾ ಶೂಟಿಂಗ್ಗೆ ಅನೇಕ ರಾಜ್ಯಗಳು ತಡೆ ನೀಡಿವೆ. ಮಹಾರಾಷ್ಟ್ರ ಕೂಡ ಇದೇ ನಿಯಮ ಜಾರಿಗೆ ತಂದಿದೆ. ಹೀಗಾಗಿ, ಶೂಟಿಂಗ್ಗೆ ಅವಕಾಶ ನೀಡಿದ ನಂತರ ಚಿತ್ರದ ಶೂಟಿಂಗ್ ನಡೆಯಲಿದೆ.
ಅಕ್ಷಯ್ ಕುಮಾರ್ ನಟನೆಯ ರಾಮ್ಸೇತು ಸಿನಿಮಾದಲ್ಲಿ ನುಸ್ರತ್ ಬರೂಚಾ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚೋರಿ ಸಿನಿಮಾದಲ್ಲೂ ನುಸ್ರತ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರ ನಟನೆಯ ಸಿನಿಮಾಗಳು ನೆಟ್ಫ್ಲಿಕ್ ಹಾಗೂ ಅಮೆಜಾನ್ ಪ್ರೈಂನಲ್ಲಿ ತೆರೆಕಾಣುತ್ತಿವೆ.
ಇದನ್ನೂ ಓದಿ: ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ಅಪಚಾರ; ಕೃತ್ಯ ಎಸಗಿದವರಿಗೆ ಎದುರಾಯಿತು ಸಂಕಷ್ಟ
ಇದು ಸಾವೋ ಅಥವಾ ಕೊಲೆಯೋ? ಬೆಂಗಳೂರಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ ಬಾಲಿವುಡ್ ನಟಿ