
ದಕ್ಷಿಣ ಭಾರತದಲ್ಲಿ ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಸಖತ್ ಬೇಡಿಕೆ ಇದೆ. ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅತ್ಯುತ್ತಮ ನಟನೆ ಮತ್ತು ಸಿಂಪಲ್ ವ್ಯಕ್ತಿತ್ವದ ಕಾರಣದಿಂದ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಆದರೆ ಇತ್ತೀಚೆಗೆ ಅವರು ನೀಡಿದ ಒಂದು ಹೇಳಿಕೆಯಿಂದ ಗದ್ದಲ ಸೃಷ್ಟಿ ಆಗಿತ್ತು. ಆ ಕಾರಣದಿಂದ ಅವರ ‘ವಿರಾಟ ಪರ್ವಂ’ (Virata Parvam) ಸಿನಿಮಾ ಕೂಡ ಸೊರಗುವಂತಾಯಿತು. ಜೂನ್ 17ರಂದು ತೆರೆಕಂಡ ಈ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಆದಾಯ ಹರಿದುಬರಲಿಲ್ಲ. ಆದರೆ ಈಗ ಒಟಿಟಿಯಲ್ಲಿ ಈ ಚಿತ್ರ ಧೂಳೆಬ್ಬಿಸುತ್ತಿದೆ. ನೆಟ್ಫ್ಲಿಕ್ಸ್ (Netflix) ಮೂಲಕ ಸ್ಟ್ರೀಮಿಂಗ್ ಆಗುತ್ತಿರುವ ‘ವಿರಾಟ ಪರ್ವಂ’ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಹಾಗಾಗಿ ಇದು ನಂ.1 ಟ್ರೆಂಡಿಂಗ್ನಲ್ಲಿದೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದರು. ಅವರ ಆ ಹೇಳಿಕೆಯ ಕಾರಣದಿಂದ ತಾವು ‘ವಿರಾಟ ಪರ್ವಂ’ ಚಿತ್ರವನ್ನು ಬಹಿಷ್ಕಾರ ಮಾಡುವುದಾಗಿ ಹಲವರು ಗುಡುಗಿದ್ದರು. ಆದರೆ ಈಗ ನೆಟ್ಫ್ಲಿಕ್ಸ್ನಲ್ಲಿ ಜನರು ಈ ಚಿತ್ರವನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಟ್ರೆಂಡಿಂಗ್ನಲ್ಲಿ ನಂಬರ್ ಒನ್ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಯಾರು ಎಷ್ಟೇ ಟೀಕೆ ಮಾಡಿದರೂ ಸಾಯಿ ಪಲ್ಲವಿ ನಂ.1 ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.
ರಿಯಲ್ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘ವಿರಾಟ ಪರ್ವಂ’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ನಕ್ಸಲ್ ನಾಯಕನಾಗಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ವೇಣು ಉಡುಗುಲ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಥಿಯೇಟರ್ನಲ್ಲಿ ಸೋತ ಈ ಸಿನಿಮಾ ಈಗ ಒಟಿಟಿಯಲ್ಲಿ ಸೂಪರ್ ಹಿಟ್ ಆಗಿದೆ ಎಂಬುದು ವಿಶೇಷ.
‘ಗಾರ್ಗಿ’ ಬಿಡುಗಡೆಗೆ ಸಾಯಿ ಪಲ್ಲವಿ ಸಜ್ಜು:
ಸಾಯಿ ಪಲ್ಲವಿ ನಟಿಸಿರುವ ‘ಗಾರ್ಗಿ’ ಚಿತ್ರ ಜುಲೈ 15ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾಗೆ ಗೌತಮ್ ರಾಮಚಂದ್ರನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಮಾತ್ರವಲ್ಲದೇ ಸ್ವತಃ ಸಾಯಿ ಪಲ್ಲವಿ ಅವರಿಗೂ ಸಖತ್ ನಿರೀಕ್ಷೆ ಇದೆ. ‘ಗಾರ್ಗಿ’ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಕನ್ನಡದ ಅವತರಣಿಕೆಗೆ ಸಾಯಿ ಪಲ್ಲವಿ ಅವರೇ ಡಬ್ ಮಾಡಿದ್ದಾರೆ.
ಇದನ್ನೂ ಓದಿ: Gargi Movie: ಫ್ಯಾನ್ಸ್ ಮೆಚ್ಚುವ ರೀತಿಯಲ್ಲಿ ಮತ್ತೆ ಬರುತ್ತಿದ್ದಾರೆ ಸಾಯಿ ಪಲ್ಲವಿ; ಇಲ್ಲವೆ ‘ಗಾರ್ಗಿ’ ಚಿತ್ರದ ಫೋಟೋಗಳು
Sai Pallavi: ಸಿಂಪಲ್ ಸೀರೆ ಧರಿಸಿ ಕಣ್ಮನ ಸೆಳೆದ ಸಾಯಿ ಪಲ್ಲವಿ; ಸ್ಟಾರ್ ನಟಿಗೆ ಅಭಿಮಾನಿಗಳ ಲೈಕ್ಸ್ ಸುರಿಮಳೆ
Published On - 8:19 am, Tue, 5 July 22