
ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶಿಸಿದ್ದ ‘ಲವ್ ಮಾಕ್ಟೇಲ್’ ಸಿನಿಮಾ ( (Love Mocktail ) ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಇದೇ ಜೋಶ್ನಲ್ಲಿ ‘ಲವ್ ಮಾಕ್ಟೇಲ್ 2’ (Love Mocktail 2) ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಮೊದಲ ಪಾರ್ಟ್ಗೂ ಎರಡನೇ ಪಾರ್ಟ್ಗೂ ಲಿಂಕ್ ಕೊಟ್ಟು, ಸಾಕಷ್ಟು ನಗಿಸುವ ಪಂಚಿಂಗ್ ಡೈಲಾಗ್ಗಳನ್ನು ಇಟ್ಟಿದ್ದರು ನಿರ್ದೇಶಕ ಕೃಷ್ಣ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಳ್ಳೆಯ ಸದ್ದು ಮಾಡಿತ್ತು. ಈಗ ಒಟಿಟಿಯಲ್ಲೂ ‘ಲವ್ ಮಾಕ್ಟೇಲ್ 2’ ಹವಾ ಸೃಷ್ಟಿ ಮಾಡುತ್ತಿದೆ.
‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಆದಿ (ಡಾರ್ಲಿಂಗ್ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. ಆದಿಗೆ ಮದುವೆ ಮಾಡಿಸೋ ಪ್ರಯತ್ನವೇ ಪಾರ್ಟ್ ಎರಡರ ಹೈಲೈಟ್. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಈ ಚಿತ್ರವನ್ನು ಸಿನಿಪ್ರಿಯರು ಒಟಿಟಿಯಲ್ಲೂ ಇಷ್ಟಪಟ್ಟಿದ್ದಾರೆ.
ಕೊವಿಡ್ ನಿಧಾನವಾಗಿ ಕಡಿಮೆ ಆಗಿದೆ. ಆದಾಗ್ಯೂ ಕೆಲ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಹೆಜ್ಜೆ ಹಾಕೋಕೆ ಹಿಂಜರಿದಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಅಮೇಜಾನ್ ಪ್ರೈಮ್ ವಿಡಿಯೋ ಟ್ರೆಂಡಿಂಗ್ ಲಿಸ್ಟ್ನಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿ ಇದೆ. ಇದು ಡಾರ್ಲಿಂಗ್ ಕೃಷ್ಣ ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್ ಖುಷಿಯನ್ನು ಹೆಚ್ಚಿಸಿದೆ.
‘ಲವ್ ಮಾಕ್ಟೇಲ್ 2’ನಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿರುವುದಲ್ಲದೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿಜ ಜೀವನದ ಜೋಡಿಯಾದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಈ ಹಿಂದೆ ಮೋಡಿ ಮಾಡಿತ್ತು. ಆದ್ದರಿಂದಲೇ ಚಿತ್ರದ ಎರಡನೇ ಭಾಗದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಈ ನಿರೀಕ್ಷೆಯನ್ನು ಚಿತ್ರ ಹುಸಿ ಮಾಡಿಲ್ಲ. ಮೃತ ಪಟ್ಟ ನಿಧಿಯನ್ನು ಪಾರ್ಟ್ 2ನಲ್ಲಿ ಮತ್ತೆ ತೆರೆಮೇಲೆ ತರೋ ಪ್ರಯತ್ನವೂ ಆಗಿತ್ತು.
ಇದನ್ನೂ ಓದಿ: ‘ಲವ್ ಮಾಕ್ಟೇಲ್ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ನೀಡಿದ ಉತ್ತರ ಇಲ್ಲಿದೆ..
ಬೆಂಗಾಲಿ ಹುಡುಗಿಯಾಗಿ ಬದಲಾದ ‘ಲವ್ ಮಾಕ್ಟೇಲ್ 2’ ನಟಿ ರೇಚಲ್ ಡೇವಿಡ್