
ಬಿಗ್ ಬಾಸ್ ಎಂದರೆ ಬರಿ ಆಟ ಅಲ್ಲ. ದೊಡ್ಮನೆಯಲ್ಲಿ ಭರಪೂರ ಭಾವನೆಗಳಿಗೂ ಜಾಗ ಇದೆ. ಅನೇಕ ಸ್ಪರ್ಧಿಗಳಿಗೆ ಪ್ರೀತಿ ಚಿಗುರಿದ ಉದಾಹರಣೆ ಸಾಕಷ್ಟಿದೆ. ಅಲ್ಲಿ ಸ್ಪರ್ಧಿಸಿದ ಬಳಿಕ ಮದುವೆ ಆದವರೂ ಇದ್ದಾರೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್ ಬಾಸ್ (Bigg Boss Kannada OTT) ಕಾರ್ಯಕ್ರಮ ನಡೆದಿದೆ. ಈ ಸೀಸನ್ನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಪಡೆದುಕೊಂಡಿದ್ದರು. ಅಂತಿಮವಾಗಿ 8 ಜನರು ಫಿನಾಲೆ ವಾರದವರೆಗೂ ಬಂದರು. ಆ ಪೈಕಿ ಕೆಲವರ ನಡುವೆ ಅತಿ ಹೆಚ್ಚು ಸ್ನೇಹ-ಸಲುಗೆ ಬೆಳೆಯಿತು. ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ (Sanya Iyer) ಜೊತೆ ಹೆಚ್ಚು ಆತ್ಮೀಯವಾಗಿ ನಡೆದುಕೊಂಡರು. ಇದೇ ವಿಚಾರದ ಬಗ್ಗೆ ಬಿಗ್ ಬಾಸ್ ಕನ್ನಡ ಒಟಿಟಿ ಫಿನಾಲೆಯಲ್ಲೂ ಚರ್ಚೆ ಆಗಿದೆ. ಸಾನ್ಯಾಗೆ ರೂಪೇಶ್ ಶೆಟ್ಟಿ (Roopesh Shetty) ಅವರು ಸಾನ್ಯಾ ಶೆಟ್ಟಿ ಎಂದು ಕರೆದಿದ್ದರು ಎಂಬುದು ಗೊತ್ತಾಗಿದೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಟಿವಿಯಲ್ಲಿ ಸತತವಾಗಿ 8 ಸೀಸನ್ಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ. ಒಟಿಟಿ ಸೀಸನ್ ಕೂಡ ಅವರ ನಿರೂಪಣೆಯಲ್ಲೇ ಯಶಸ್ವಿಯಾಗಿ ಮೂಡಿಬಂದಿದೆ. ಇಂದು (ಸೆ.16) ಇದರ ಫಿನಾಲೆ ಸಂಚಿಕೆ ಪ್ರಸಾರ ಆಗಿದೆ. ಈ ವೇಳೆ ರೂಪೇಶ್ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್ ಅವರು ರೂಪಿ ಎಂದು ಕರೆದರು. ಅದು ಸುದೀಪ್ ಅವರ ಗಮನ ಸೆಳೆಯಿತು.
‘ಕೊನೇ ದಿನದ ರಾತ್ರಿ ನಿದ್ರೆ ಬಂತಾ’ ಎಂದು ಸುದೀಪ್ ಕೇಳಿದರು. ‘ಕೊನೆಯಲ್ಲಿ ಮಲಗಿದ್ದು ನಾನು ಮತ್ತು ರೂಪಿ’ ಎಂದು ಸಾನ್ಯಾ ಹೇಳಿದರು. ‘ರೂಪಿ ಎಂದರೆ ಯಾರು’ ಎಂದು ಪ್ರಶ್ನೆ ಕಿಚ್ಚನ ಕಡೆಯಿಂದ ಬಂತು. ‘ರೂಪಿ ಎಂದರೆ ರೂಪೇಶ್’ ಎಂದರು ಸಾನ್ಯಾ. ‘ಅವರು ನಿಮಗೆ ಏನಂಥ ಕರೆದರೆ ಇಷ್ಟ’ ಎಂದು ಸಾನ್ಯಾಗೆ ಸುದೀಪ್ ಪ್ರಶ್ನಿಸಿದರು. ‘ಸಾನ್ಯಾ ಶೆಟ್ಟಿ ಅಂತ ಬಂತು ಸರ್. ಅದು ನನಗೆ ಸಖತ್ ಇಷ್ಟ ಆಯ್ತು’ ಎಂದು ಸಾನ್ಯಾ ಅವರು ನೇರವಾಗಿ ಹೇಳಿದ್ದಾರೆ. ‘ನಾನು ಇಲ್ಲಿ ಏನೋ ಬೇರೆ ಪ್ರೊಫೆಷನ್ ಶುರು ಮಾಡಿದ್ದೇನೆ ಎಂಬ ಫೀಲಿಂಗ್ ಬರುತ್ತಿದೆ’ ಎಂದು ಸುದೀಪ್ ಕೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.
ಫಿನಾಲೆ ವಾರದವರೆಗೂ ಬಂದ ಸೋನು ಶ್ರೀನಿವಾಸ್ ಗೌಡ ಮತ್ತು ರಾಕೇಶ್ ಅಡಿಗ ನಡುವೆಯೂ ಅದೇ ರೀತಿಯ ಆತ್ಮೀಯತೆ ಇತ್ತು. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕಾಲ ಅವರಿಬ್ಬರು ಜೊತೆಯಾಗಿ ಇರುತ್ತಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Fri, 16 September 22