‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹಲವರ ಮಧ್ಯೆ ಟಾಸ್ಕ್ ವಿಚಾರಕ್ಕೆ ಕಿರಿಕ್ಗಳು ನಡೆಯುತ್ತಿವೆ. ಈ ಬಾರಿ ಜಯಶ್ರೀ ಆರಾಧ್ಯ (Jayashree Aradhya) ಅವರ ಸರದಿ. ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಅತ್ತಿದ್ದಾರೆ. ತಂಡದವರಿಂದಲೇ ಮೋಸ ಆಗಿದೆ ಎಂಬ ಆರೋಪ ಅವರ ಕಡೆಯಿಂದ ಬಂದಿದೆ. ತಂಡದ ಕ್ಯಾಪ್ಟನ್ ನಂದು ವಿರುದ್ಧವೇ ಜಯಶ್ರೀ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ‘ಇನ್ನು ಯಾವುದೇ ಆಟ ಆಡಲ್ಲ’ ಎಂದು ಶಪಥ ಮಾಡಿದ್ದಾರೆ. ಇದರಿಂದ ಅವರಿಗೆ ತೊಂದರೆ ಎದುರಾಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
‘ಬಿಗ್ ಬಾಸ್’ನಲ್ಲಿ ಈ ವಾರ ಎರಡು ಟೀಂ ಮಾಡಲಾಗಿತ್ತು. ಒಂದು ಟೀಂಗೆ ನಂದು ನಾಯಕಿ. ಮತ್ತೊಂದು ಟೀಂಗೆ ಸೋಮಣ್ಣ ಕ್ಯಾಪ್ಟನ್ ಆಗಿದ್ದರು. ಒಂದು ಟಾಸ್ಕ್ನಲ್ಲಿ ನಂದು, ಜಶ್ವಂತ್ ಹಾಗೂ ಚೈತ್ರಾ ಟಾಸ್ಕ್ ಆಡಲು ಇಳಿದರು. ಈ ಟಾಸ್ಕ್ಗೆ ನಾನು ಕೂಡ ಬರುತ್ತೀನಿ ಎಂದರು ಜಯಶ್ರೀ. ಆದರೆ, ಈ ಟಾಸ್ಕ್ನಲ್ಲಿ ಅವರಿಗೆ ಅವಕಾಶ ನೀಡಿಲ್ಲ ನಂದು. ಈ ವಿಚಾರಕ್ಕೆ ಜಯಶ್ರೀ ಸಿಟ್ಟಾಗಿದ್ದಾರೆ.
‘ಎಲ್ಲದೂ ನಿಮ್ಮದೇ ನಿರ್ಧಾರ ಎಂದಾದರೆ, ಟೀಂ ಎಂದು ಏಕೆ ಇಟ್ಟುಕೊಂಡಿದ್ದೀರಾ? ನನ್ನನ್ನು ಏಕೆ ಬಿಟ್ಟಿದ್ದೀರಾ? ಹೀಗೆ ಅಂತಾದರೆ ನಾನು ಇನ್ಮುಂದೆ ಆಟ ಆಡಲ್ಲ’ ಎಂದು ಘೋಷಿಸಿದರು ಜಯಶ್ರೀ. ಈ ಚರ್ಚೆ ಎಲ್ಲಿಂದ ಎಲ್ಲಿಗೋ ತಲುಪಿತು. ಜಯಶ್ರೀ ಮಾತನ್ನು ಕೇಳಿ ಕ್ಯಾಪ್ಟನ್ ನಂದು ಸಿಟ್ಟಾದರು. ಮುಂದಿನ ಟಾಸ್ಕ್ಗೆ ಅವಕಾಶ ನೀಡುವ ಭರವಸೆ ಕೊಟ್ಟರೂ ಜಯಶ್ರೀ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೂ ಅವರ ಮನಸ್ಸು ಬದಲಾಯಿತು.
ಇದನ್ನೂ ಓದಿ: ಹೊರಗೆ ಟ್ರೋಲ್ ಆಗಿದ್ದ ಸೋನುಗೆ ಆ ಒಂದು ಕಾರಣಕ್ಕೆ ಬಿಗ್ ಬಾಸ್ನಲ್ಲಿ ಸಿಕ್ತು ಸಖತ್ ಮರ್ಯಾದೆ
ಈ ಬಾರಿಯ ನಾಮಿನೇಷನ್ ಲಿಸ್ಟ್ನಲ್ಲಿ ಜಯಶ್ರೀ ಇದ್ದಾರೆ. ಅವರಿಗೆ ತಮ್ಮ ಸಾಮರ್ಥ್ಯವನ್ನು ಪ್ರೂವ್ ಮಾಡಿಕೊಳ್ಳೋಕೆ ಒಂದು ಅವಕಾಶ ಬೇಕಿದೆ. ಆದರೆ, ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಜಗಳ ಆಡಿದ್ದರಿಂದ ಅವರಿಗೆ ಜನರಿಂದ ವೋಟ್ ಬೀಳುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡಿದೆ. ಒಂದೊಮ್ಮೆ ಕಡಿಮೆ ವೋಟ್ ಬಿದ್ದರೆ ಜಯಶ್ರೀ ಮನೆಯಿಂದ ಹೊರಹೋಗುವುದು ಖಚಿತವಾಗಲಿದೆ.
Published On - 3:01 pm, Thu, 18 August 22