ಸದ್ದಿಲ್ಲದೆ ಒಟಿಟಿಗೆ ಬಂತು ‘ಹರಿ ಹರ ವೀರ ಮಲ್ಲು’: ಎಲ್ಲಿ ನೋಡಬಹುದು?

Hari Hara Veera Mallu on OTT: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಕಳೆದ ಜುಲೈ 24 ರಂದು ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ವೇಳೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಇದು. ಆದರೆ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಇದೀಗ ಸಿನಿಮಾ ಒಟಿಟಿಗೆ ಬಂದಿದೆ. ಯಾವ ಒಟಿಟಿಯಲ್ಲಿ ಸಿನಿಮಾ ನೋಡಬಹುದು?

ಸದ್ದಿಲ್ಲದೆ ಒಟಿಟಿಗೆ ಬಂತು ‘ಹರಿ ಹರ ವೀರ ಮಲ್ಲು’: ಎಲ್ಲಿ ನೋಡಬಹುದು?
Hari Hara Veera Mallu

Updated on: Aug 20, 2025 | 4:56 PM

ಆಂಧ್ರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan), ಡಿಸಿಎಂ ಆದ ಬಳಿಕ ನಟಿಸಿದ್ದ ಸಿನಿಮಾ ‘ಹರಿ ಹರ ವೀರ ಮಲ್ಲು’ ಬಿಡುಗಡೆ ಆಗುವ ಮುಂಚೆ ಬಹಳ ಸದ್ದು ಮಾಡಿತ್ತು. ಜುಲೈ 24 ರಂದು ಬಿಡುಗಡೆ ಆಗಿತ್ತು. ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಸಹ ಸಿನಿಮಾ ಸಾಧಾರಣ ಕಲೆಕ್ಷನ್ ಅನ್ನಷ್ಟೆ ಮಾಡಿತ್ತು. ವಿಕಿಪೀಡಿಯಾ ಮಾಹಿತಿಯಂತೆ ಈ ಸಿನಿಮಾ 106 ಕೋಟಿ ಗಳಿಸಿತ್ತು. ಇದೀಗ ಈ ಸಿನಿಮಾ ಸದ್ದಿಲ್ಲದೆ ಒಟಿಟಿಗೆ ಬಂದಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇಂದಿನಿಂದ (ಆಗಸ್ಟ್ 20) ಪ್ರೇಕ್ಷಕರು ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಅನ್ನು ತೆಲುಗು ಮಾತ್ರವಲ್ಲದೆ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿಲ್ಲ. ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಒಂದು ತಿಂಗಳಿಗೂ ಮುಂಚಿತವಾಗಿಯೇ ಒಟಿಟಿಗೆ ಬಂದಿದೆ.

‘ಹರಿ ಹರ ವೀರ ಮಲ್ಲು’ ಸಿನಿಮಾ ಒಟಿಟಿ ಬಿಡುಗಡೆ ಬಗ್ಗೆ ನಟಿ ನಿಧಿ ಅಗರ್ವಾಲ್ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಹರಿ ಹರ ವೀರ ಮಲ್ಲು’ ಭಾರತದ ರಾಬಿನ್​​ಹುಡ್ ಕತೆ ಎಂದಿದ್ದಾರೆ ನಟಿ ನಿಧಿ ಅಗರ್ವಾಲ್. ಅಮೆಜಾನ್ ಪ್ರೈಂ ಸಹ ಸಿನಿಮಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ.

‘ಹರಿ ಹರ ವೀರ ಮಲ್ಲು’ ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿದೆ. ಕೋಹಿನೂರ್ ವಜ್ರದ ಕತೆಯೊಂದಿಗೆ ಆರಂಭವಾಗುವ ಸಿನಿಮಾ ಆ ನಂತರ ಬೇರೆಯದ್ದೇ ದಾರಿ ಹಿಡಿಯುತ್ತದೆ. ಪವನ್ ಕಲ್ಯಾಣ್ ಅವರೇ ಸಿನಿಮಾ ಪ್ರಚಾರದಲ್ಲಿ ಹೇಳಿರುವಂತೆ ಈ ಸಿನಿಮಾ ಮೊಘಲ್ ದೊರೆಗಳ ದೌರ್ಜನ್ಯದ ಕತೆಯನ್ನು ಒಳಗೊಂಡಿದೆಯಂತೆ. ಸಿನಿಮಾದ ಮೊದಲ ಭಾಗ ಮಾತ್ರವೇ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗವೂ ಬಿಡುಗಡೆ ಆಗಲಿದೆಯಂತೆ.

ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಫ್ಲಾಪ್, ಬ್ರಿಲಿಯಂಟ್ ಐಡಿಯಾ ಮಾಡಿದ ಪವನ್ ಕಲ್ಯಾಣ್

‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಮೊದಲು ಕ್ರಿಶ್ ನಿರ್ದೇಶನ ಮಾಡಲು ಆರಂಭಿಸಿದ್ದರು. ಬಳಿಕ ಪವನ್ ಕಲ್ಯಾಣ್ ಚುನಾವಣೆಯಲ್ಲಿ ಬ್ಯುಸಿ ಆದ ಕಾರಣದಿಂದಾಗಿ ಅವರು ಸಿನಿಮಾ ತಂಡದಿಂದ ಹೊರನಡೆದು, ನಿರ್ಮಾಪಕ ಎಎಂ ರತ್ನಂ ಅವರ ಪುತ್ರ ಎಎಂ ಜ್ಯೋತಿ ಕೃಷ್ಣ ಅವರು ಸಿನಿಮಾ ನಿರ್ದೇಶನ ಮಾಡಿ ಪೂರ್ಣಗೊಳಿಸಿದರು. ಈ ಹಿಂದೆ ಪವನ್ ನಟನೆಯ ‘ಖುಷಿ’, ‘ಬಂಗಾರಂ’ ಸಿನಿಮಾ ನಿರ್ಮಾಣ ಮಾಡಿರುವ ಎಎಂ ರತ್ನಂ ಅವರೇ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದರೆ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಬಾಕ್ಸ್ ಆಫೀಸ್​​ನಲ್ಲಿ ಮಾಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ