ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ದೊಡ್ಮನೆಯಲ್ಲಿ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಟಾಸ್ಕ್ ಇಲ್ಲದೆ ಇದ್ದಾಗ ಸೋನು ಪೆಟ್ಟು ಮಾಡಿಕೊಂಡರು ಅನ್ನೋದು ಅಚ್ಚರಿಯ ವಿಚಾರ!
ಬಿಗ್ ಬಾಸ್ ಮನೆಯಲ್ಲಿ ಎರಡು ಟೀಂ ಮಾಡಲಾಗಿದೆ. ಒಂದು ಟೀಂಗೆ ನಂದು ಕ್ಯಾಪ್ಟನ್ ಆದರೆ ಮತ್ತೊಂದು ಟೀಂಗೆ, ಸೋಮಣ್ಣ ನಾಯಕ. ಪ್ರತಿ ಟೀಂಗೆ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಅನ್ವಯ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಇಲ್ಲಿ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿರಲಾಗುತ್ತದೆ. ಒಬ್ಬರು ಅಲ್ಲಿಟ್ಟ ತಿಂಡಿ ತಿನ್ನಬೇಕು. ಆ ತಿಂಡಿ ಹೇಗಿದೆ ಎಂಬುದನ್ನು ರುಚಿಯ ಆಧಾರದ ಮೇಲೆ ವಿವರಿಸಬೇಕು. ಎದುರಿದ್ದವರು ಅದು ಯಾವ ತಿಂಡಿ ಎಂದು ಹೇಳಬೇಕು. ಈ ಆಟದಲ್ಲಿ ನಂದು ತಂಡದವರು ಗೆದ್ದರು.
ನಂದು ಟೀಂನಲ್ಲಿ ಸೋನು ಕೂಡ ಇದ್ದರು. ಅವರು ಆಟ ಆಡಿಲ್ಲ. ಆದರೂ ತಂಡ ಗೆದ್ದಿದೆ. ‘ಸೋನು ಆಟ ಆಡಿಲ್ಲ. ಆದರೂ ಅವರ ತಂಡ ಗೆದ್ದಿದೆ. ಅವರು ಲಕ್ಕಿ ಚಾರ್ಮ್’ ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಸೋನುಗೆ ಸಖತ್ ಖುಷಿ ಆಗಿದೆ. ಅವರು ಹಿರಿಹಿರಿ ಹಿಗ್ಗಿದ್ದಾರೆ.
ಇದನ್ನೂ ಓದಿ: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?
‘ಬಿಗ್ ಬಾಸ್ನಲ್ಲಿ ಕಬ್ಬಡ್ಡಿ ಆಡುವ ಟಾಸ್ಕ್ ನೀಡಬೇಕಿತ್ತು’ ಎಂದು ಸೋಮಣ್ಣ ಹೇಳಿದರು. ‘ನಾನು ಕಬಡ್ಡಿನ ಸಖತ್ ಆಗಿ ಆಡ್ತೀನಿ’ ಎಂದರು ಸೋನು. ಸೋಮಣ್ಣ ಅವರು ನಾನು ಕೂಡ ಕಬಡ್ಡಿ ಚೆನ್ನಾಗಿ ಆಡ್ತೀನಿ ಎಂದರು. ಸೋಮಣ್ಣ ಹಾಗೂ ಸೋನು ಇಬ್ಬರೂ ಮನೆಯಲ್ಲೇ ಕಬಡಿ ಆಡೋಕೆ ಶುರು ಮಾಡಿದರು. ಈ ವೇಳೆ ಸೋನು ಕೈ ಗಾಜಿಗೆ ಹೊಡೆದಿದೆ. ಈ ಸಂದರ್ಭದಲ್ಲಿ ಅವರ ಕೈಗೆ ಗಾಯ ಆಗಿದೆ. ನಂತರ ಅವರ ಕೈಗೆ ಹೊಲಿಗೆ ಹಾಕಲಾಗಿದೆ. ದೊಡ್ಡ ಗಾಯ ಆಗಿದ್ದರಿಂದ ಸೋನು ತೀವ್ರ ನೋವು ಅನುಭವಿಸಿದ್ದಾರೆ. ಬ್ಯಾಂಡೇಜ್ ಹಾಕಿಕೊಂಡೇ ಟಾಸ್ಕ್ ಪೂರ್ತಿ ಮಾಡಿದ್ದಾರೆ.
Published On - 8:09 pm, Tue, 16 August 22