Jio Cinema: ‘ಇನ್ಮುಂದೆ ಜಾಹೀರಾತು ಇರಲ್ಲ’; ಹೊಸ ಘೋಷಣೆ ಮಾಡಿದ ಜಿಯೋ ಸಿನಿಮಾ

|

Updated on: Apr 22, 2024 | 7:40 AM

ಜಿಯೋ ಸಿನಿಮಾ ಐಪಿಎಲ್​ನ ಉಚಿತವಾಗಿ ಪ್ರಸಾರ ಮಾಡುತ್ತಿದೆ. ಇದರಲ್ಲಿ ಮ್ಯಾಚ್ ವೀಕ್ಷಿಸುವಾಗ ಸಾಕಷ್ಟು ಜಾಹೀರಾತುಗಳು ಪ್ರಸಾರ ಕಾಣುತ್ತಿವೆ. ಇದರಿಂದ ಅನೇಕರು ಬೇಸತ್ತು ಹೋಗಿದ್ದಾರೆ. ಇದಕ್ಕಾಗಿಯೇ ಹೊಸ ಪ್ಲ್ಯಾನ್ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಡ್ವಟೈಸ್​ಮೆಂಟ್ ಮಾಡಿ ಬಿತ್ತರ ಮಾಡಲಾಗಿದೆ.

Jio Cinema: ‘ಇನ್ಮುಂದೆ ಜಾಹೀರಾತು ಇರಲ್ಲ’; ಹೊಸ ಘೋಷಣೆ ಮಾಡಿದ ಜಿಯೋ ಸಿನಿಮಾ
ಜಿಯೋ ಸಿನಿಮಾ
Follow us on

ಜಿಯೋ ಸಿನಿಮಾದಲ್ಲಿ (Jio Cinema) ಸದ್ಯ ಐಪಿಎಲ್ ಪ್ರಸಾರ ಆಗುತ್ತಿದೆ. ಆ್ಯಪ್​ನ ಒಮ್ಮೆ ಕ್ಲೋಸ್ ಮಾಡಿ ಮತ್ತೆ ಎಂಟ್ರಿ ಕೊಟ್ಟರೆ ಜಾಹೀರಾತು ಬರುತ್ತಿದೆ. ಸಿನಿಮಾ, ಧಾರಾವಾಹಿಗಳ ಮಧ್ಯೆ ಬರೋ ಜಾಹೀರಾತುಗಳಿಗಂತೂ ಲೆಕ್ಕವೇ ಇಲ್ಲ. ಈಗ ಇದಕ್ಕೆ ಜಿಯೋ ಸಿನಿಮಾ ಬ್ರೇಕ್ ಹಾಕುತ್ತಿದೆ. ಇದಕ್ಕಾಗಿ ನೀವು ಹಣ ಪಾವತಿ ಮಾಡಬೇಕು. ಈ ಬಗ್ಗೆ ಜಿಯೋ ಸಿನಿಮಾ ಘೋಷಣೆ ಮಾಡಿದೆ. ಏಪ್ರಿಲ್ 25ರಂದು ಹೊಸ ಪ್ಲ್ಯಾನ್ ಘೋಷಣೆ ಆಗಲಿದೆ.

ಸದ್ಯ ಜಿಯೋ ಸಿನಿಮಾ ಐಪಿಎಲ್​ನ ಉಚಿತವಾಗಿ ಪ್ರಸಾರ ಮಾಡುತ್ತಿದೆ. ಇದರಲ್ಲಿ ಮ್ಯಾಚ್ ವೀಕ್ಷಿಸುವಾಗ ಸಾಕಷ್ಟು ಜಾಹೀರಾತುಗಳು ಬರುತ್ತಿವೆ. ಇದರಿಂದ ಅನೇಕರು ಬೇಸತ್ತು ಹೋಗಿದ್ದಾರೆ. ಇದಕ್ಕಾಗಿಯೇ ಹೊಸ ಪ್ಲ್ಯಾನ್ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಡ್ವಟೈಸ್​ಮೆಂಟ್ ಮಾಡಿ ಬಿತ್ತರ ಮಾಡಲಾಗಿದೆ.

‘ಇಂದಿನ ಪ್ಲ್ಯಾನ್ ಏನು?’ ಎಂಬ ಧ್ವನಿ ಬರುತ್ತದೆ. ಇದಕ್ಕೆ ಅಲ್ಲಿರೋ ಜೋಡಿ ‘ಜಾಹೀರಾತು ನೋಡುತ್ತೇವೆ, ಸರಣಿ ಜಾಹೀರಾತು’ ಎಂದು ಉತ್ತರಿಸುತ್ತಾರೆ. ಅಸಲಿಗೆ ಇದು ಜಿಯೋ ಸಿನಿಮಾ ನೋಡುತ್ತಲೇ ಅವರು ಉತ್ತರಿಸಿದಂತಿತ್ತು. ‘ಏಪ್ರಿಲ್ 25ರಿಂದ ನಿಮ್ಮ ಪ್ಲ್ಯಾನ್ ಬದಲಿಸುತ್ತೇವೆ’ ಎನ್ನುವ ಧ್ವನಿ ಬರುತ್ತದೆ. ಸದ್ಯ ಪ್ಲ್ಯಾನ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ.

ಸದ್ಯ ಜಿಯೋ ಸಿನಿಮಾದ ವರ್ಷದ ಸಬ್​ಸ್ಕ್ರಿಪ್ಶನ್ 999 ರೂಪಾಯಿ ಇದೆ. ತಿಂಗಳಿಗೆ 99 ರೂಪಾಯಿ ಕೊಟ್ಟು ನೀವು ಪ್ಲ್ಯಾನ್ ಖರೀದಿಸಬಹುದು. ‘ಜಿಯೋ ಸಿನಿಮಾ ಬೆಸ್ಟ್ ಆಫ್ ಹಾಲಿವುಡ್’ ಪ್ಲ್ಯಾನ್ ಅಡಿಯಲ್ಲಿ ನಿಮಗೆ ಎಚ್​​ಬಿಒನಲ್ಲಿರುವ ಕಂಟೆಂಟ್​ಗಳು ಸಿಗುತ್ತವೆ. ಸದ್ಯ ನೀವು ನಾಲ್ಕು ಡಿವೈಸ್​ಗಳಲ್ಲಿ ಜಿಯೋ ಸಿನಿಮಾ ಬಳಕೆ ಮಾಡಬಹುದು.

ಈಗಿರುವ ಮೊತ್ತವನ್ನು ಇಳಿಕೆ ಮಾಡಲಾಗುತ್ತದೆಯೇ ಅಥವಾ ಮತ್ತಷ್ಟು ಹೆಚ್ಚಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಸಬ್​ಸ್ಕ್ರೈಬ್ ಮಾಡಿಕೊಳ್ಳದೇ ಹೋದಲ್ಲಿ ಹೆಚ್ಚೆಚ್ಚು ಜಾಹೀರಾತುಗಳನ್ನು ನೀವು ನೋಡಬೇಕಾಗುತ್ತದೆ. ಈ ಬಗ್ಗೆ ಏಪ್ರಿಲ್ 25ರಂದು ಸಂಪೂರ್ಣ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ಜಿಯೋ ಸಿನಿಮಾಕ್ಕೆ ಬಂತು ಏಳು ಆಸ್ಕರ್ ಗೆದ್ದ ‘ಆಪನ್​ಹೈಮರ್’

ಈಗಾಗಲೇ ಎಲ್ಲಾ ಒಟಿಟಿ ಪ್ಲ್ಯಾಟ್​ಫಾರ್ಮ್​ಗಳು ಒಂದು ವರ್ಷದ ಪ್ಲ್ಯಾನ್​ಗೆ ಸರಾಸರಿ ಒಂದು ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿವೆ. ಈಗ ಜಿಯೋ ಸಿನಿಮಾ ಕೂಡ ಪ್ಲ್ಯಾನ್ ಆಫರ್ ನೀಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.