ನಟ ಸಾಯಿ ಧರಮ್ ತೇಜ್ ಅವರು ಕಳೆದ ಕೆಲವು ತಿಂಗಳಿಂದ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಸೆಪ್ಟೆಂಬರ್ 10ರಂದು ಅವರಿಗೆ ಹೈದರಾಬಾದ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲವು ದಿನಗಳ ಕಾಲ ಅವರ ಕೋಮಾ ಸ್ಥಿತಿಯಲ್ಲಿ ಇದ್ದರು. ಸಾಯಿ ಧರಮ್ ತೇಜ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗಲೇ ಅವರ ‘ರಿಪಬ್ಲಿಕ್’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಪ್ರೇಕ್ಷಕರಿಂದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈಗ ಆ ಚಿತ್ರ ಓಟಿಟಿ ಪ್ಲಾಟ್ಫಾರ್ಮ್ಗೆ ಕಾಲಿಡುತ್ತಿದೆ.
ಸಾಯಿ ಧರಮ್ ತೇಜ್ಗೆ ಆಕ್ಸಿಡೆಂಟ್ ಆದಾಗ ಅವರು ಬೇಗ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಂಡಿದ್ದರು. ಆ ಕಷ್ಟದ ಪರಿಸ್ಥಿತಿಯಲ್ಲೇ ‘ರಿಪಬ್ಲಿಕ್’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದರು. ಕೋಮದಲ್ಲಿ ಇರುವ ಸಾಯಿ ಧರಮ್ ತೇಜ್ ಮೇಲಿನ ಕನಿಕರದ ಕಾರಣದಿಂದಲಾದರೂ ಪ್ರೇಕ್ಷಕರು ಬಂದು ಆ ಸಿನಿಮಾವನ್ನು ನೋಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಂಬಿಕೆ ಸುಳ್ಳಾಯಿತು. ಇದು ಸಹಜವಾಗಿಯೇ ಚಿತ್ರತಂಡಕ್ಕೆ ನಿರಾಸೆ ಮೂಡಿಸಿತ್ತು.
ಈಗ ಸಾಯಿ ಧರಮ್ ತೇಜ್ ಚೇತರಿಸಿಕೊಂಡಿದ್ದಾರೆ. ಥಿಯೇಟರ್ನಲ್ಲಿ ತಮ್ಮ ‘ರಿಪಬ್ಲಿಕ್’ ಸಿನಿಮಾ ಸೋತಿರುವುದಕ್ಕೆ ಅವರಿಗೆ ಬೇಸರ ಆಗಿದೆ. ಈಗ ಓಟಿಟಿಯಲ್ಲಿ ಪ್ರದರ್ಶನ ಕಾಣಲು ಆ ಚಿತ್ರ ಸಜ್ಜಾಗಿದೆ. ನ.26ರಂದು ಜೀ5 ಮೂಲಕ ‘ರಿಪಬ್ಲಿಕ್’ ಸಿನಿಮಾ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ಸೋತ ಸಿನಿಮಾವನ್ನು ಜನರು ಓಟಿಟಿ ವೇದಿಕೆಯಲ್ಲಾದರೂ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹಾಗಾಗಿ ಸಾಯಿ ಧರಮ್ ತೇಜ್ಗೆ ಇದನ್ನು ಸೆಕೆಂಡ್ ಚಾನ್ಸ್ ಎನ್ನಬಹುದು.
ಅ.1ರಂದು ‘ರಿಪಬ್ಲಿಕ್’ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಸಾಯಿ ಧರಮ್ ತೇಜ್ ಅವರು ಐಎಎಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಆಕ್ಸಿಡೆಂಟ್ ಆಗುವುದಕ್ಕೂ ಎರಡು ದಿನ ಮುನ್ನ ಕರುನಾಡಿನ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿಗೆ ಒಂದು ವಿಡಿಯೋ ಮೂಲಕ ಸಾಯಿ ಧರಮ್ ತೇಜ್ ಅವರು ನಮನ ಸಲ್ಲಿಸಿದ್ದರು. ‘ಥ್ಯಾಂಕ್ ಯೂ ಕಲೆಕ್ಟರ್ ಡಿಕೆ ರವಿ’ ಎಂಬ ಕ್ಯಾಪ್ಷನ್ ಜೊತೆ ಆ ವಿಡಿಯೋವನ್ನು ಸಾಯಿ ಧರಮ್ ತೇಜ್ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಡಿಕೆ ರವಿ ಅವರ ಅಪರೂಪದ ಮಾತುಗಳು ಇವೆ. ಅವರ ದಿಟ್ಟತನ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಇದೆ. ಡಿವಿ ರವಿ ಅವರನ್ನು ಧೀರ ಯೋಧ ಎಂದು ಸಾಯಿ ಧರಮ್ ತೇಜ್ ಬಣ್ಣಿಸಿದ್ದರು. ಆ ಮೂಲಕ ಅವರು ಕರುನಾಡಿನ ದಕ್ಷ ಅಧಿಕಾರಿಗೆ ನಮನ ಸಲ್ಲಿಸಿದ್ದರು. ಅದಾಗಿ ಎರಡು ದಿನ ಕಳೆಯುವುದರೊಳಗೆ ಸಾಯಿ ಧರಮ್ ತೇಜ್ಗೆ ರಸ್ತೆ ಅಪಘಾತ ಆಗಿತ್ತು.
ಇದನ್ನೂ ಓದಿ:
ಪುನೀತ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿ ಅರೆಸ್ಟ್; ಸೈಬರ್ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ
ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ