Salman Khan: ಐಪಿಎಲ್​ ಮುಗಿದ ಬಳಿಕ ಏನು ನೋಡ್ತೀರಿ? ಪ್ರಶ್ನೆ ಕೇಳಿದ್ದೂ ಅಲ್ಲದೇ ತಾವೇ ಬೆಸ್ಟ್​ ಸಲಹೆ ನೀಡಿದ ಸಲ್ಮಾನ್​ ಖಾನ್​

|

Updated on: May 27, 2023 | 7:15 AM

Bigg Boss OTT season 2: ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಲ್ಮಾನ್​ ಖಾನ್​ ಅವರಿಗೆ ಬೇಡಿಕೆ ಇದೆ. ನಿರೂಪಣೆ ಮೂಲಕ ಜನಮನ ಗೆದ್ದಿದ್ದಾರೆ. ಈಗ ಒಟಿಟಿಗೂ ಅವರು ಕಾಲಿಡುತ್ತಿದ್ದಾರೆ.

Salman Khan: ಐಪಿಎಲ್​ ಮುಗಿದ ಬಳಿಕ ಏನು ನೋಡ್ತೀರಿ? ಪ್ರಶ್ನೆ ಕೇಳಿದ್ದೂ ಅಲ್ಲದೇ ತಾವೇ ಬೆಸ್ಟ್​ ಸಲಹೆ ನೀಡಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್
Follow us on

ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಲ್ಮಾನ್​ ಖಾನ್​ (Salman Khan) ಅವರಿಗೆ ಬೇಡಿಕೆ ಇದೆ. ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಜನಮನ ಗೆದ್ದಿದ್ದಾರೆ. ಈಗ ಒಟಿಟಿಗೂ ಅವರು ಕಾಲಿಡುತ್ತಿದ್ದಾರೆ. ‘ಬಿಗ್​ ಬಾಸ್​ ಒಟಿಟಿ ಸೀಸನ್​ 2’ (Bigg Boss OTT 2) ಶೀಘ್ರದಲ್ಲೇ ಆರಂಭ ಆಗಲಿದೆ. ಅದರ ನಿರೂಪಣೆ ಮಾಡಲು ಸಲ್ಮಾನ್​ ಖಾನ್​ ಸಜ್ಜಾಗಿದ್ದಾರೆ. ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ (Karan Johar) ನಡೆಸಿಕೊಟ್ಟಿದ್ದರು. ಈಗ ಅವರ ಜಾಗಕ್ಕೆ ಸಲ್ಮಾನ್​ ಖಾನ್​ ಆಗಮಿಸುತ್ತಿದ್ದಾರೆ. ಅದನ್ನು ತಿಳಿಸಲು ಪ್ರೋಮೋ ಬಿಡುಗಡೆ ಆಗಿದೆ. ‘ಕ್ರೆಕೆಟ್​ ಮುಗಿದ ಬಳಿಕ ಏನು ನೋಡ್ತೀರಿ?’ ಎಂದು ಸಲ್ಮಾನ್​ ಖಾನ್​ ಅವರು ಈ ಪ್ರೋಮೋದಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರವಾಗಿ ‘ಬಿಗ್​ ಬಾಸ್​ ಒಟಿಟಿ 2’ ಕಾರ್ಯಕ್ರಮದ ಹೆಸರನ್ನು ಅವರೇ ಸೂಚಿಸಿದ್ದಾರೆ.

ಇಷ್ಟು ದಿನಗಳ ಕಾಲ ಕ್ರಿಕೆಟ್​ ಪ್ರೇಮಿಗಳು ಐಪಿಎಲ್​ ಪಂದ್ಯಗಳನ್ನು ನೋಡಿ ಎಂಜಾಯ್​ ಮಾಡಿದರು. ‘ಜಿಯೋ ಸಿನಿಮಾ’ದಲ್ಲಿ ಐಪಿಎಲ್​ ಉಚಿತವಾಗಿ ಪ್ರಸಾರ ಆಯಿತು. ಮೇ 28ರಂದು ಫೈನಲ್​ ನಡೆಯಲಿದೆ. ಆ ಬಳಿಕ ‘ಜಿಯೋ ಸಿನಿಮಾ’ದಲ್ಲಿ ಏನು ನೋಡೋದು ಎಂಬ ಚಿಂತೆ ಬೇಡ. ‘ಬಿಗ್​ ಬಾಸ್​ ಒಟಿಟಿ 2’ ಕೂಡ ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಪ್ರಸಾರ ಆಗಲಿದೆ. ಈ ಬಾರಿ ಸಲ್ಮಾನ್​ ಖಾನ್​ ಅವರು ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ.

‘ಬಿಗ್​ ಬಾಸ್​ ಒಟಿಟಿ 2’ ಕಾರ್ಯಕ್ರಮ ಹೊಸ ಪ್ರೋಮೋ ವೈರಲ್​ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಇದನ್ನು ನೋಡಿದ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಈ ಬಾರಿ ಒಟಿಟಿ ಸೀಸನ್​ಗೆ ಬರುವ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಿ’ ಎಂದು ಕೂಡ ಕೆಲವರು ಬೇಡಿಕೆ ಇಟ್ಟಿದ್ದಾರೆ. ಸಲ್ಮಾನ್​ ಖಾನ್​ ಅವರು ಇದೇ ಮೊದಲ ಬಾರಿಗೆ ಒಟಿಟಿ ಆವೃತ್ತಿಗೆ ನಿರೂಪಣೆ ಮಾಡಲಿದ್ದಾರೆ. ಆದಷ್ಟು ಬೇಗ ಈ ಶೋ ಶುರುವಾಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: Salman Khan: ಮಮತಾ ಬ್ಯಾನರ್ಜಿ ಜತೆ ಕೈ ಜೋಡಿಸಿದ ಸಲ್ಮಾನ್​ ಖಾನ್​; ರಾಜಕೀಯದ ಮುನ್ಸೂಚನೆಯೇ?

‘ಟೈಗರ್​ 3’ ಶೂಟಿಂಗ್​ ಮುಗಿಸಿದ ಸಲ್ಮಾನ್​ ಖಾನ್​:

ಸಲ್ಮಾನ್​ ಖಾನ್​ ಅವರೀಗ ‘ಟೈಗರ್​ 3’ ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್​ ಖಾನ್​ ಖಚಿತ ಪಡಿಸಿದ್ದಾರೆ. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್​ ಖಾನ್​ ಜೊತೆ ಕತ್ರಿನಾ ಕೈಫ್​, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ. ಇತ್ತೀಚೆಗೆ ಐಫಾ ಅವಾರ್ಡ್ಸ್ ಸಲುವಾಗಿ ಸಲ್ಮಾನ್​ ಖಾನ್​ ಅವರು ಅಬುಧಾಬಿಗೆ ತೆರಳಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಿನ್ನೆ ರಾತ್ರಿ ಟೈಗರ್​ 3 ಚಿತ್ರದ ಶೂಟಿಂಗ್​ನಲ್ಲಿ ನಾನು ಭಾಗಿಯಾಗಿದ್ದೆ. ಅಂತೂ ಅದರ ಚಿತ್ರೀಕರಣ ಮುಗಿಸಿದ್ದೇನೆ. ಅದು ತುಂಬ ಕಷ್ಟಕರವಾಗಿತ್ತು. ಆದರೂ ಚೆನ್ನಾಗಿತ್ತು. ದೀಪಾವಳಿ ಹಬ್ಬಕ್ಕೆ ನೀವು ಈ ಸಿನಿಮಾ ನೋಡುತ್ತೀರಿ’ ಎಂದು ಸಲ್ಮಾನ್​ ಖಾನ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.