ಥಿಯೇಟರ್​ನಲ್ಲಿ ‘ಕಬ್ಜ’ ಚಿತ್ರ ಮಿಸ್​ ಮಾಡಿಕೊಂಡಿದ್ದೀರಾ? ಏಪ್ರಿಲ್​ 14ರಿಂದ ಒಟಿಟಿಯಲ್ಲಿ ಸಿಗಲಿದೆ ಈ ಸಿನಿಮಾ

Kabzaa OTT Release: ‘ಕಬ್ಜ’ ಸಿನಿಮಾ ಒಟಿಟಿಗೆ ಕಾಲಿಡುತ್ತಿದೆ. ವಿಶ್ವಾದ್ಯಂತ ಇರುವ ಅಮೇಜಾನ್​ ಪ್ರೈಂ ವಿಡಿಯೋದ ಚಂದಾದಾರರು ಈ ಸಿನಿಮಾವನ್ನು ವೀಕ್ಷಿಸಬಹುದು.

ಥಿಯೇಟರ್​ನಲ್ಲಿ ‘ಕಬ್ಜ’ ಚಿತ್ರ ಮಿಸ್​ ಮಾಡಿಕೊಂಡಿದ್ದೀರಾ? ಏಪ್ರಿಲ್​ 14ರಿಂದ ಒಟಿಟಿಯಲ್ಲಿ ಸಿಗಲಿದೆ ಈ ಸಿನಿಮಾ
ಕಬ್ಜ ಸಿನಿಮಾ ಪೋಸ್ಟರ್​

Updated on: Apr 11, 2023 | 5:16 PM

ಪ್ಯಾನ್​ ಇಂಡಿಯಾ ಟ್ರೆಂಡ್​ನಲ್ಲಿ ಸ್ಟಾರ್​ ನಟರ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದಲ್ಲೂ ಅಂಥ ಪ್ರಯತ್ನಗಳು ಸಾಕಷ್ಟು ನಡೆಯುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ‘ಕಬ್ಜ’ ಸಿನಿಮಾ (Kabzaa Movie) ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬಂತು. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿತು. ಈಗ ‘ಕಬ್ಜ’ ಚಿತ್ರ ಒಟಿಟಿಗೆ ಕಾಲಿಡುತ್ತಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್​ ಮಾಡಿಕೊಂಡವರೆಲ್ಲ ಮನೆಯಲ್ಲೇ ಕುಳಿತು ವೀಕ್ಷಿಸುವ ಸಮಯ ಹತ್ತಿರವಾಗಿದೆ. ಏಪ್ರಿಲ್​ 14ರಂದು ಒಟಿಟಿ ಅಂಗಳಕ್ಕೆ ‘ಕಬ್ಜ’ ಸಿನಿಮಾ ಎಂಟ್ರಿ ನೀಡಲಿದೆ. ಅಮೇಜಾನ್​ ಪ್ರೈಂ ವಿಡಿಯೋ (Amazon Prime Video) ಮೂಲಕ ಈ ಚಿತ್ರ ಸ್ಟ್ರೀಮ್​ ಆಗಲಿದೆ. ಆರ್​. ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಉಪೇಂದ್ರ (Upendra), ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​​, ಶ್ರೀಯಾ ಶರಣ್​, ಮುರಳಿ ಶರ್ಮಾ, ಸುನೀಲ್​ ಪುರಾಣಿಕ್​ ಮುಂತಾದವರು ನಟಿಸಿದ್ದಾರೆ.

ಮಾರ್ಚ್​ 17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ ‘ಕಬ್ಜ’ ಬಿಡುಗಡೆ ಆಯಿತು. ರಾಜ್ಯಾದ್ಯಂತ ಅತ್ಯುತ್ತಮ ಓಪನಿಂಗ್​ ಪಡೆದುಕೊಂಡಿತು. ಕಾರಣಾಂತರಗಳಿಂದ ಕೆಲವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗಿಲ್ಲ. ಅಂಥವರಿಗೆಲ್ಲ ಒಟಿಟಿ ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ವಿಶ್ವಾದ್ಯಂತ ಇರುವ ಅಮೇಜಾನ್​ ಪ್ರೈಂ ವಿಡಿಯೋದ ಚಂದಾದಾರರು ‘ಕಬ್ಜ’ ವೀಕ್ಷಿಸಬಹುದು.

ಇದನ್ನೂ ಓದಿ
Kabzaa 2: ಕಬ್ಜ 2 ಗೆ ಆರ್ ಚಂದ್ರು ಮಗನೇ ಹೀರೋ! ಇದೇನಿದು ಉಪ್ಪಿ ಹೇಳಿದ ಹೊಸ ಸುದ್ದಿ
Kabzaa 2: ನಿರೀಕ್ಷೆ ಮೂಡಿಸಿದ ‘ಕಬ್ಜ 2’; ಕಥೆ ಇನ್ನೂ ಬಾಕಿ ಇದೆ ಎಂದ ಆರ್. ಚಂದ್ರು
Kabzaa Twitter Review: ‘ಕಬ್ಜ’ ನೋಡಿ ಏನು ಹೇಳ್ತಿದ್ದಾರೆ ಫಸ್ಟ್​ ಡೇ ಪ್ರೇಕ್ಷಕರು? ಇಲ್ಲಿದೆ ಟ್ವಿಟರ್​ ವಿಮರ್ಶೆ
Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

ಇದನ್ನೂ ಓದಿ: Kabzaa Movie: ‘ಕಬ್ಜ’ ಸಿನಿಮಾ ಸಕ್ಸಸ್​ ಸೆಲೆಬ್ರೇಷನ್ ಹೇಗಿತ್ತು ನೋಡಿ; ಇಲ್ಲಿದೆ ವಿಡಿಯೋ

‘ಕಬ್ಜ’ ಸಿನಿಮಾದ ಕಥೆ ಏನು?

ರೆಟ್ರೋ ಕಾಲದ ಕಥೆಯನ್ನು ‘ಕಬ್ಜ’ ಸಿನಿಮಾ ಒಳಗೊಂಡಿದೆ. ಪೈಲೆಟ್​ ಆಗಬೇಕು ಎಂದುಕೊಂಡ ಕಥಾನಾಯಕ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ನೀಡುತ್ತಾನೆ. ನಂತರ ಅವನು ದೊಡ್ಡ ಡಾನ್​ ಆಗಿ ಮೆರೆಯುತ್ತಾನೆ. ‘ಕಬ್ಜ’ ಸಿನಿಮಾದಲ್ಲಿ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕಥೆ ‘ಕಬ್ಜ 2’ ಸಿನಿಮಾದಲ್ಲಿ ಬಿತ್ತರಗೊಳ್ಳಲಿದೆ.

‘ಕಬ್ಜ’ ಚಿತ್ರದಲ್ಲಿ ಉಪೇಂದ್ರ ಅವರು ಅಂಡರ್​ವರ್ಲ್ಡ್ ಡಾನ್​ ಪಾತ್ರ ಮಾಡಿದ್ದಾರೆ. ಪೊಲೀಸ್​ ಅಧಿಕಾರಿಯಾಗಿ ಕಿಚ್ಚ ಸುದೀಪ್​ ಅಬ್ಬರಿಸಿದ್ದಾರೆ. ಶಿವರಾಜ್​ಕುಮಾರ್​ ಅವರ ಪಾತ್ರ ಬರುವುದು ಕ್ಲೈಮ್ಯಾಕ್ಸ್​ನಲ್ಲಿ. ಈ ಪಾತ್ರದ ಬಗ್ಗೆ ಹೆಚ್ಚಿನ ವಿವರ ಬಹಿರಂಗ ಆಗಿಲ್ಲ. ಮುಂದೇನು ಎಂಬ ಪ್ರಶ್ನೆ ಮೂಡಿಸುವ ರೀತಿಯಲ್ಲಿ ‘ಕಬ್ಜ’ ಸಿನಿಮಾ ಮುಕ್ತಾಯ ಆಗುತ್ತದೆ.

ಅದ್ದೂರಿ ಮೇಕಿಂಗ್​ ಕಾರಣದಿಂದ ‘ಕಬ್ಜ’ ಚಿತ್ರ ಗಮನ ಸೆಳೆದಿದೆ. ರವಿ ಬಸ್ರೂರು ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣ ಕೂಡ ಹೈಲೈಟ್​ ಆಗಿದೆ. ಒಟಿಟಿಯಲ್ಲಿ ಈ ಸಿನಿಮಾ ಯಾವ ರೀತಿ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us