ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದವರು ನಟ ಮನೋಜ್ ಬಾಜಪೇಯಿ. ಅವರಿಗೆ ಇಂದು (ಏಪ್ರಿಲ್ 23) ಬರ್ತ್ಡೇ. ಭಾರತ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ (The Family Man Web Series) ಮೂಲಕ ಅವರ ಖ್ಯಾತಿ ಹೆಚ್ಚಾಗಿದೆ. ಇಂದು ಅವರು ಸ್ಟಾರ್ ಹೀರೋ. ಅವರ ಬದುಕು ಅಷ್ಟು ಸಲಭವಾಗಿರಲಿಲ್ಲ. ಮನೋಜ್ ನಟಿಸಿದ ಸಿನಿಮಾಗಳು ಸೋತವು. ಪತ್ನಿ ಬಿಟ್ಟು ಹೋದರು. ಆತ್ಮಹತ್ಯೆಯ ಆಲೋಚನೆಯೂ ಅವರಿಗೆ ಬಂದಿತ್ತು.
1969ರ ಏಪ್ರಿಲ್ 23ರಂದು ಬಿಹಾರದ ಬೆಲ್ವಾ ಎಂಬ ಹಳ್ಳಿಯಲ್ಲಿ ಮನೋಜ್ ಜನಿಸಿದರು. ಅವರು ಗುಡಿಸಲಲ್ಲಿ ಕಟ್ಟಿದ ಶಾಲೆಗೆ ಹೋಗುತ್ತಿದ್ದರು. ಅಮಿತಾಭ್ ಬಚ್ಚನ್ ಅವರ ಪ್ರಭಾವ ಮನೋಜ್ ಮೇಲೆ ಸಾಕಷ್ಟು ಇತ್ತು. ಅವರಿಗೆ ನಟನೆಯ ಮೇಲೆ ಆಸಕ್ತಿ ಹುಟ್ಟಲು ಅವರು ಕೂಡ ಪ್ರಮುಖ ಕಾರಣ. ಮನೋಜ್ ಅವರು 17ನೇ ವಯಸ್ಸಿಗೆ ದೆಹಲಿಗೆ ಬಂದರು. ಅಲ್ಲಿ ಕಾಲೇಜಿಗೆ ಹೋಗುವುದರ ಜೊತೆ ರಂಗಭೂಮಿ ಜೊತೆ ನಂಟು ಬೆಳೆಸಿಕೊಂಡರು. ವಿಶೇಷ ಎಂದರೆ ಮನೆಯವರೂ ಮನೋಜ್ ಅವರನ್ನು ಬೆಂಬಲಿಸಿದರು.
ದೆಹಲಿಯಲ್ಲಿರುವ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ಗೆ ಸೇರಬೇಕೆಂಬುದು ಮನೋಜ್ ಅವರ ಕನಸಾಗಿತ್ತು. ಅದು ಸಾಧ್ಯವಾಗದೇ ಇದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯನ್ನು ಮಾಡಿದ್ದರು. ಇದನ್ನು ತಿಳಿದ ಗೆಳೆಯರು ಅವನನ್ನು ಬಿಟ್ಟು ಎಲ್ಲಿಯೂ ಹೋಗುತ್ತಲೇ ಇರಲಿಲ್ಲ.
ಮನೋಜ್ ಅವರು ನಂತರ ಬಣ್ಣದ ಬದುಕು ಆರಂಭಿಸಿದರು. ಅವರಿಗೆ ಬಿಹಾರ ಮೂಲದ ಹುಡುಗಿಯ ಜೊತೆ ಮದುವೆ ಆಯಿತು. ಆದರೆ, ಕಷ್ಟದ ದಿನಗಳಲ್ಲಿ ಅವರನ್ನು ಬಿಟ್ಟು ಹೋದರು. ನಂತರ ನಟಿ ಶಬಾನಾ ರಾಜಾ ಅವರನ್ನು ಮನೋಜ್ ಮದುವೆ ಆದರು.
ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್’ ನಟ ಮನೋಜ್ ಬಾಜ್ಪಾಯಿ ಲೋಕಸಭಾ ಚುನಾವಣೆಗೆ ನಿಲ್ತಾರಾ? ಸಿಕ್ತು ಸ್ಪಷ್ಟನೆ
ಈಗ ಮನೋಜ್ ವೆಬ್ ಸೀರಿಸ್, ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಮನೋಜ್ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳ ಕಡೆಗಳಿಂದ ಅವರಿಗೆ ಬರ್ತ್ಡೇ ವಿಶ್ಗಳು ಬರುತ್ತಿವೆ. ‘ಫ್ಯಾಮಿಲಿ ಮ್ಯಾನ್ 3’ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.