ಕೊಂಚ ಕಾಯಿರಿ: ಮಾರ್ಚ್ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ ಈ ಸ್ಮಾರ್ಟ್​ಫೋನ್​ಗಳು

Upcoming Smartphones March 2024: ಮಾರ್ಚ್ ತಿಂಗಳ ಕೊನೆಯ ವಾರ ಭಾರತದಲ್ಲಿ ಟೆಕ್ನೋ, ವಿವೋ, ಪೋಕೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಟೆಕ್ನೋ ಮತ್ತು ಪೋಕೋದಿಂದ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿರುವಾಗ ವಿವೊದಿಂದ ಫ್ಲ್ಯಾಗ್‌ಶಿಪ್ ಫೋಲ್ಡಬಲ್ ಅನ್ನು ಪರಿಚಯಿಸುತ್ತಿದೆ.

ಕೊಂಚ ಕಾಯಿರಿ: ಮಾರ್ಚ್ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ ಈ ಸ್ಮಾರ್ಟ್​ಫೋನ್​ಗಳು
Poco C61
Follow us
|

Updated on: Mar 25, 2024 | 12:58 PM

ಮಾರ್ಚ್ ಕೊನೆಯ ವಾರ ಆರಂಭವಾಗಿದೆ. ಇದೀಗ, ಅನೇಕ ಸ್ಮಾರ್ಟ್‌ಫೋನ್ (Smartphone) ಕಂಪನಿಗಳು ಈ ತಿಂಗಳ ಕೊನೆಯಲ್ಲಿ ತಮ್ಮ ಮೊಬೈಲ್​ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಈ ಪೈಕಿ ಟೆಕ್ನೋ, ವಿವೋ, ಪೋಕೋ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಟೆಕ್ನೋ ಮತ್ತು ಪೋಕೋದಿಂದ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿರುವಾಗ ವಿವೊದಿಂದ ಫ್ಲ್ಯಾಗ್‌ಶಿಪ್ ಫೋಲ್ಡಬಲ್ ಅನ್ನು ಪರಿಚಯಿಸುತ್ತಿದೆ. ಹಾಗಾದರೆ, ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನೋಡುವುದಾದರೆ…

ಟೆಕ್ನೋ ಪೋವಾ 6 ಪ್ರೊ

ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್​ಫೋನ್‌ಗೆ ಇದೇ ಮಾರ್ಚ್ 29 ರ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಕಂಪನಿಯು ಇದನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024 ರಲ್ಲಿ ಪ್ರಸ್ತುತಪಡಿಸಿದೆ. ಕೆಲವು ಮಾರುಕಟ್ಟೆಗಳಲ್ಲಿ ಫೋನ್ ಖರೀದಿಸಲು ಸಹ ಲಭ್ಯವಿದೆ. ಇದೀಗ ಭಾರತದಲ್ಲೂ ಲಾಂಚ್ ಆಗಲಿದೆ. ಟೆಕ್ನೋ ಪೊವಾ 6 ಪ್ರೊ ನಥಿಂಗ್ ಫೋನ್‌ನಂತೆಯೇ ವಿನ್ಯಾಸವನ್ನು ಹೊಂದಿದೆ. ಇದು ಪಾರದರ್ಶಕ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ ಮತ್ತು LED ಲೈಟ್​ಗಳನ್ನು ಸಹ ಹೊಂದಿದೆ.

ಮೊಟೊರೊಲಾದಿಂದ ಬರುತ್ತಿದೆ ವಿಶೇಷ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಏ. 3 ಕ್ಕೆ ಬಿಡುಗಡೆ

ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD ಪ್ಲಸ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಕಂಪನಿಯು ಇದರಲ್ಲಿ AMOLED ಪ್ಯಾನೆಲ್ ಅನ್ನು ಬಳಸಲಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ಹೊಂದಿರುತ್ತದೆ. 108MP ಮುಖ್ಯ ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದರ ಬ್ಯಾಟರಿ ಸಾಮರ್ಥ್ಯ 6000mAh ಆಗಿದ್ದು, 70W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇರುತ್ತದೆ.

ಪೋಕೋ C61

ಪೋಕೋ C61 ಭಾರತದಲ್ಲಿ ಮಾರ್ಚ್ 26 ರಂದು ಬಿಡುಗಡೆಯಾಗಲಿದೆ. 6.71 ಇಂಚಿನ IPS LCD ಡಿಸ್ಪ್ಲೇಯನ್ನು ಪೋಕೋ C61 ಫೋನ್‌ನಲ್ಲಿ ನೋಡಬಹುದಾಗಿದೆ. ಇದು HD ರೆಸಲ್ಯೂಶನ್ ಅನ್ನು ಹೊಂದಿರುತ್ತದೆ. 90Hz ನ ರಿಫ್ರೆಶ್ ದರ, ಗೊರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಫೋನ್‌ನಲ್ಲಿ ಕಾಣಬಹುದು. ಹಿಲಿಯೊ G36 ಪ್ರೊಸೆಸರ್ ಅನ್ನು ಹೊಂದಿದೆ. 6 GB RAM ಮತ್ತು 128 GB ಸಂಗ್ರಹಣೆಯೊಂದಿಗೆ ಬರಬಹುದು.

ಬ್ಯಾಟರಿ ಸಾಮರ್ಥ್ಯವು 5000mAh ಆಗಿರುತ್ತದೆ, ಇದರೊಂದಿಗೆ 10W ಚಾರ್ಜರ್ ಅನ್ನು ಟೈಪ್-ಸಿ ಪೋರ್ಟ್‌ನೊಂದಿಗೆ ಒದಗಿಸಬಹುದು. ಈ ಫೋನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದು. ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಎಂದು ಹೇಳಲಾಗುತ್ತದೆ. ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದೆ.

ಐಪಿಎಲ್ ಪ್ರಿಯರಿಗೆ ಜಿಯೋ-ಏರ್ಟೆಲ್​ನಿಂದ ಧಮಾಕ ಆಫರ್: ವಿಶೇಷ ರೀಚಾರ್ಜ್ ಯೋಜನೆ ಘೋಷಣೆ

ವಿವೋ X ಫೋಲ್ಡ್ 3

ವಿವೋ ಕಂಪನಿಯು ಮಾರ್ಚ್ 26 ರಂದು ವಿವೋ X ಫೋಲ್ಡ್ 3 ಸರಣಿಯನ್ನು ಪ್ರಾರಂಭಿಸಲಿದೆ. ವಿವೋ X ಫೋಲ್ಡ್ 3 ಮತ್ತು ವಿವೋ X ಫೋಲ್ಡ್ 3 ಪ್ರೊ ಮಾದರಿಗಳನ್ನು ಇದರಲ್ಲಿ ಪರಿಚಯಿಸಬಹುದು. ವಿವೋ ಝೈಸ್ ಕ್ಯಾಮೆರಾ ಸೆಟಪ್ ಅನ್ನು ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿದೆ. ವಿವೋ X ಫೋಲ್ಡ್ 3 ಅನ್ನು ಬಿಡುಗಡೆ ಮಾಡುವ ಮೊದಲು, ಫೋನ್‌ನ ತೂಕದ ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಇದು ಐಫೋಣ್ 15 ಪ್ರೊ ಮ್ಯಾಕ್ಸ್ ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಆಲ್ಟ್ರಾಗಿಂತ ಹಗುರವಾಗಿದೆ ಎಂದು ಹೇಳಲಾಗುತ್ತದೆ. ಇದಲ್ಲದೇ ವಿವೋ X ಫೋಲ್ಡ್ 3 ಪ್ರೊ ಫೋನ್‌ನಲ್ಲಿ ಸ್ನಾಪ್​ಡ್ರಾಗನ್ 8 Gen 3 ಚಿಪ್‌ಸೆಟ್ ಇರಲಿದೆ ಎಂಬ ಮಾತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ