‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಎರಡನೇ ವಾರದ ಎಲಿಮಿನೇಷನ್ಗೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಆ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದೇ ಅರ್ಜುನ್ ರಮೇಶ್ (Arjun Ramesh) ಅವರಿಗೆ ಮುಳುವಾಗಿದೆ.
ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಏಟಾಗಿತ್ತು. ಅವರು ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ಆದಾಗ್ಯೂ ಅವರಿಗೆ ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಈ ವಾರ ಜಶ್ವಂತ್ ಅವರು ಬಿಗ್ ಬಾಸ್ನ ಕ್ಯಾಪ್ಟನ್ ಆಗಿದ್ದಾರೆ. ಈ ಕಾರಣಕ್ಕೆ ಅರ್ಜುನ್ ಅವರು ಟಾಸ್ಕ್ಗಳನ್ನು ಆಡಲೇಬೇಕಿದೆ. ಆದರೆ, ಗಾಯದ ಸಮಸ್ಯೆ ಇಟ್ಟುಕೊಂಡು ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಅರ್ಜುನ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.
ಕಳೆದ ವಾರ ಕಿರಣ್ ಯೋಗೇಶ್ವರ್ ಅವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದರು. ಇದಲ್ಲದೆ, ಲೋಕೇಶ್ ಅವರು ಗಾಯಕ್ಕೆ ತುತ್ತಾಗಿ ಮನೆಯಿಂದ ಹೊರ ಬಿದ್ದಿದ್ದರು. ಈ ಮೂಲಕ ಕಳೆದ ವಾರವಢ ಇಬ್ಬರು ಔಟ್ ಆಗಿದ್ದರು. ಈ ವಾರ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಿತ್ತು. ಆದರೆ, ಅರ್ಜುನ್ ಜತೆ ಮತ್ತೊಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣದಿಂದ ಈ ವಾರವೂ ಇಬ್ಬರು ಮನೆಯಿಂದ ಹೊರಹೋಗುವ ಸಾಧ್ಯತೆ ದಟ್ಟವಾಗಿದೆ. ಹಾಗಾದಲ್ಲಿ ಮನೆಯ ಸದಸ್ಯರ ಸಂಖ್ಯೆ 12ಕ್ಕೆ ಇಳಿಕೆ ಆಗಲಿದೆ.
ಇದನ್ನೂ ಓದಿ: ಕ್ಲೀನ್ ಶೇವ್ ಲುಕ್ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ
‘ಬಿಗ್ ಬಾಸ್ ಒಟಿಟಿ’ ಕೇವಲ ಆರು ವಾರ ಇರಲಿದೆ. ಈಗಾಗಲೇ ಎರಡು ವಾರ ಪೂರ್ಣಗೊಂಡಿದೆ. ಮುಂದಿನ ನಾಲ್ಕು ವಾರಗಳ ಕಾಲ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಇರಲಿದೆ. ಕೊನೆಯಲ್ಲಿ ಉಳಿದುಕೊಳ್ಳುವ ಕೆಲ ಸ್ಪರ್ಧಿಗಳು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಬಡ್ತಿ ಪಡೆಯುತ್ತಾರೆ.
Published On - 5:48 pm, Sat, 20 August 22