‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ

‘ತಮ್ಮ ಮನೆಯವರಿಗೆ ಮುಖ ತೋರಿಸಿಲ್ಲ’ ಎಂಬ ವಿಚಾರ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಸೋನು ಗೌಡಗೆ ಎಲ್ಲರೂ ಬೆಂಬಲ ನೀಡಿದ್ದಾರೆ.

‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
ಸೋನು
Edited By:

Updated on: Aug 08, 2022 | 2:41 PM

ಸೋಶಿಯಲ್ ಮೀಡಿಯಾ (Social Media) ಮೂಲಕ ಸಾಕಷ್ಟು ಖ್ಯಾತಿ ಪಡೆದ ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಒಟಿಟಿ ಕನ್ನಡ’ಕ್ಕೆ ಕಾಲಿಟ್ಟಿದ್ದಾರೆ. ಅವರ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಕೆಲವರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆದರೆ, ಬಿಗ್ ಬಾಸ್ ವೇದಿಕೆ ಮೂಲಕ ಸೋನು ಗೌಡ ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ತಮ್ಮ ಮನೆಯವರಿಗೆ ಮುಖ ತೋರಿಸಿಲ್ಲ’ ಎಂಬ ವಿಚಾರ ನೆನೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಸೋನು ಗೌಡಗೆ (Sonu Gowda) ಎಲ್ಲರೂ ಬೆಂಬಲ ನೀಡಿದ್ದಾರೆ.

ಸೋನು ಗೌಡ ಅವರು ಓರ್ವನ ಜತೆ ಪ್ರೀತಿಯಲ್ಲಿ ಇದ್ದರು. ಆತನೇ ಮೊದಲು ಸೋನುಗೆ ಪ್ರಪೋಸ್ ಮಾಡಿದ್ದ. ಸೋನು ಜತೆ ಚೆನ್ನಾಗಿಯೇ ಇದ್ದ. ಒಂದು ದಿನ ವಿಡಿಯೋ ಕಾಲ್ ಮಾಡುವಂತೆ ಸೋನುಗೆ ದುಂಬಾಲು ಬಿದ್ದ. ಆತನನ್ನು ನಂಬಿ ಸೋನು ವಿಡಿಯೋ ಕಾಲ್ ಮಾಡಿದ್ದರು. ಈ ವಿಡಿಯೋವನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಆತ ಲೀಕ್ ಮಾಡಿದ್ದ. ಇದರಿಂದ ಸೋನುಗೆ ತೀವ್ರ ಮುಜುಗರ ಆಗಿದೆ. ಮನೆಯವರ ಮುಂದೆ ಅವರು ತಲೆತಗ್ಗಿಸುವಂತೆ ಆಗಿದೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡುತ್ತಾ ಅವರು ಕಣ್ಣೀರು ಹಾಕಿದ್ದಾರೆ.

‘ನಮ್ಮ ಮಾನ ಮರ್ಯಾದೆ ತೆಗೆದೆ ಎಂದು ಅಮ್ಮ ಕರೆ ಮಾಡಿ ಬೈದರು. ವಿಡಿಯೋ ಲೀಕ್ ಆಗಿ ಆರು ತಿಂಗಳು ಆಗಿದೆ. ಆದರೂ ಅಮ್ಮನಿಗೆ ಮುಖ ತೋರಿಸಲು ಆಗುತ್ತಿಲ್ಲ. ಅಂತಹ ಅಮ್ಮ ನಂಗೆ ಸಿಕ್ಕಿರೋದು ನನ್ನ ಅದೃಷ್ಟ. ನಾನು ಸತ್ತು ಹೋಗಬೇಕು ಎಂದು ನನಗೆ ಅನಿಸಿತು. ಆದರೆ, ನಾನು ತಪ್ಪು ಮಾಡಿಲ್ಲ. ನನ್ನ ನಂಬಿಕೆಗೆ ಮೋಸ ಆಗಿದೆ ಅಷ್ಟೇ ಅನಿಸಿತು. ಹಾಗಾಗಿ ಸಾಯುವ ನಿರ್ಧಾರದಿಂದ ಹೊರ ಬಂದೆ. ನಾನು ಇಲ್ಲಿ ನಿಂತುಕೊಂಡು ಕ್ಷಮೆ ಕೇಳುತ್ತೇನೆ. ಅಮ್ಮ ಸಾರಿ’ ಎಂದಿದ್ದಾರೆ ಸೋನು ಗೌಡ.

ಇದನ್ನೂ ಓದಿ
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ
Sonu Srinivas Gowda: ‘ಸೋನು ವಿಡಿಯೋ ಲೀಕ್​ ಆಗಿದ್ದರಲ್ಲಿ ಅವಳ ತಪ್ಪಿಲ್ಲ’: ಸಾನ್ಯಾ ಅಯ್ಯರ್​ ತಾಯಿ ದೀಪಾ ಹೀಗೆ ಹೇಳಿದ್ದೇಕೆ?
Bigg Boss Kannada: ‘ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ’: ಬಿಗ್​ ಬಾಸ್​ ಸ್ಪರ್ಧಿಗೆ ಗುರೂಜಿ ಮಾತಿನ ಡಿಚ್ಚಿ

ಇದನ್ನೂ ಓದಿ: Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ

ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಅವರು ಹಲವು ವಿಚಾರಗಳಲ್ಲಿ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ತಲೆಯಮೇಲೆ ನಾಮಿನೇಷನ್​​ ತೂಗುಗತ್ತಿ ಇದೆ. ಅದರಿಂದ ಅವರು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Web

TV9 Kannada

Read More
Loading...
Unable to load recommendations.
Follow Us