Jaggesh: ‘ನಾವೆಲ್ಲ ಡರ್ಬಿ ರೇಸ್​ನಲ್ಲಿ ನಿವೃತ್ತಿ ಹೊಂದಿದ ಕುದುರೆಗಳು’; ಜಗ್ಗೇಶ್​ಗೆ ಹುರುಳಿ ತಿನಿಸಿದ್ದು ಯಾರು?

ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ಈಗ ಸಂತೋಷ್ ಆನಂದ್​ರಾಮ್​ ಅವರು ಜಗ್ಗೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Jaggesh: ‘ನಾವೆಲ್ಲ ಡರ್ಬಿ ರೇಸ್​ನಲ್ಲಿ ನಿವೃತ್ತಿ ಹೊಂದಿದ ಕುದುರೆಗಳು’; ಜಗ್ಗೇಶ್​ಗೆ ಹುರುಳಿ ತಿನಿಸಿದ್ದು ಯಾರು?
ಜಗ್ಗೇಶ್

Updated on: Apr 26, 2023 | 10:10 AM

ಮುಖ್ಯಾಂಶಗಳು

  • ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ
  • ಏಪ್ರಿಲ್ 28ರಂದು ನೇರವಾಗಿ ಒಟಿಟಿಯಲ್ಲಿ ರಿಲೀಸ್
  • ಸಂತೋಷ್ ಆನಂದ್​ರಾಮ್ ಅವರನ್ನು ಜಗ್ಗೇಶ್ ಹೊಗಳಿದ್ದಾರೆ

ನಟ ಜಗ್ಗೇಶ್ ಅವರು ರಾಜಕೀಯ ಹಾಗೂ ಸಿನಿಮಾ ಎರಡೂ ಕಡೆಗಳಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಪ್ರತಿ ವಾರ ಹೊಸಹೊಸ ಆಫರ್​ಗಳು ಬರುತ್ತಲೇ ಇವೆ. ಆದರೆ, ಎಲ್ಲವನ್ನೂ ಅವರು ಒಪ್ಪಿಕೊಳ್ಳುವುದಿಲ್ಲ. ಹೀರೋ ಆಗುವುದಕ್ಕೂ ಮೊದಲು ಜಗ್ಗೇಶ್​ (Jaggesh) ಪ್ರತಿ ವರ್ಷ 10ಕ್ಕೂ ಅಧಿಕ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ, ಈಗ ಅವರಿಗೆ ವಯಸ್ಸು 60 ದಾಟಿದೆ. ಪಾತ್ರ ಮನಸ್ಸಿಗೆ ಹತ್ತಿರವಾದರೆ ಮಾತ್ರ ಸಿನಿಮಾ ಮಾಡುತ್ತಾರೆ. ಅವರ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ (Raghavendra Stores Movie)  ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ಮದುವೆ ಆಗಬೇಕು ಎಂದು ಒದ್ದಾಡುವ ಬ್ಯಾಚುಲರ್​ನ ಕಥೆಯೇ ಈ ಸಿನಿಮಾ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದರೆ, ಸಂತೋಷ್ ಆನಂದ್​ರಾಮ್ ನಿರ್ದೇಶನ ಚಿತ್ರಕ್ಕಿದೆ. ಜಗ್ಗೇಶ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ. ಈ ಬಗ್ಗೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನವನ್ನು ಮಾಡಿದ್ದು ರಾಘವೇಂದ್ರ ರಾಜ್​ಕುಮಾರ್ ಅನ್ನೋದು ವಿಶೇಷ. ಈ ಸಂದರ್ಶನವನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.

ಇದನ್ನೂ ಓದಿ: ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ ಮನೆಗೆ ನುಗ್ಗಿದ್ದ ಜಗ್ಗೇಶ್, ಆಮೇಲೇನಾಯ್ತು?

ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ಪುನೀತ್ ನಟನೆಯ ‘ರಾಜಕುಮಾರ’, ‘ಯುವರತ್ನ’ ಚಿತ್ರಕ್ಕೆ ಸಂತೋಷ್ ನಿರ್ದೇಶನ ಮಾಡಿದ್ದಾರೆ. ಈಗ ಅವರು ಜಗ್ಗೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸಂದರ್ಶನದಲ್ಲಿ ಸಂತೋಷ್ ಆನಂದ್​ರಾಮ್ ಅವರನ್ನು ಜಗ್ಗೇಶ್ ಹೊಗಳಿದ್ದಾರೆ.
YouTube video player

ಇದನ್ನೂ ಓದಿ: ಸಿಟಿಆರ್ ದೋಸೆ ಮೆಲ್ಲುತ್ತಾ ಜಗ್ಗೇಶ್-ರಾಘಣ್ಣ ಮಾತು, ನಡುವೆ ಸುಳಿದಾಡಿದ ಅಪ್ಪು ನೆನಪು

‘ನನ್ನ ಘನತೆ ಉಳಿಬೇಕು, ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬೇಕು ಎನ್ನುವ ನಿಟ್ಟಿನಲ್ಲಿ ಸಂತೋಷ್ ಕೆಲಸ ಮಾಡಿದ್ದಾನೆ. ಸಿನಿಮಾ ನನಗೆ ಸುಲಭ ಆಯ್ತು, ಆದರೆ, ಅವನಿಗೆ ಕಷ್ಟ ಆಯ್ತು. ಈ ಚಿತ್ರಕ್ಕಾಗಿ ಸಂತೋಷ್ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ. ಜಗ್ಗೇಶ್ ಜೊತೆ ಸಿನಿಮಾ ಮಾಡ್ತಾ ಇದೀನಿ ಎನ್ನುವುದು ಆತನ ತಲೆಯಲ್ಲಿ ಇತ್ತು. ಪುನೀತ್ ಜೊತೆ ಹಿಟ್ ಸಿನಿಮಾ ಕೊಟ್ಟಿದ್ದಾನೆ. ಯಂಗ್​ಸ್ಟರ್ಸ್​ನ ಹೇಗೆ ಗೆಲ್ಲಬೇಕು ಎಂಬುದು ಆತನಿಗೆ (ಸಂತೋಷ್ ಆನಂದ್​ರಾಮ್​) ಗೊತ್ತಿದೆ. ಆದರೆ, ನಾವೆಲ್ಲ ಡರ್ಬಿ ರೇಸ್​ನಲ್ಲಿ ನಿವೃತ್ತಿ ಹೊಂದಿದ ಕುದುರೆಗಳು. ಈ ಕುದುರೆಗೂ ಹುರುಳಿ ತಿನಿಸಿ ರೆಡಿ ಮಾಡಿದ್ದಾನೆ’ ಎಂದು ಸಂತೋಷ್ ಆನಂದ್​ರಾಮ್​ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Sat, 22 April 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us