700 ಕೋಟಿ ಆಫರ್ ರಿಜೆಕ್ಟ್ ಮಾಡಿದ ‘ರಾಮಾಯಣ’ ನಿರ್ಮಾಪಕ, 1000 ಕೋಟಿ ಗುರಿ

Ramayana movie: ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಎರಡೂ ಭಾಗಗಳ ಒಟ್ಟು ವೆಚ್ಚ ಸುಮಾರು 4000 ಕೋಟಿ ರೂಪಾಯಿಗಳಾಗಿರಲಿವೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಇದೀಗ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಅನ್ನು ಸಿನಿಮಾದ ಮುಖ್ಯ ನಿರ್ಮಾಪಕ ನಮಿತ್ ಮಲ್ಹೋತ್ರಾ ಶುರು ಮಾಡಿದ್ದಾರೆ. ಆದರೆ ಆರಂಭದಲ್ಲೇ ಅವರು 700 ಕೋಟಿಯ ಬಹುದೊಡ್ಡ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ.

700 ಕೋಟಿ ಆಫರ್ ರಿಜೆಕ್ಟ್ ಮಾಡಿದ ‘ರಾಮಾಯಣ’ ನಿರ್ಮಾಪಕ, 1000 ಕೋಟಿ ಗುರಿ
Ramayana

Updated on: Apr 04, 2026 | 4:37 PM

ರಣ್​​ಬೀರ್ ಕಪೂರ್ (Ranbir Kapoor), ಯಶ್ (Yash) ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಎರಡೂ ಭಾಗಗಳ ಒಟ್ಟು ವೆಚ್ಚ ಸುಮಾರು 4000 ಕೋಟಿ ರೂಪಾಯಿಗಳಾಗಿರಲಿವೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಇದೀಗ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಅನ್ನು ಸಿನಿಮಾದ ಮುಖ್ಯ ನಿರ್ಮಾಪಕ ನಮಿತ್ ಮಲ್ಹೋತ್ರಾ ಶುರು ಮಾಡಿದ್ದಾರೆ. ಆದರೆ ಆರಂಭದಲ್ಲೇ ಅವರು 700 ಕೋಟಿಯ ಬಹುದೊಡ್ಡ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ.

‘ರಾಮಾಯಣ’ ಸಿನಿಮಾದ ಡಿಜಿಟಲ್ ಇನ್ನಿತರೆ ಹಕ್ಕುಗಳ ಮಾರಾಟ ಮಾಡಲಾಗುತ್ತಿದೆ. ಇದೀಗ ‘ರಾಮಾಯಣ’ ಸಿನಿಮಾದ ಎರಡೂ ಭಾಗಗಳ ಡಿಜಿಟಲ್ ಹಕ್ಕುಗಳಿಗಾಗಿ ದೊಡ್ಡ ಒಟಿಟಿ ಸಂಸ್ಥೆಯೊಂದು ಬರೋಬ್ಬರಿ 700 ಕೋಟಿ ರೂಪಾಯಿ ಡೀಲ್ ನೀಡಿತ್ತು. ಇದು ಭಾರತೀಯ ಸಿನಿಮಾ ಒಂದಕ್ಕೆ ಈ ವರೆಗೆ ನೀಡಲಾಗಿರುವ ಅತಿ ದೊಡ್ಡ ಆಫರ್ ಆಗಿದೆ. ಆದರೆ ಇದನ್ನು ಸಹ ನಮಿತ್ ಮಲ್ಹೋತ್ರಾ ನಿರಾಕರಿಸಿದ್ದಾರೆ.

ನಮಿತ್ ಮಲ್ಹೋತ್ರಾ ಅವರು ಎರಡೂ ಸಿನಿಮಾಗಳಿಗೆ ಕನಿಷ್ಟ 1000 ಕೋಟಿ ರೂಪಾಯಿ ನಿರೀಕ್ಷೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ, ಸಿನಿಮಾದ ಮೊದಲ ಭಾಗವನ್ನು ಮೊದಲಿಗೆ ಮಾರಾಟ ಮಾಡಿ ಅದು ಯಶಸ್ವಿ ಆದ ಬಳಿಕ ಎರಡನೇ ಭಾಗದ ಮಾರಾಟ ಮಾಡುವ ಯೋಜನೆಯೂ ನಮಿತ್ ಮಲ್ಹೋತ್ರಾ ಅವರಿಗಿದೆ. ‘ಧುರಂಧರ್’ ಸಿನಿಮಾ ಯಶಸ್ವಿಯಾದ ಬಳಿಕ ‘ಧುರಂಧರ್ 2’ ಸಿನಿಮಾದ ಒಟಿಟಿ ಹಕ್ಕನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಯ್ತು. ಇದೇ ಮಾದರಿಯಲ್ಲಿ ‘ರಾಮಾಯಣ’ ನಿರ್ಮಾಪಕರೂ ಸಹ ಅನುಸರಿಸಲಿದ್ದಾರೆ.

ಇದನ್ನೂ ಓದಿ:ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

‘ರಾಮಾಯಣ’ ಸಿನಿಮಾವನ್ನು ಭಾರತದ ಜೊತೆಗೆ ವಿದೇಶಗಳಲ್ಲಿಯೂ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಗಳಿಕೆ ಆಗುವ ಮೊತ್ತಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ವಿದೇಶಗಳಿಂದ ನಿರೀಕ್ಷಿಸಲಾಗುತ್ತಿದೆ. ಸಿನಿಮಾದ ಮಾರುಕಟ್ಟೆಯನ್ನು ವಿದೇಶಿ ತಂಡವೊಂದು ನೋಡಿಕೊಳ್ಳುತ್ತಿದ್ದು, ಭರ್ಜರಿ ಯೋಜನೆಯನ್ನೇ ಸಿನಿಮಾದ ಬಿಡುಗಡೆಗೆ ಹಾಕಿಕೊಂಡಿದೆ.

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ನಟ ಯಶ್ ಅವರು ಒಟ್ಟಿಗೆ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಆಂಜನೇಯ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us