‘ಹೀರಾಮಂಡಿ’ಗೆ ಸೀಕ್ವೆಲ್ ಘೋಷಿಸಿದ ನೆಟ್​ಫ್ಲಿಕ್ಸ್; ಭಾರತದಲ್ಲಿ ಸಾಗಲಿದೆ ಕಥೆ  

‘ಹೀರಾಮಂಡಿ’ ಕಲಾವಿದರ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಹೀರಾಮಂಡಿಯ ವೇಶ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ ಆಗುತ್ತಾರೆ. ಎರಡನೇ ಭಾಗದಲ್ಲಿ ದ್ವಿಭಜನೆಯ ನಂತರ ಹೀರಾಮಂಡಿ ಮೇಲೆ ಆದ ಪರಿಣಾಮಗಳನ್ನು ವಿವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

‘ಹೀರಾಮಂಡಿ’ಗೆ ಸೀಕ್ವೆಲ್ ಘೋಷಿಸಿದ ನೆಟ್​ಫ್ಲಿಕ್ಸ್; ಭಾರತದಲ್ಲಿ ಸಾಗಲಿದೆ ಕಥೆ  
ಹೀರಾಮಂಡಿ

Updated on: Jun 03, 2024 | 1:07 PM

ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ನಿರ್ದೇಶನದ ‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸೀರಿಸ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಈ ಸೀರಿಸ್ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಕಂಡಿದೆ. ಈಗ ನೆಟ್​ಫ್ಲಿಕ್ಸ್ ಕಡೆಯಿಂದ ಘೋಷಣೆ ಒಂದು ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ.

‘ಹೀರಾಮಂಡಿ’ ಒಂದು ಮ್ಯೂಸಿಕ್ ಸೀರಿಸ್​ ರೀತಿಯಲ್ಲಿ ಮೂಡಿ ಬಂದಿದೆ. ಈ ಸರಣಿಯ ಹಾಡನ್ನು ಅನೇಕರು ಇಷ್ಟಪಟ್ಟಿದ್ದಾರೆ. ಕಲಾವಿದರ ನಟನೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಹೀರಾಮಂಡಿಯ ವೇಶ್ಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ ಆಗುತ್ತಾರೆ. ಎರಡನೇ ಭಾಗದಲ್ಲಿ ದ್ವಿಭಜನೆಯ ನಂತರ ಹೀರಾಮಂಡಿ ಮೇಲೆ ಆದ ಪರಿಣಾಮಗಳನ್ನು ವಿವರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಬನ್ಸಾಲಿ ‘ಹೀರಾಮಂಡಿ 2’ ಬಗ್ಗೆ ಮಾತನಾಡಿದ್ದಾರೆ ‘ಹೀರಾಮಂಡಿ ಸೀಕ್ವೆಲ್​ನಲ್ಲಿ ಮಹಿಳೆಯರು ಲಾಹೋರ್​ನಿಂದ ಸಿನಿಮಾ ಜಗತ್ತಿಗೆ ಬಂದಿದ್ದಾರೆ. ಅನೇಕರು ಲಾಹೋರ್​ನ ತೊರೆದಿದ್ದಾರೆ. ಹಲವರು ಮುಂಬೈ ಫಿಲ್ಮ್ ಇಂಡಸ್ಟ್ರಿ ಅಥವಾ ಕೋಲ್ಕತ್ತಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ. ಆದರೆ, ಬಜಾರ್​ನ ಪ್ರಯಾಣ ಹಾಗೆಯೇ ಇರುತ್ತದೆ. ಅವರು ಇಲ್ಲಿಯೂ ಡ್ಯಾನ್ಸ್ ಮಾಡಬೇಕು, ಹಾಡಬೇಕು. ಅವರು ಈಗ ನವಾಬ್​ಗಳಿಗಾಗಲ್ಲ, ನಿರ್ಮಾಪಕರಿಗೆ ಇದೆಲ್ಲವನ್ನೂ ಮಾಡಬೇಕು. ಯಾವಾಗ ಈ ಸರಣಿ ಸೆಟ್ಟೇರುತ್ತದೆ ಗೊತ್ತಿಲ್ಲ’ ಎಂದಿದ್ದರು ಅವರು.

ಇದನ್ನೂ ಓದಿ: ‘ಹುಡುಗಿಯರೂ ಅಸಹ್ಯವಾಗಿ ಮುಟ್ಟುತ್ತಾರೆ’: ಕೆಟ್ಟ ಘಟನೆ ವಿವರಿಸಿದ ‘ಹೀರಾಮಂಡಿ’ ನಟಿ

ಇಂದು (ಜೂನ್ 3) ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಮುಂಬೈನಲ್ಲಿ 100ಕ್ಕೂ ಅಧಿಕ ಡ್ಯಾನ್ಸರ್​ಗಳು ನೃತ್ಯ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ‘ಹೀರಾಮಂಡಿ ಎರಡನೇ ಸೀಸನ್ ಬರಲಿದೆ’ ಎಂದು ಬರೆಯಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us