Bigg Boss OTT: ಶೀಘ್ರವೇ ಶುರುವಾಗತ್ತೆ ಬಿಗ್ ಬಾಸ್ ಒಟಿಟಿ 2ನೇ ಸೀಸನ್; ಈ ಬಾರಿ ನಿರೂಪಕರ ಬದಲಾವಣೆ ಖಚಿತ
ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ ಇರುತ್ತವೆ. ಸೆನ್ಸಾರ್ನ ಹಂಗಿಲ್ಲದೇ ಕಾರ್ಯಕ್ರಮ ನಡೆಸಬಹುದು. ತುಂಬ ಬೋಲ್ಡ್ ಆದಂತಹ ಟಾಸ್ಕ್ಗಳನ್ನು ನೀಡಬಹುದು.
ಬಿಗ್ ಬಾಸ್ ಶೋ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿ. ಬೇರೆ ಎಲ್ಲ ರಿಯಾಲಿಟಿ ಶೋಗಳಿಗಿಂತಲೂ ಬಿಗ್ ಬಾಸ್ (Bigg Boss) ಕಾರ್ಯಕ್ರಮ ಸಂಪೂರ್ಣ ಭಿನ್ನ. ಇಲ್ಲಿನ ನಿಯಮಗಳೇ ಬೇರೆ. ಪ್ರತಿ ದಿನವೂ ಬೇರೆ ಬೇರೆ ಡ್ರಾಮಾ ನಡೆಯುತ್ತದೆ. ಪ್ರತಿ ಎಲಿಮಿನೇಷನ್ನಲ್ಲೂ ಟ್ವಿಸ್ಟ್ ಇರುತ್ತದೆ. ನೂರಾರು ದಿನಗಳ ಕಾಲ ನಡೆಯುವ ಈ ಶೋನಲ್ಲಿ ಬಗೆಬಗೆಯ ವ್ಯಕ್ತಿತ್ವದ ಸ್ಪರ್ಧಿಗಳು ಪೈಪೋಟಿ ನಡೆಸುತ್ತಾರೆ. ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಆವೃತ್ತಿ ಆರಂಭಿಸಲಾಗಿತ್ತು. ಟಿವಿಗಿಂತಲೂ ಕೊಂಚ ಡಿಫರೆಂಟ್ ಆಗಿ ಒಟಿಟಿ ಶೋ ಮೂಡಿಬಂತು. ಈಗ ‘ಬಿಗ್ ಬಾಸ್ ಒಟಿಟಿ 2ನೇ ಸೀಸನ್’ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ನಿರೂಪಕರ ಸ್ಥಾನಕ್ಕೆ ಕರಣ್ ಜೋಹರ್ ಬದಲಿಗೆ ಸಲ್ಮಾನ್ ಖಾನ್ (Salman Khan) ಅವರು ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ನಿರೂಪಣೆಯಲ್ಲಿ ಕರಣ್ ಜೋಹರ್ ಮತ್ತು ಸಲ್ಮಾನ್ ಖಾನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಹಲವು ಸೀಸನ್ಗಳನ್ನು ನಡೆಸಿಕೊಟ್ಟ ಅನುಭವ ಸಲ್ಮಾನ್ ಖಾನ್ ಅವರಿಗೆ ಇದೆ. ಅದೇ ರೀತಿ ಕರಣ್ ಜೋಹರ್ ಕೂಡ ಹಲವಾರು ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ‘ಹಿಂದಿ ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ಗೆ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಟ್ಟರೆ ಸೂಕ್ತ ಎಂದು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ: Salman Khan: ಸೋಲಿನ ನೋವು ಮರೆತು ಪೋಸ್ ಕೊಟ್ಟ ಸಲ್ಮಾನ್ ಖಾನ್; ‘ಘರ್ಜಿಸಲು ಟೈಗರ್ ರೆಡಿ’ ಎಂದ ಫ್ಯಾನ್ಸ್
ಸಲ್ಮಾನ್ ಖಾನ್ ಅವರು ಸಿನಿಮಾಗಳ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೊಂಚ ಎಡವಿದ್ದಾರೆ. ಅವರು ನಟಿಸಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸಿಲ್ಲ. ಆದರೂ ಕೂಡ ಸಲ್ಮಾನ್ ಖಾನ್ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಕಿರುತೆರೆಯಲ್ಲಿ ಅವರನ್ನು ನೋಡಲು ಜನರು ಇಷ್ಟಪಡುತ್ತಾರೆ.
ಇದನ್ನೂ ಓದಿ: Salman Khan: 100 ಕೋಟಿ ರೂಪಾಯಿ ಕ್ಲಬ್ ಸೇರಿವೆ ಸಲ್ಮಾನ್ ಖಾನ್ ನಟನೆಯ 16 ಚಿತ್ರಗಳು; ಇಲ್ಲಿದೆ ಪಟ್ಟಿ
ಟಿವಿಗೆ ಹೋಲಿಸಿದರೆ ಒಟಿಟಿಯಲ್ಲಿ ನಿರ್ಬಂಧಗಳು ಕಡಿಮೆ. ಸೆನ್ಸಾರ್ನ ಹಂಗಿಲ್ಲದೇ ಕೆಲವು ಟಾಸ್ಕ್ಗಳನ್ನು ನಡೆಸಬಹುದು. ಹಾಗಾಗಿ ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮ ಕಳೆದ ವರ್ಷ ಹೈಪ್ ಪಡೆದುಕೊಂಡಿತ್ತು. ತುಂಬ ಬೋಲ್ಡ್ ಆದಂತಹ ಟಾಸ್ಕ್ಗಳನ್ನು ನೀಡಲಾಗಿತ್ತು. 2ನೇ ಸೀಸನ್ನಲ್ಲಿ ಇನ್ನೂ ಹೆಚ್ಚಿನ ಮಸಾಲಾ ಬೆರೆಸಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.