ಸಿಟಿಆರ್ ದೋಸೆ ಮೆಲ್ಲುತ್ತಾ ಜಗ್ಗೇಶ್-ರಾಘಣ್ಣ ಮಾತು, ನಡುವೆ ಸುಳಿದಾಡಿದ ಅಪ್ಪು ನೆನಪು

Raghvendra Stores: ಹಳೆಯ ಗೆಳೆಯರಾದ ರಾಘವೇಂದ್ರ ರಾಜ್​ಕುಮಾರ್ ಹಾಗೂ ಜಗ್ಗೇಶ್ ಒಟ್ಟಿಗೆ ಕೂತು ದೋಸೆ ಮೆಲ್ಲುತ್ತಾ ಮಾತುಕತೆ ನಡೆಸಿದ್ದಾರೆ. ಇಬ್ಬರು ದಿಗ್ಗಜರ ಮಾತುಕತೆಯಲ್ಲಿ ಹಲವು ವಿಷಯ ಚರ್ಚೆಯಾಗಿವೆ.

ಸಿಟಿಆರ್ ದೋಸೆ ಮೆಲ್ಲುತ್ತಾ ಜಗ್ಗೇಶ್-ರಾಘಣ್ಣ ಮಾತು, ನಡುವೆ ಸುಳಿದಾಡಿದ ಅಪ್ಪು ನೆನಪು
ಜಗ್ಗೇಶ್-ರಾಘವೇಂದ್ರ ರಾಜ್​ಕುಮಾರ್
Follow us
ಮಂಜುನಾಥ ಸಿ.
|

Updated on: Apr 20, 2023 | 7:48 PM

ಜಗ್ಗೇಶ್ (Jaggesh) ಹಾಗೂ ದೊಡ್ಮನೆ ನಡುವಿರುವ ಬಂಧ-ಅನುಬಂಧದ ಬಗ್ಗೆ ವಿಶೇಷ ಟಿಪ್ಪಣಿಯ ಅಗತ್ಯವಿಲ್ಲ. ಡಾ ರಾಜ್​ಕುಮಾರ್ (Dr Rajkumar) ಅವರ ದೊಡ್ಡ ಅಭಿಮಾನಿಯಾಗಿದ್ದ ಜಗ್ಗೇಶ್ ಅವರ ಮಕ್ಕಳಾದ ಶಿವರಾಜ್ ಕುಮಾರ್ (Shiva Rajkumar) ಹಾಗೂ ಪುನೀತ್ ರಾಜ್​ಕುಮಾರ್ (Puneeth Rajkumar) ಇಬ್ಬರಿಗೂ ಅತ್ಯಾಪ್ತರು. ಅಪ್ಪು ಅಗಲಿದಾಗ ಅತೀವ ಸಂಕಟಪಟ್ಟ ಜೀವಗಳಲ್ಲಿ ಜಗ್ಗೇಶ್ ಸಹ ಒಬ್ಬರು. ಇದೀಗ ಅದೇ ದೊಡ್ಮನೆಯ ಮತ್ತೊಬ್ಬ ಸದಸ್ಯ ರಾಘವೇಂದ್ರ ರಾಜ್​ಕುಮಾರ್ ಅವರೊಟ್ಟಿಗೆ ಗಳಸ್ಯ-ಕಂಠಸ್ಯ ಒಡನಾಟ ಜಗ್ಗೇಶ್ ಅವರಿಗಿರಲಿಲ್ಲವಾದರೂ ಇಬ್ಬರು ಗೆಳೆಯರೇ. ಇದೀಗ ಈ ಇಬ್ಬರು ಹಳೆಯ ಗೆಳೆಯರು ದೋಸೆ ಮೆಲ್ಲುತ್ತಾ ಲೋಕಾಭಿರಾಮವಾಗಿ ಮಾತನಾಡಿದ್ದಾರೆ. ಇದಕ್ಕೆ ಕಾರಣ ರಾಘವೇಂದ್ರ ಸ್ಟೋರ್ಸ್.

ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೇ ಕಾರಣದಿಂದ ಜಗ್ಗೇಶ್ ಅವರನ್ನು ರಾಘವೇಂದ್ರ ರಾಜ್​ಕುಮಾರ್ ಅವರು ಸಂದರ್ಶನ ಮಾಡಿದ್ದಾರೆ, ಅದೂ ಬೆಂಗಳೂರಿನ ಜನಪ್ರಿಯ ಸಿಟಿಆರ್ ಹೋಟೆಲ್​ನಲ್ಲಿ. ಇಬ್ಬರು ಹಳೆ ಗೆಳೆಯರ ಮಾತು ರಾಘವೇಂದ್ರ ಸ್ಟೋರ್ಸ್ ಸಿನಿಮಾಕ್ಕಷ್ಟೆ ಸೀಮಿತವಾಗದೆ ಇನ್ನೂ ಕೆಲವು ವಿಷಯಗಳನ್ನು ಸುತ್ತುಹಾಕಿತು, ಮಾತುಕತೆಯಲ್ಲಿ ಅಪ್ಪು ನೆನಪು ಹೆಚ್ಚು ಸುಳಿದಾಡಿತು.

ಅಪ್ಪು ಅವರು ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕತೆ ಬಗ್ಗೆ ಹೊಂದಿದ್ದ ಪ್ರೀತಿ, ನಂಬಿಕೆಯ ಬಗ್ಗೆ ಮಾತನಾಡಿದ ಜಗ್ಗೇಶ್, ಒಮ್ಮೆ ನನ್ನನ್ನು ಬರುವಂತೆ ನಿರ್ದೇಶಕ ಸಂತೋಶ್ ಆನಂದ್​ರಾಮ್ ಕರೆದರು. ಅಂತೆಯೇ ನಾನು ಉಟ್ಟಿದ್ದ ಸಾಧಾರಣ ಬಟ್ಟೆಯಲ್ಲಿಯೇ ಹೋದಾಗ ಅಲ್ಲಿ ಅದಾಗಲೇ ಪುನೀತ್ ರಾಜ್​ಕುಮಾರ್, ಆಸಕ್ತಿಯಿಂದ ಸಂತೋಶ್ ಆನಂದ್​ ರಾಮ್ ಹೇಳುತ್ತಿದ್ದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಕತೆ ಕೇಳುತ್ತಿದ್ದರು. ನಾನು ಅವರಿಗೆ ಡಿಸ್ಟರ್ಬ್ ಮಾಡುವುದು ಬೇಡವೆಂದು ಹೊರಗೆ ಕುಳಿತೆ. ಪುನೀತ್ ಕತೆ ಕೇಳಿ ಹೊರಗೆ ಬಂದರೆ ಅದೇನೋ ಕಾಕತಾಳೀಯವೋ ಅಂದು ಎಲ್ಲರೂ ಕಪ್ಪು ಬಟ್ಟೆಯನ್ನೇ ತೊಟ್ಟಿದ್ದೆವು. ಅಂದು ನಮ್ಮ ಜೊತೆಗೂಡಿದ ಯೋಗಿ ಸಹ ಕಪ್ಪು ಬಣ್ಣದ ಬಟ್ಟೆಯನ್ನೇ ತೊಟ್ಟಿದ್ದರು, ನಾವೆಲ್ಲರೂ ಅಂದು ಒಟ್ಟಿಗೆ ಊಟ ಮಾಡಿ ಸಾಕಷ್ಟು ಮಾತನಾಡಿ ಒಂದು ಫೋಟೊ ಸಹ ತೆಗೆಸಿಕೊಂಡೆವು” ಎಂದು ನೆನಪು ಮಾಡಿಕೊಂಡರು.

ಇದನ್ನೂ ಓದಿ:‘ರಾಘವೇಂದ್ರ ಸ್ಟೋರ್ಸ್​’ ಚಿತ್ರದ ಟ್ರೇಲರ್​ ಬಿಡುಗಡೆ; ಮದುವೆ ಪ್ರಸಂಗದಿಂದ ನಕ್ಕು ನಗಿಸ್ತಾರೆ ಜಗ್ಗೇಶ್​

”ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಕತೆ ಪುನೀತ್ ರಾಜ್​ಕುಮಾರ್ ಅವರಿಗೆ ಬಹಳ ಇಷ್ಟವಾಗಿತ್ತು. ಕತೆ ಕೇಳಿದ ಅಪ್ಪು, ವಿಲನ್ ಪಾತ್ರಕ್ಕೆ ಲಿಂಕ್ ವೀಕ್ ಎನ್ನಿಸುತ್ತಿದೆ ಅದೊಂದನ್ನು ಕೊಡಿ ಇನ್ನೆಲ್ಲ ಸೂಪರ್ ಆಗಿದೆ ಎಂದಿದ್ದರು. ಅಲ್ಲದೆ ಈ ಸಿನಿಮಾಕ್ಕೆ ಒಂದು ಹಾಡು ಹಾಡುವ ಅಥವಾ ಯಾವುದಾದರೂ ಒಂದು ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಅಪ್ಪುಗೆ ಇತ್ತು” ಎಂದು ಜಗ್ಗೇಶ್ ಹೇಳಿದರು. ಆಗ ರಾಘಣ್ಣ, ಅದಕ್ಕೆ ನೋಡಿ ಅವನ ಕರ್ತವ್ಯ ಪೂರ್ತಿ ಮಾಡಲು ದೇವರು ನನ್ನನ್ನು ಕಳಿಸಿದ್ದಾನೆ. ಅವನನ್ನೂ ಜೊತೆಗೆ ಕರೆದುಕೊಂಡು ಬಂದಿದ್ದೇನೆ ಎನ್ನುತ್ತಾ ಜೇಬಿನಲ್ಲಿದ್ದ ಅಪ್ಪು ಚಿತ್ರವನ್ನು ತೋರಿಸಿದರು.

ಜಗದೀಶ್ ಶೆಟ್ಟರ್ ಮಗಳ ಮದುವೆಯ ದಿನ ಸಿಕ್ಕು ಪುನೀತ್ ರಾಜ್​ಕುಮಾರ್ ಜೊತೆಗೆ ಮಾತನಾಡಿದ ಬಗ್ಗೆಯೂ ನಟ ಜಗ್ಗೇಶ್ ನೆನಪು ಮಾಡಿಕೊಂಡರು. ಇವೆಲ್ಲ ಮಾತುಕತೆಗಳ ನಡುವೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಗ್ಗೆಯೂ ಹಲವು ಮಾತುಗಳನ್ನಾಡಿದರು ರಾಘಣ್ಣ ಹಾಗೂ ಜಗ್ಗೇಶ್.

ರಾಘವೇಂದ್ರ ಸ್ಟೋರ್ಸ್ ಸಿನಿಮಾವನ್ನು ಸಂತೋಶ್ ಆನಂದ್​ರಾಮ್ ನಿರ್ದೇಶನ ಮಾಡಿದ್ದು ಹೊಂಬಾಳೆ ಫಿಲಮ್ಸ್​ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ವಯಸ್ಕ್ ಬ್ರಹ್ಮಚಾರಿಯಾಗಿ ಜಗ್ಗೇಶ್ ನಟಿಸಿದ್ದಾರೆ. ಸಿನಿಮಾದಲ್ಲಿ ದತ್ತಣ್ಣ, ಅಚ್ಯುತ್ ಕುಮಾರ್, ನಾಯಕಿಯಾಗಿ ಶ್ವೇತಾ ಶ್ರೀವತ್ಸ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ