‘ಕಾಫಿ ವಿತ್​ ಕರಣ್​’ ಶೋಗೆ ಸಾರಾ ಅಲಿ ಖಾನ್​ ಅತಿಥಿ; ಮತ್ತೆ ಅದೇ ವಿವಾದದ ಬಗ್ಗೆ ಪ್ರಶ್ನೆ ಎದುರಾಗುತ್ತಾ?

|

Updated on: Nov 03, 2023 | 11:11 AM

Koffee with Karan: ಕರಣ್​ ಜೋಹರ್ ಅವರು ಎಲ್ಲ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ. ಇಂಥ ಶೋಗಳ ನಿರೂಪಣೆಯ ಜೊತೆಗೆ ಸಿನಿಮಾಗಳ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಅವರು ಬ್ಯುಸಿ ಆಗಿದ್ದಾರೆ. ನೆಪೋಟಿಸಂ ವಿಚಾರದಲ್ಲಿ ಅವರನ್ನು ಹೆಚ್ಚಾಗಿ ಟ್ರೋಲ್​ ಮಾಡಲಾಗುತ್ತದೆ. ‘ಕಾಫಿ ವಿತ್​ ಕರಣ್​’ ಶೋ ಕೂಡ ಹಲವು ವಿವಾದಕ್ಕೆ ಕಾರಣ ಆಗಿದೆ.

‘ಕಾಫಿ ವಿತ್​ ಕರಣ್​’ ಶೋಗೆ ಸಾರಾ ಅಲಿ ಖಾನ್​ ಅತಿಥಿ; ಮತ್ತೆ ಅದೇ ವಿವಾದದ ಬಗ್ಗೆ ಪ್ರಶ್ನೆ ಎದುರಾಗುತ್ತಾ?
ಸಾರಾ ಅಲಿ ಖಾನ್​
Follow us on

ಕರಣ್​ ಜೋಹರ್​ ಅವರಿಗೆ ವಿವಾದ ಹೊಸದೇನೂ ಅಲ್ಲ. ಅವರು ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ (Koffee with Karan) ಶೋ ಕೂಡ ಹಲವು ಕಾರಣಗಳಿಂದ ವಿವಾದ ಸೃಷ್ಟಿ ಮಾಡಿದ್ದುಂಟು. ಕೆಲವೇ ದಿನಗಳ ಹಿಂದೆ ಪ್ರಸಾರವಾದ ಎಪಿಸೋಡ್​ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್​ ಭಾಗಿ ಆಗಿದ್ದರು. ಅವರಿಬ್ಬರು ಆ ಸಂಚಿಕೆಯಲ್ಲಿ ಮಾತನಾಡಿದ ವಿಚಾರ ಸಖತ್​ ಟ್ರೋಲ್​ ಆಗಿತ್ತು. ಅದರಿಂದ ನಿಜಕ್ಕೂ ಲಾಭ ಆಗಿದ್ದು ಕರಣ್​ ಜೋಹರ್​ (Karan Johar) ಅವರಿಗೆ. ಯಾಕೆಂದರೆ, ಈ ವಿವಾದಗಳಿಂದ ಈ ಶೋಗೆ ಸಖತ್​ ಪ್ರಚಾರ ಸಿಕ್ಕಿದೆ. ಈಗ ಇದರ ಹೊಸ ಎಪಿಸೋಡ್​ನಲ್ಲಿ ಸಾರಾ ಅಲಿ ಖಾನ್ (Sara Ali Khan)​ ಮತ್ತು ಅನನ್ಯಾ ಪಾಂಡೆ ಭಾಗವಹಿಸಲಿದ್ದಾರೆ. ಮತ್ತೆ ಕರಣ್​ ಜೋಹರ್​ ಅವರು ವಿವಾದದ ಪ್ರಶ್ನೆಯನ್ನೇ ಎತ್ತುವ ಸಾಧ್ಯತೆ ಇದೆ.

ಸಾರಾ ಅಲಿ ಖಾನ್​ ಅವರು ತಮ್ಮ ನಂಬಿಕೆ ಮತ್ತು ಆಚರಣೆಗಳ ಕಾರಣದಿಂದ ಆಗಾಗ ಟ್ರೋಲ್​ಗೆ ಒಳಗಾಗಿದ್ದುಂಟು. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮವನ್ನು ಅವರು ಪಾಲಿಸುತ್ತಾರೆ. ಅಲ್ಲದೇ ಎಲ್ಲ ಧರ್ಮಗಳ ಬಗ್ಗೆಯೂ ಅವರಿಗೆ ನಂಬಿಕೆ ಇದೆ. ಹಾಗಾಗಿ ಅವರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದುಂಟು. ಹಿಂದೂ ದೇವಾಲಯಗಳಿಗೆ ಅವರು ಭೇಟಿ ನೀಡಿದಾಗ ಅನೇಕರು ಟೀಕೆ ಮಾಡಿದ್ದುಂಟು. ಅದರ ಬಗ್ಗೆ ಈಗಾಗಲೇ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ ಕೂಡ ಕರಣ್​ ಜೋಹರ್​ ಅವರು ಅದೇ ವಿಚಾರವನ್ನು ಮತ್ತೆ ಕೆದಕುತ್ತಾರಾ ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ: ಪದೇಪದೇ ಕಿಡಿಕಾರುವ ಕಂಗನಾಗೂ ಪ್ರೀತಿ ತೋರಿದ ಕರಣ್​ ಜೋಹರ್​; ‘ಎಮರ್ಜೆನ್ಸಿ’ ನೋಡಲು ಕಾತರ

ಇನ್ನು, ಅನನ್ಯಾ ಪಾಂಡೆ ಅವರು ಇತ್ತೀಚೆಗೆ ರಿಲೇಷನ್​ಶಿಪ್​ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ನಟ ಸಿದ್ದಾರ್ಥ್​ ರಾಯ್​ ಕಪೂರ್​ ಜೊತೆ ಅವರ ಲವ್ವಿಡವ್ವಿ ನಡೆಯುತ್ತಿದೆ ಎಂಬುದು ಬಹುತೇಕರ ಅನುಮಾನ. ಅದಕ್ಕೆ ಸಾಕ್ಷಿ ಒದಗಿಸುವಂತಹ ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಇದರ ಬಗ್ಗೆ ಕರಣ್ ಜೋಹರ್​ ಅವರ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಪ್ರಶ್ನೆ ಕೇಳುವ ಸಾಧ್ಯತೆ ಇದೆ. ಈ ವೇಳೆ ಅನನ್ಯಾ ಪಾಂಡೆ ಅವರು ತಮ್ಮ ಪ್ರೀತಿ-ಪ್ರೇಮದ ವಿಚಾರವನ್ನು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ವಿಡಿಯೋ ಸಮೇತ ಕರಣ್​ ಜೋಹರ್​ ಬಣ್ಣ ಬಯಲು ಮಾಡಿದ ನಟಿ ಕಂಗನಾ ರಣಾವತ್​

ಕರಣ್​ ಜೋಹರ್ ಅವರು ಎಲ್ಲ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ. ಇಂಥ ಶೋಗಳ ನಿರೂಪಣೆಯ ಜೊತೆಗೆ ಸಿನಿಮಾಗಳ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಅವರು ಬ್ಯುಸಿ ಆಗಿದ್ದಾರೆ. ಈ ವರ್ಷ ಅವರು ನಿರ್ದೇಶಿಸಿದ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ. ಈ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸಿದ್ದಾರೆ. ಒಟಿಟಿಯಲ್ಲಿ ಬಿಡುಗಡೆ ಆದಾಗಲೂ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.