ಒಟಿಟಿ ಬಂದ ಆರಂಭದಲ್ಲಿ ಭಾರತೀಯ ಚಿತ್ರರಂಗದ ಯಾರೂ ಅದರ ಶಕ್ತಿ, ಪ್ರಭಾವದ ಬಗ್ಗೆ ಊಹೆ ಮಾಡಿರಲಿಲ್ಲ. ಆದರೆ ತೀರ ಕೆಲವರಷ್ಟೆ ಒಟಿಟಿಗಾಗಿ ಬಹಳ ಮುಂಚೆಯೇ ಕಂಟೆಂಟ್ ಮಾಡಲು ಆರಂಭಿಸಿದ್ದರು. ಆದರೆ ಇತ್ತೀಚೆಗೆ ದೊಡ್ಡ ಸ್ಟಾರ್ ನಟರು, ಸ್ಟಾರ್ ನಿರ್ದೇಶಕರುಗಳು ಸಹ ಒಟಿಟಿಗಾಗಿ ಕಂಟೆಂಟ್ ಮಾಡಲು ನಾಮುಂದು-ತಾ ಮುಂದೆ ಎಂದು ಬರುತ್ತಿದ್ದಾರೆ. ಬಾಲಿವುಡ್ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇತ್ತೀಚೆಗಷ್ಟೆ ‘ಹೀರಾಮಂಡಿ’ ಹೆಸರಿನ ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ಗಾಗಿ ನಿರ್ದೇಶನ ಮಾಡಿದ್ದಾರೆ. ಇದೀಗ ಅದೇ ಹಾದಿಯನ್ನು ಹಿಡಿದಿದ್ದಾರೆ ಬಾಲಿವುಡ್ನ ಮತ್ತೊಬ್ಬ ಬಡಾ ನಿರ್ದೇಶಕ ಕರಣ್ ಜೋಹರ್.
‘ಕುಚ್ ಕುಚ್ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್’, ‘ಸ್ಟುಡೆಂಟ್ ಆಫ್ ದಿ ಇಯರ್’, ‘ಏ ದಿಲ್ ಹೆ ಮುಷ್ಕಿಲ್’ ಇನ್ನೂ ಕೆಲವು ಐಕಾನಿಕ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇದೀಗ ವೆಬ್ ಸರಣಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ತಮ್ಮ ಸಿನಿಮಾಗಳಿಗೆ ಹಾಕುವ ಬಂಡವಾಳಕ್ಕಿಂತಲೂ ದೊಡ್ಡ ಬಂಡವಾಳವನ್ನು ವೆಬ್ ಸರಣಿ ಮೇಲೆ ಕರಣ್ ಹೂಡಿಕೆ ಮಾಡುತ್ತಿದ್ದಾರೆ. ಈ ವೆಬ್ ಸರಣಿಯನ್ನು ನೆಟ್ಫ್ಲಿಕ್ಸ್ಗಾಗಿ ಕರಣ್ ನಿರ್ದೇಶನ ಮಾಡುತ್ತಿದ್ದು, ಮುಂಚಿತವಾಗಿಯೇ ಕರಣ್ ಹಾಗೂ ನೆಟ್ಫ್ಲಿಕ್ಸ್ ನಡುವೆ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ
ಕರಣ್ ಜೋಹರ್ ನಿರ್ದೇಶನ ಮಾಡುತ್ತಿರುವ ವೆಬ್ ಸರಣಿ, ಮಹಿಳಾ ಪ್ರಧಾನ ವೆಬ್ ಸರಣಿಯಾಗಿದ್ದು, ಈ ವೆಬ್ ಸರಣಿಯಲ್ಲಿ ಬಾಲಿವುಡ್ನ ಹಲವು ಸ್ಟಾರ್ ನಟಿಯರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ನ ಹಿರಿಯ ನಟಿಯರಿಂದ ಹಿಡಿದು ಯುವ ನಟಿಯರಾದ ಜಾನ್ಹವಿ, ಅನನ್ಯಾ ಇನ್ನೂ ಕೆಲವು ನಟಿಯರು ಸಹ ಈ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವೆಬ್ ಸರಣಿಯ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಕರಣ್ ಪಾಲಿಗೆ ಇದು ಮೊದಲ ವೆಬ್ ಸರಣಿ ಆಗಿರಲಿದೆ.
ಕರಣ್ ಜೊಹರ್ ನಿರ್ದೇಶನಕ್ಕಿಂತಲೂ, ಸಿನಿಮಾ ನಿರ್ಮಾಣ ಮತ್ತು ವಿತರಣೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇದೀಗ ಕರಣ್ ಜೋಹರ್ ನಿರ್ಮಾಣ ಮಾಡಿರುವ ‘ಜಿಗರ’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿ. ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಿನಿಮಾದ ಟ್ರೈಲರ್ ಗಮನ ಸೆಳೆಯುತ್ತಿದೆ. ನಿರ್ಮಾಣದ ಜೊತೆಗೆ ದಕ್ಷಿಣದ ಕೆಲವು ದೊಡ್ಡ ಬಜೆಟ್ ಸಿನಿಮಾಗಳನ್ನು ಬಾಲಿವುಡ್ನಲ್ಲಿ ವಿತರಣೆ ಸಹ ಮಾಡುತ್ತಾರೆ ಕರಣ್ ಜೋಹರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ