ಐಪಿಎಲ್ ಪ್ರಿಯರಿಗೆ ಜಿಯೋ-ಏರ್ಟೆಲ್ನಿಂದ ಧಮಾಕ ಆಫರ್: ವಿಶೇಷ ರೀಚಾರ್ಜ್ ಯೋಜನೆ ಘೋಷಣೆ
IPL 2024 Prepaid Data Plan: ಐಪಿಎಲ್ ಪಂದ್ಯವನ್ನು ಹೈ ಡೆಫಿನಿಷನ್‌ನಲ್ಲಿ ನೋಡುವಾಗ ಹೆಚ್ಚು ಡೇಟಾ ವೆಚ್ಚವಾಗುತ್ತದೆ. 4K ಸ್ಟ್ರೀಮಿಂಗ್‌ಗೆ ಪ್ರತಿ ಪಂದ್ಯಕ್ಕೆ 22GB ಗಿಂತ ಹೆಚ್ಚು ಅಗತ್ಯವಿದೆ. ಹಾಗಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಲು ವಿಶೇಷ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಿವೆ.
ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭವಾಗಿದೆ. ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಪಂದ್ಯಗಳನ್ನು ಲೈವ್ ಆಗಿ ಸ್ಮಾರ್ಟ್ಫೋನ್ ಮೂಲಕ ವೀಕ್ಷಿಸುತ್ತಿದ್ದಾರೆ. ಆದರೆ, ಬಳಕೆದಾರರ ಡೇಟಾ ಬೇಗನೆ ಖಾಲಿ ಆಗುತ್ತಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ಜಿಯೋ ಮತ್ತು ವೊಡಾಫೋನ್ ಐಡಿಯಾ ಐಪಿಎಲ್ ಪ್ರಿಯರಿಗೆ ವಿಶೇಷ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಿರುವುದಾಗಿ ಪ್ರಕಟಿಸಿದೆ. ಈ ಯೋಜನೆಗಳೊಂದಿಗೆ ಒಬ್ಬರು ತಮ್ಮ ದಿನದ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಬಹುದು.
ಐಪಿಎಲ್ ಪಂದ್ಯವನ್ನು ಹೈ ಡೆಫಿನಿಷನ್‌ನಲ್ಲಿ ನೋಡುವಾಗ ಹೆಚ್ಚು ಡೇಟಾ ವೆಚ್ಚವಾಗುತ್ತದೆ. 4K ಸ್ಟ್ರೀಮಿಂಗ್‌ಗೆ ಪ್ರತಿ ಪಂದ್ಯಕ್ಕೆ 22GB ಗಿಂತ ಹೆಚ್ಚು ಅಗತ್ಯವಿದೆ. ಹಾಗಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಲು ವಿಶೇಷ ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸಿವೆ. ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿರುವ ರೀಚಾರ್ಜ್ ಯೋಜನೆಗಳ ಕುರಿತು ಹೆಚ್ಚಿನ ವಿವರಗಳು ಇಲ್ಲಿದೆ.
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಬಿಡುಗಡೆ: ಬೆಲೆ ಬರೋಬ್ಬರಿ 70,990 ರೂ.
ಏರ್ಟೆಲ್ ಯೋಜನೆಗಳು
ಏರ್ಟೆಲ್ ರೂ. 699 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ದಿನಕ್ಕೆ 3GB ಯ 4G ಡೇಟಾದೊಂದಿಗೆ 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಏರ್ಟೆಲ್ ರೀಚಾರ್ಜ್ ಯೋಜನೆಯು IPL ಋತುವಿನ ಉದ್ದಕ್ಕೂ ತಡೆರಹಿತ ಸ್ಟ್ರೀಮಿಂಗ್ ಅನ್ನು ನೀಡುತ್ತದೆ. ಕಾಂಪ್ಲಿಮೆಂಟರಿಯಾಗಿ ಪ್ರೈಮ್ ವಿಡಿಯೋ ಚಂದಾದಾರಿಕೆ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಅನಿಯಮಿತ 5G ಡೇಟಾ ಪ್ರವೇಶದೊಂದಿಗೆ ಬರುತ್ತದೆ. ಇದರ ಜೊತೆಗೆ ಹೆಚ್ಚುವರಿ ಡೇಟಾ ಅಗತ್ಯವಿರುವವರು ಏರ್‌ಟೆಲ್ ರೂ. 29 ರಿಂದ ಡೇಟಾ ಟಾಪ್-ಅಪ್ ಯೋಜನೆಗಳನ್ನು ಆಯ್ಕೆ ಮಾಡಬಹುದು.
ಜಿಯೋ ಯೋಜನೆಗಳು
ಜಿಯೋ ರೂ. 444 ರೀಚಾರ್ಜ್ ಯೋಜನೆಯು 60 ದಿನಗಳ ಮಾನ್ಯತೆಯೊಂದಿಗೆ 100GB ಡೇಟಾದೊಂದಿಗೆ ಬರುತ್ತದೆ. ಆದರೆ ರೂ. 667 ರೀಚಾರ್ಜ್ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ 150GB ಡೇಟಾವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಜಿಯೋ ಫೆಸ್ಟಿವಲ್ ಆಫರ್ ರೂ. 999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಬಳಕೆದಾರರಿಗೆ ಲಭ್ಯವಿದೆ. ಈ ಯೋಜನೆಯು ದಿನಕ್ಕೆ 3GB ಯ 4G ಡೇಟಾವನ್ನು ಜೊತೆಗೆ ಅನಿಯಮಿತ 5G ಪ್ರವೇಶವನ್ನು ನೀಡುತ್ತದೆ. ಆದರೆ ಯೋಜನೆಯ ಮಾನ್ಯತೆ 84 ದಿನಗಳು. ಅಲ್ಲದೆ ಜಿಯೋ ರೂ. 399 ಮಾಸಿಕ ರೀಚಾರ್ಜ್ ಆಯ್ಕೆಯೊಂದಿಗೆ ನೀವು ಹೆಚ್ಚುವರಿ 6 GB ಡೇಟಾವನ್ನು ಪಡೆಯಬಹುದು. ಅಂದರೆ ದಿನಕ್ಕೆ 3 GB 4G ಡೇಟಾವನ್ನು ಸಿಗುತ್ತದೆ.
6,000mAh ಬ್ಯಾಟರಿ, 70W ಫಾಸ್ಟ್ ಚಾರ್ಜರ್: ಮಾ. 29ಕ್ಕೆ ಅಪ್ಪಳಿಸಲಿದೆ ಹೊಸ ಬಜೆಟ್ ಫೋನ್
ವಿ ಯೋಜನೆಗಳು
ಐಪಿಎಲ್ ಉತ್ಸಾಹಿಗಳಿಗೆ ವೊಡಾಫೋನ್ ಐಡಿಯಾ ಕೆಲವು ಆಕರ್ಷಕ ರೀಚಾರ್ಜ್ ಯೋಜನೆ ಆಯ್ಕೆಗಳನ್ನು ನೀಡುತ್ತದೆ. ರೂ. 699 ರೀಚಾರ್ಜ್ ಯೋಜನೆಯು ದಿನಕ್ಕೆ 3GB ಡೇಟಾವನ್ನು 56 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಇದರೊಂದಿಗೆ, ಚಂದಾದಾರರು 12 AM ನಿಂದ 6 AM ವರೆಗೆ ಅನಿಯಮಿತ 4GB ಡೇಟಾವನ್ನು ಪಡೆಯಬಹುದು. ನೀವು ವಿ ಚಲನಚಿತ್ರಗಳು ಮತ್ತು ಟಿವಿ ಚಂದಾದಾರಿಕೆಗಳನ್ನು ಸಹ ಪಡೆಯಬಹುದು.
ಹಾಗೆಯೆ ರೂ. 475 ರೀಚಾರ್ಜ್ ಯೋಜನೆಯನ್ನು ಆಯ್ಕೆ ಮಾಡಬಹುದು. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 4GB ಡೇಟಾವನ್ನು ನೀಡುತ್ತದೆ. ಇದರ ಜೊತೆಗೆ, 1.5 GB ಡೇಟಾವನ್ನು ರೂ. 25 ರಿಂದ ವೋಚರ್ ಮೂಲಕ ಪರ್ಯಾಯವಾಗಿ ಬಳಸಬಹುದು. 100GB ಡೇಟಾವನ್ನು 56 ದಿನಗಳವರೆಗೆ ರೂ. 418 ಡೇಟಾ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ