ಜನಪ್ರಿಯ ‘ಕಾಫಿ ವಿತ್ ಕರಣ್’ (Koffee With Karan) ಶೋಗೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಪ್ರತಿ ಎಪಿಸೋಡ್ನಲ್ಲೂ ನಿರೂಪಕ ಕರಣ್ ಜೋಹರ್ ಅವರು ಒಂದಲ್ಲಾ ಒಂದು ಕಾಂಟ್ರವರ್ಸಿ ಪ್ರಶ್ನೆ ಕೇಳುತ್ತಾರೆ. ಇದರಿಂದ ಅತಿಥಿಗಳಿಗೆ ತೊಂದರೆ ಆಗಿದ್ದುಂಟು. ಈಗ ಈ ಕಾರ್ಯಕ್ರಮದ ಹೊಸ ಎಪಿಸೋಡ್ಗೆ ಸೈಫ್ ಅಲಿ ಖಾನ್ (Saif Ali Khan) ಮತ್ತು ಅವರ ತಾಯಿ ಶರ್ಮಿಳಾ ಟ್ಯಾಗೋರ್ ಅವರು ಬಂದಿದ್ದಾರೆ. ಈ ವೇಳೆ ಕರಣ್ ಜೋಹರ್ ಅವರು ಕರೀನಾ ಕಪೂರ್ (Kareena Kapoor Khan) ಬಗ್ಗೆ ಕೇಳಿದ ಪ್ರಶ್ನೆಗಳಿಂದ ಸೈಫ್ ಅಲಿ ಖಾನ್ ಅವರಿಗೆ ಮುಜುಗರ ಆಗಿದೆ. ಈ ಸಂಚಿಕೆಯ ಪ್ರೋಮೋ ಬಿಡುಗಡೆ ಮಾಡಲಾಗಿದೆ.
ಸೈಫ್ ಅಲಿ ಖಾನ್ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ಹೀರೋ. ‘ಆದಿಪುರುಷ್’ ಮೂಲಕ ಅವರು ದಕ್ಷಿಣ ಭಾರತದಲ್ಲೂ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಸೈಫ್ ತಾಯಿ ಶರ್ಮಿಳಾ ಟ್ಯಾಗೋರ್ ಅವರು ಒಂದು ಕಾಲದ ಬ್ಯುಸಿ ನಟಿ ಆಗಿದ್ದರು. ಸೈಫ್ ಅವರ ಎರಡನೇ ಪತ್ನಿ ಕರೀನಾ ಕಪೂರ್ ಕೂಡ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ‘ಮಕ್ಕಳು ಬೇಕು ಎಂಬ ಕಾರಣಕ್ಕೆ ಸೈಫ್ ಜೊತೆ ಮದುವೆಯಾದೆ’: ಕರೀನಾ ಕಪೂರ್ ಖಾನ್
‘ಕಾಫಿ ವಿತ್ ಕರಣ್’ ಶೋಗೆ ಬರುವ ಅತಿಥಿಗಳ ಜೊತೆ ಕರಣ್ ಜೋಹರ್ ಅವರು ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ಖಾಸಗಿ ಬದುಕು ಹಾಗೂ ಲೈಂಗಿಕತೆ ಬಗ್ಗೆಯೂ ಪ್ರಶ್ನೆ ಎದುರಾಗುತ್ತದೆ. ವಿವಾದಗಳ ಕುರಿತ ವಿಷಯವನ್ನೂ ಕೆದಕಲಾಗುತ್ತದೆ. ಕೆಲವರು ಇಂಥ ಪ್ರಶ್ನೆಗಳನ್ನು ಕೂಲ್ ಆಗಿ ಸ್ವೀಕರಿಸುತ್ತಾರೆ. ಆದರೆ ಕೆಲವರು ಗರಂ ಆಗುತ್ತಾರೆ. ಸೈಫ್ ಅಲಿ ಖಾನ್ ಅವರಿಗೆ ಇರಿಸುಮುರಿಸು ಉಂಟಾಗಿದೆ.
ಮಾತಿನ ನಡುವೆ ಕರಣ್ ಜೋಹರ್ ಅವರು ಕರೀನಾ ಕಪೂರ್ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಸೈಫ್ ಅಲಿ ಖಾನ್ ವಿಚಿತ್ರವಾಗಿ ಲುಕ್ ನೀಡಿದರು. ‘ನಾನೇನೂ ಅಶ್ಲೀಲ ಪ್ರಶ್ನೆ ಕೇಳುತ್ತಿಲ್ಲ’ ಎಂದು ಕರಣ್ ಜೋಹರ್ ಸಮಜಾಯಿಷಿ ನೀಡಿದರು. ‘ತಾಯಿಯ ಎದುರಲ್ಲಿ ಇಂಥ ವಿಷಯ ಮಾತಾಡುವ ಅವಶ್ಯಕತೆ ಇಲ್ಲ’ ಎಂಬ ರೀತಿಯಲ್ಲಿ ಸೈಫ್ ಅಲಿ ಖಾನ್ ಕೈ ತೋರಿಸಿದರು. ಪ್ರೋಮೋದಲ್ಲಿ ಇದೆಲ್ಲವೂ ಹೈಲೈಟ್ ಆಗಿದೆ. ‘ಡಿಸ್ನಿ ಪ್ಲಸ್ ಹಾಟ್ ಸ್ಟಾರ್’ ಮೂಲಕ ಈ ಎಪಿಸೋಡ್ ಡಿ.28ರ ಮಧ್ಯರಾತ್ರಿಯಿಂದ ವೀಕ್ಷಣೆಗೆ ಲಭ್ಯವಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.