
ಆರ್.ಮಾಧವನ್ (R Madhavan) ಮತ್ತು ಸುರ್ವೀನ್ ಚಾವ್ಲಾ (Surveen Chawla) ಕಾಣಿಸಿಕೊಂಡಿರುವ ‘ಡಿಕಪಲ್ಡ್’ (Decoupled) ಸೀರೀಸ್ ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ (Netflix) ಬಿಡುಗಡೆಯಾಗಿದೆ. ಈ ಸೀರೀಸ್ನಲ್ಲಿ ಈರ್ವರೂ ದಂಪತಿಗಳಾಗಿ ಕಾಣಿಸಿಕೊಂಡಿದ್ದಾರೆ. ವಿಚ್ಛೇದನಕ್ಕೂ ಮುನ್ನ ತಮ್ಮ ಮಗಳ ನಡುವೆ ಸಮಯವನ್ನು ಕಳೆಯುವ ಕತೆಯನ್ನು ಸೀರೀಸ್ ಒಳಗೊಂಡಿದೆ. ಸದ್ಯ ಈ ಸರಣಿಯನ್ನು ವೀಕ್ಷಕರು ಇಷ್ಟಪಟ್ಟಿದ್ದು, ಹಲವು ದಾಖಲೆಗಳನ್ನು ಬರೆದಿದೆ. ಸ್ವತಃ ಮಾಧವನ್ ಟ್ವೀಟ್ ಮೂಲಕ ಸಂತಸವನ್ನು ಹಂಚಿಕೊಂಡಿದ್ದು, ‘ಡಿಕಪಲ್ಡ್’ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಕಾರಣರಾದವರಿಗೆ ಧನ್ಯವಾದ ಹೇಳಿದ್ದಾರೆ. ಸದ್ಯ ‘ಡಿಕಪಲ್ಡ್’ ಸರಣಿಯು ಟ್ರೆಂಡಿಂಗ್ನಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಅತ್ಯಂತ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಭಾರತೀಯ ಸರಣಿ ಎಂಬ ಖ್ಯಾತಿಯನ್ನೂ ಪಡೆದಿದೆ. ಇದನ್ನು ಕೇವಲ 72 ಗಂಟೆಯಲ್ಲಿ ಸಾಧಿಸಿದ್ದು ಈ ಸರಣಿಯ ಹೆಚ್ಚುಗಾರಿಕೆಯಾಗಿದೆ. ಈ ಕುರಿತು ಮಾಧವನ್ ಬರೆದುಕೊಂಡಿದ್ದಾರೆ.
ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಧವನ್ ಅದಕ್ಕೆ ನೆಟ್ಫ್ಲಿಕ್ಸ್ನಲ್ಲಿ ಟಾಪ್ ಟ್ರೆಂಡಿಂಗ್ನಲ್ಲಿರುವ ಸರಣಿಗಳ ಚಿತ್ರವನ್ನು ಲಗತ್ತಿಸಿದ್ದಾರೆ. ಅದರಲ್ಲಿ ಡಿಕಪಲ್ಡ್ ಎರಡನೇ ಸ್ಥಾನದಲ್ಲಿದೆ. ‘‘ದೇವರು ಹಾಗೂ ಎಲ್ಲಾ ಹಿರಿಯರ ಆಶೀರ್ವಾದ ಮತ್ತು ಜನರ ಪ್ರೀತಿಯಿಂದ ‘ಡಿಕಪಲ್ಡ್’ ಸರಣಿಯು ಕೇವಲ 72 ಗಂಟೆಗಳ ಅವಧಿಯಲ್ಲಿ ಭಾರತದ ನಂಬರ್ 1 ನೆಟ್ಫ್ಲಿಕ್ಸ್ ಸರಣಿಯಾಗಿದೆ. ಇದರಿಂದ ಭಾವುಕನಾಗಿದ್ದಾನೆ ಮತ್ತು ವಿನಮ್ರನಾಗಿದ್ದೇನೆ’’ ಎಂದು ಅವರು ಬರೆದಿದ್ದಾರೆ.
ಮಾಧವನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಮಾಧವನ್ ಚಿತ್ರದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿರುವ ‘ಪಲ್ಪ್ ಫಿಕ್ಷನ್’ ಬರಹಗಾರನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾಮಿಡಿ- ಡ್ರಾಮಾ ಸರಣಿ ಇದಾಗಿದ್ದು, ಮನು ಜೋಸೆಫ್ ರಚಿಸಿ, ಹಾರ್ದಿಕ್ ಮೆಹ್ತಾ ನಿರ್ದೇಶಿಸಿದ್ದಾರೆ. ಲೇಖಕ ಚೇತನ್ ಭಗತ್ ಈ ಸೀರೀಸ್ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಸರಣಿಯನ್ನು ಒಪ್ಪಿಕೊಂಡಿದ್ದರ ಕುರಿತು ಈ ಹಿಂದೆ ಮಾತನಾಡುತ್ತಾ ಕುತೂಹಲಕರ ಸಂಗತಿಗಳನ್ನು ಮಾಧವನ್ ಹಂಚಿಕೊಂಡಿದ್ದರು. ಕೊರೊನಾ ಸಂದರ್ಭದಲ್ಲಿ ಈ ಸ್ಕ್ರಿಪ್ಟ್ ಕೇಳಿದಾಗ ತಕ್ಷಣ ‘ಯಸ್’ ಎಂದರಂತರೆ. ಕಾರಣ ಅವರಿಗೆ ಲಘು ಹಾಸ್ಯದ ಚಿತ್ರ ಹಾಗೂ ಸೀರೀಸ್ ಬಹಳ ಇಷ್ಟವಂತೆ. ಆದ್ದರಿಂದಲೇ ಇದು ಆಸಕ್ತಿ ಮೂಡಿಸಿತು ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ:
ಅಮೇಜಾನ್ ಪ್ರೈಮ್ನಲ್ಲಿ ಪಿಆರ್ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್?
‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್ ರಾವ್