ಇತ್ತೀಚೆಗಷ್ಟೇ ‘ಸ್ಕ್ವಿಡ್ ಗೇಮ್’ ವೆಬ್ ಸೀರಿಸ್ನ ಎರಡನೇ ಸೀಸನ್ ಪ್ರಸಾರ ಕಂಡಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಈ ಸರಣಿ ಪ್ರಸಾರ ಆರಂಭಿಸಿದೆ. ಈ ಬಾರಿ ಗೇಮ್ ಮಾತ್ರ ಇರಲಿಲ್ಲ. ಆಟ ನಡೆಯುವ ಜಾಗಕ್ಕೆ ನುಗ್ಗುವ ಕಥಾ ನಾಯಕ ರೆಬೆಲ್ ಆಗುವ ಮೂಲಕ ಅಲ್ಲಿನ ಚಿತ್ರಣವನ್ನೇ ಬದಲಿಸಿಬಿಡುತ್ತಾನೆ. ಕೊನೆಯ ಎಪಿಸೋಡ್ನಲ್ಲಿ ಈ ಕಥೆ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೊಡಲಾಗಿತ್ತು. ಈಗ ಮೂರನೇ ಸರಣಿಯ ಪ್ರಸಾರ ದಿನಾಂಕ ರಿವೀಲ್ ಆಗಿದೆ.
ಸೀಸನ್ 2ರ ಕೊನೆಯಲ್ಲಿ ಮೂರನೇ ಸೀಸನ್ನ ಟೀಸರ್ ತೋರಿಸಲಾಗುತ್ತದೆ. ‘ರೆಡ್ ಲೈಟ್ ಗ್ರೀನ್ ಲೈಟ್’ ಗೇಮ್ನಲ್ಲಿ ಈ ಮೊದಲು ಹುಡುಗಿಯ ಗೊಂಬೆ ಮಾತ್ರ ಇತ್ತು. ಆದರೆ, ಈಗ ತೋರಿಸಿರೋ ಟೀಸರ್ನಲ್ಲಿ ಹುಡುಗನ ಗೊಂಬೆಯನ್ನೂ ತೋರಿಸಲಾಗಿದೆ. ಈ ಮೂಲಕ ಮುಂದಿನ ಆಟ ಮತ್ತಷ್ಟು ಡೆಡ್ಲಿ ಆಗಿರಲಿದೆ ಎನ್ನುವ ಸೂಚನೆ ನೀಡಲಾಗಿದೆ. 2025ರಲ್ಲಿ ಹೊಸ ಸೀಸನ್ ಬರಲಿದೆ ಎಂದು ಉಲ್ಲೇಖಿಸಲಾಗಿದೆ.
ಇದೇ ಟೀಸರ್ನ ನೆಟ್ಫ್ಲಿಕ್ಸ್ ಯೂಟ್ಯೂಬ್ನಲ್ಲೂ ಅಪ್ಲೋಡ್ ಮಾಡಿತ್ತು. ಈ ವೇಳೆ ‘2025ರ ಜೂನ್ 27’ ಎಂಬ ಡೇಟ್ ಕೂಡ ಕ್ಯಾಪ್ಶನ್ನಲ್ಲಿ ಹಾಕಲಾಗಿತ್ತು. ಆ ಬಳಿಕ ಅಚಾತುರ್ಯವನ್ನು ಅರಿತ ನೆಟ್ಫ್ಲಿಕ್ಸ್ ವಿಡಿಯೋನ ಪ್ರೈವೇಟ್ ಮಾಡಿ, ಕ್ಯಾಪ್ಶನ್ ಬದಲಿಸಿದೆ. ಆದರೆ, ಆಗಲೇ ಎಲ್ಲಕಡೆಗಳಲ್ಲಿ ಇದರ ಸ್ಕ್ರೀನ್ಶಾಟ್ಗಳು ಹರಿದಾಡಿವೆ.
Attention, players. Squid Game Season 2 is the #1 show on Netflix in 92 countries.
⏺️ 68 million views
🔼 The most views ever for a show in its first week
⏹️ Already Netflix’s seventh most popular non-English TV showSquid Game Season 3? Coming 2025. pic.twitter.com/xoACyqG6mC
— Netflix (@netflix) December 31, 2024
ಕೆಲವರು ಜೂನ್ 27ಕ್ಕೆ ‘ಸ್ಕ್ವಿಡ್ ಗೇಮ್’ನ ಮೂರನೇ ಸೀಸನ್ ಪ್ರಸಾರ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಇದು ನೆಟ್ಫ್ಲಿಕ್ಸ್ನವರು ವೀಕ್ಷಕರ ದಾರಿ ತಪ್ಪಿಸಲು ಮಾಡಿದ ತಂತ್ರ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ನ ಹಳೆಯ ದಾಖಲೆಗಳನ್ನು ಮುರಿದ ‘ಸ್ಕ್ವಿಡ್ ಗೇಮ್ಸ್ 2’
ಈಗಾಗಲೇ ‘ಸ್ಕ್ವಿಡ್ ಗೇಮ್ 3’ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಪ್ಲೇಯರ್ 456 ರೆಬೆಲ್ ಆಗಿದ್ದಾನೆ. 001 ಪ್ಲೇಯರ್ ಮಾಡಿದ ವಂಚನೆ ಜಾಲಕ್ಕೆ ಸಿಲುಕಿದ್ದಾನೆ. 456 ಪ್ಲೇಯರ್ನ ಆಪ್ತನ ಹತ್ಯೆ ಮಾಡಿ, ಆತನ ಉಳಿಸಲಾಗಿದೆ. ಮುಂದಿನ ಸೀಸನ್ನಲ್ಲಿ ಪ್ಲೇಯರ್ 456 ಹೇಗೆ ಬಚಾವ್ ಆಗುತ್ತಾನೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.