
ದಕ್ಷಿಣ ಭಾರತದ ಸಿನಿಮಾಗಳು ವಿವಾದಗಳಿಗೆ ಈಡಾಗುವುದು ಬಹಳ ಅಪರೂಪ. ದಕ್ಷಿಣದಲ್ಲಿ ಸಾಮಾನ್ಯವಾಗಿ ಕಮರ್ಶಿಯಲ್ ಮಾಸ್ ಎಂಟರ್ಟೈನರ್ ಅಥವಾ ಕುಟುಂಬವೆಲ್ಲ ಕೂತು ನೋಡುವ ಸಿನಿಮಾಗಳನ್ನೇ ನಿರ್ಮಿಸುವುದು ಹೆಚ್ಚು. ಆದರೆ ಇತ್ತೀಚೆಗಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ಒಂದು ಸಿನಿಮಾದ ವಿಷಯದ ಕಾರಣಕ್ಕೆ ಸುದ್ದಿಯಾಗಿತ್ತು. ಕೆಲವರು ಸಿನಿಮಾದ ವಿರುದ್ಧ ಪ್ರತಿಭಟನೆಯನ್ನೂ ಮಾಡಿದರು.ಕೆಲರು ಹೇಳಿಕೆ ನೀಡಿ, ಸಿನಿಮಾ ಅನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು. ಆ ಸಿನಿಮಾ ‘ಡೊರತಿ’. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
ಕೀರ್ತಿ ಸುರೇಶ್, ರಿಷಿಕಾಂತ್ ಮತ್ತು ಸನಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಿರುವ ತಮಿಳಿನ ‘ಡೊರೊತಿ’ ಕೆಲ ವಾರಗಳ ಹಿಂದ ಸೆಪ್ಟೆಂಬರ್ 25ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು. ಸಿನಿಮಾ ಸಾಕಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಿದ್ದು, ಸಿನಿಮಾನಲ್ಲಿ ಎಲ್ಜಿಬಿಟಿಕ್ಯು ಹಕ್ಕುಗಳ ಕುರಿತಾದ ಕತೆಯಿತ್ತು. ಇದೇ ಕಾರಣಕ್ಕೆ ಈ ಸಿನಿಮಾ ಮೆಚ್ಚುಗೆ ಗಳಿಸುವ ಜೊತೆಗೆ ಸಾಕಷ್ಟು ಟೀಕೆ, ಪ್ರತಿಭಟನೆಯನ್ನೂ ಎದುರಿಸಬೇಕಾಯ್ತು. ಚಿತ್ರಮಂದಿರದಲ್ಲಿ ಸಾಧಾರಣ ಯಶಸ್ಸು ಕಂಡ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಒಟಿಟಿಯಲ್ಲಿ ಬಿಡುಗಡೆಯಾಗಲು ದಿನಾಂಕ ಕೂಡಿಬಂದಿದೆ. ಈ ಚಿತ್ರವು ಶೀಘ್ರದಲ್ಲೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ನೆಟ್ಫ್ಲಿಕ್ಸ್ನ ಅಧಿಕೃತ ವೆಬ್ಸೈಟ್ ಪ್ರಕಾರ, ‘ಡೊರೊತಿ’ ಸಿನಿಮಾವು 2026ರ ಅಕ್ಟೋಬರ್ 23 ರಂದು ಡಿಜಿಟಲ್ ಲೋಕಕ್ಕೆ ಕಾಲಿಡಲಿದೆ. ಈ ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಷೆಗಳಲ್ಲಿ ಸ್ಟ್ರೀಮಿಂಗ್ ಲಭ್ಯವಾಗಲಿದ್ದು, ಪ್ರೇಕ್ಷಕರು ಬಹುಭಾಷೆಗಳಲ್ಲಿ ಈ ಕಥೆಯನ್ನು ವೀಕ್ಷಿಸಬಹುದಾಗಿದೆ. ಚಿತ್ರವು ‘ಎ’ (A) ಪ್ರಮಾಣಪತ್ರವನ್ನು ಪಡೆದುಕೊಂಡಿದೆ, ಆದ್ದರಿಂದ ವೀಕ್ಷಕರು ಇದನ್ನು ವೀಕ್ಷಿಸುವ ಮೊದಲು ವಯಸ್ಕರ ಪ್ರಮಾಣಪತ್ರದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ:‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು
ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದ ಈ ಸಿನಿಮಾ ಬೋಲ್ಡ್ ಆದ ಕತೆಯನ್ನು ಒಳಗೊಂಡಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಚೆನ್ನೈನಲ್ಲಿ ಕೆಲವರು ಸಿನಿಮಾದ ವಿರುದ್ಧ ಪ್ರತಿಭಟನೆಯನ್ನು ಸಹ ನಡೆಸಿದರು. ಅಂತೆಯೇ ಕೆಲವರು ಸಿನಿಮಾ ಅನ್ನು ಕೊಂಡಾಡಿದ್ದೂ ಸಹ ಇದೆ. ಕನ್ನಡದ ಸ್ಟಾರ್ ನಟ ಉಪೇಂದ್ರ ಅವರು ‘ಡೋರತಿ’ ಸಿನಿಮಾ ವೀಕ್ಷಿಸಿ, ಸಿನಿಮಾದ ಕತೆಯನ್ನು ಮತ್ತು ಕಾರ್ತಿಕ್ ಸುಬ್ಬರಾಜು ಅವರನ್ನು ಹೊಗಳಿದರು. ಇನನೂ ಕೆಲವರು ಸ್ಟಾರ್ ನಟ ಮತ್ತು ನಟಿಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ