ಅಮೇಜಾನ್ ಪ್ರೈಮ್​ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ ‘ಜೈಲರ್’; ಒಟಿಟಿ ರಿಲೀಸ್ ದಿನಾಂಕ ಘೋಷಣೆ

‘ಜೈಲರ್’ ಸಿನಿಮಾ ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿತು. ಈ ಚಿತ್ರದ ‘ಕಾವಾಲಾ..’ ಹಾಡು ಕೂಡ ಸಖತ್ ಸದ್ದು ಮಾಡಿತ್ತು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಕಮಾಲ್ ಮಾಡಿತು. ರಜನಿಕಾಂತ್ ನಟನೆಗೆ ಅಭಿಮಾನಿಗಳು ಫಿದಾ ಆದರು. ಈಗ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ರಿವೀಲ್ ಆಗಿದೆ.

ಅಮೇಜಾನ್ ಪ್ರೈಮ್​ ವಿಡಿಯೋ ಮೂಲಕ ಪ್ರಸಾರ ಕಾಣಲಿದೆ ‘ಜೈಲರ್’; ಒಟಿಟಿ ರಿಲೀಸ್ ದಿನಾಂಕ ಘೋಷಣೆ
ರಜನಿಕಾಂತ್

Updated on: Sep 02, 2023 | 11:45 AM

ಆಗಸ್ಟ್ 10ರಂದು ರಿಲೀಸ್ ಆದ ‘ಜೈಲರ್’ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಮೂಲಕ ರಜನಿಕಾಂತ್ ಅವರ ವೃತ್ತಿ ಜೀವನದಲ್ಲಿ ಮತ್ತೊಂದು ಹಿಟ್ ಸಿನಿಮಾ ಸೇರ್ಪಡೆ ಆಗಿದೆ. ಈಗ ‘ಜೈಲರ್’ (Jailer Movie) ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಮೂಲಕ ಚಿತ್ರ ಪ್ರಸಾರ ಕಾಣಲಿದೆ. ಚಿತ್ರವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಕಾದವರಿಗೆ ಈ ಘೋಷಣೆ ಖುಷಿ ನೀಡಿದೆ.

‘ಜೈಲರ್’ ಸಿನಿಮಾ ಟೀಸರ್ ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿತು. ಈ ಚಿತ್ರದ ‘ಕಾವಾಲಾ..’ ಹಾಡು ಕೂಡ ಸಖತ್ ಸದ್ದು ಮಾಡಿತ್ತು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಕಮಾಲ್ ಮಾಡಿತು. ರಜನಿಕಾಂತ್ ನಟನೆಗೆ ಅಭಿಮಾನಿಗಳು ಫಿದಾ ಆದರು. 72ರ ವಯಸ್ಸಿನಲ್ಲೂ ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರ ಎನರ್ಜಿಗೆ ಫ್ಯಾನ್ಸ್ ಮಾರು ಹೋಗಿದ್ದಾರೆ. ‘ಜೈಲರ್’ ಚಿತ್ರ ಸೆಪ್ಟೆಂಬರ್ 7ರಂದು ಪ್ರಸಾರ ಕಾಣಲಿದೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಮಾಹಿತಿ ನೀಡಿದೆ.

‘ಸನ್ ಪಿಕ್ಚರ್ಸ್’ ‘ಜೈಲರ್’ ಸಿನಿಮಾ ನಿರ್ಮಾಣ ಮಾಡಿದೆ. ಈ ಕಾರಣಕ್ಕೆ ‘ಸನ್ ನೆಕ್ಸ್ಟ್​’ ಒಟಿಟಿ ಮೂಲಕ ಈ ಸಿನಿಮಾ ರಿಲೀಸ್ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ದೊಡ್ಡ ಮೊತ್ತಕ್ಕೆ ‘ಜೈಲರ್’ ಚಿತ್ರದ ಒಟಿಟಿ ಹಕ್ಕನ್ನು ಪಡೆದಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ಪ್ರಸಾರ ಕಾಣಲಿದೆ.

ಇದನ್ನೂ ಓದಿ: ‘ಜೈಲರ್’ ಗೆದ್ದ ಖುಷಿಯಲ್ಲಿ ರಜನಿಗೆ 100 ಕೋಟಿ ರೂ. ಚೆಕ್ ಕೊಟ್ಟ ಕಲಾನಿಧಿ ಮಾರನ್; ಒಟ್ಟೂ ಸಂಭಾವನೆ ಎಷ್ಟು?

‘ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಇನ್ನೂ ಅನೇಕ ಕಲಾವಿದರು ನಟಿಸಿದ್ದಾರೆ. ಶಿವರಾಜ್​ಕುಮಾರ್ ಮಾಡಿರುವ ನರಸಿಂಹ ಹೆಸರಿನ ಅತಿಥಿ ಪಾತ್ರ ಗಮನ ಸೆಳೆದಿದೆ. ಮೋಹನ್​ಲಾಲ್, ಜಾಕಿ ಶ್ರಾಫ್, ತಮನ್ನಾ ಮಾಡಿರುವ ಪಾತ್ರಗಳು ಕೂಡ ಗಮನ ಸೆಳೆದಿವೆ. ಯೋಗಿ ಬಾಬು ಕಾಮಿಡಿ ಜನರಿಗೆ ಇಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ