Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಟ್​ಫ್ಲಿಕ್ಸ್​ನ ಹಳೆಯ ದಾಖಲೆಗಳನ್ನು ಮುರಿದ ‘ಸ್ಕ್ವಿಡ್ ಗೇಮ್ಸ್ 2’

Squid Games season 2: ವಾರದ ಹಿಂದಷ್ಟೆ ನೆಟ್​ಫ್ಲಿಕ್ಸ್​ನಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 2’ ವೆಬ್ ಸರಣಿ ಬಿಡುಗಡೆ ಆಗಿದೆ. ‘ಸ್ಕ್ವಿಡ್ ಗೇಮ್ಸ್ ಸೀಸನ್ 2’ ವೆಬ್ ಸರಣಿ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಾಗಿದ್ದರೂ ಸಹ ನೆಟ್​ಫ್ಲಿಕ್ಸ್​ನ ಈ ಹಿಂದಿನ ಹಲವು ದಾಖಲೆಗಳಣ್ನು ನೆಟ್​ಫ್ಲಿಕ್ಸ್​ನ ಹಳೆಯ ದಾಖಲೆಗಳನ್ನು ಮುರಿದ ‘ಸ್ಕ್ವಿಡ್ ಗೇಮ್ಸ್ 2’

ನೆಟ್​ಫ್ಲಿಕ್ಸ್​ನ ಹಳೆಯ ದಾಖಲೆಗಳನ್ನು ಮುರಿದ ‘ಸ್ಕ್ವಿಡ್ ಗೇಮ್ಸ್ 2’
Squid Games
Follow us
ಮಂಜುನಾಥ ಸಿ.
|

Updated on: Jan 02, 2025 | 12:10 PM

ಕೋವಿಡ್ ಸಮಯದಲ್ಲಿ ವೆಬ್ ಸರಣಿಗಳ ಜನಪ್ರಿಯತೆ ತಾರಕ್ಕೇರಿತ್ತು, ಕೋವಿಡ್ ಬಳಿಕವೂ ಅದು ಮುಂದುವರೆದಿದೆ. ಕೋವಿಡ್ ಸಮಯದಲ್ಲಿ ನೆಟ್​ಫ್ಲಿಕ್ಸ್​ ಹಾಗೂ ಇತರೆ ಕೆಲವು ಒಟಿಟಿ ವೇದಿಕೆಗಳು ಈ ವೆಬ್ ಸರಣಿಗಳನ್ನು ಒಂದರ ಹಿಂದೊಂದರಂತೆ ಸ್ಟ್ರೀಮ್ ಮಾಡಿದವು. ಜನ ಸಹ ಬಿಂಜ್ ವಾಚ್ ಹೆಸರಲ್ಲಿ ಗಂಟೆಗಟ್ಟಲೆ ವೆಬ್ ಸರಣಿಗಳನ್ನು ನೋಡಿದರು. ‘ಮನಿ ಹೈಸ್ಟ್’, ‘ಸ್ಕ್ವಿಡ್ ಗೇಮ್ಸ್’, ‘ವೆಡ್​ನೆಸ್​ಡೇ’, ‘ಬೆಟರ್ ಕಾಲ್ ಸೋಲ್’ ಇನ್ನೂ ಹಲವು ಅತ್ಯುತ್ತಮ ವೆಬ್ ಸರಣಿಗಳು ಕೋವಿಡ್ ಮತ್ತು ಅದರ ಬಳಿಕ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿ ದಾಖಲೆ ಬರೆದವು. ಕೋವಿಡ್ ಸಮಯದಲ್ಲಿ ಬಹಳ ಜನಪ್ರಿಯತೆ ಗಳಿಸಿದ್ದ ‘ಸ್ಕ್ವಿಡ್ ಗೇಮ್ಸ್​’ನ ಎರಡನೇ ಭಾಗ ಇದೀಗ ಬಿಡುಗಡೆ ಆಗಿದ್ದು, ಮೊದಲ ಸೀಸನ್​ನಂತೆ ಎರಡನೇ ಸೀಸನ್ ಸಹ ದಾಖಲೆ ಬರೆದಿದೆ.

ಕೊರಿಯನ್ ವೆಬ್ ಸರಣಿಯಾದ ‘ಸ್ಕ್ವಿಡ್ ಗೇಮ್ಸ್’ ಒಂದು ಥ್ರಿಲ್ಲರ್ ರಿಯಾಲಿಟಿ ಶೋ ಬಗೆಗಿನ ಕತೆ ಒಳಗೊಂಡಿದೆ. ಅದೃಷ್ಟದ ಆಟಗಳನ್ನು ಆಡಿಸಿ ಯಾರು ಸೋಲುತ್ತಾರೊ ಅವರನ್ನು ಕೊಲ್ಲುವ ಆಟ ಇದಾಗಿದೆ. ಮೊದಲ ‘ಸ್ಕ್ವಿಡ್ ಗೇಮ್ಸ್’ ತಮ್ಮ ಥ್ರಿಲ್ಲರ್ ಗುಣದಿಂದಾಗಿ ಭಾರಿ ಯಶಸ್ಸು ಗಳಿಸಿತ್ತು.ಬಿಡುಗಡೆ ಆದ ಕೆಲವೇ ವಾರದಲ್ಲಿ ಲಕ್ಷಾಂತರ ಕೋಟಿ ಗಂಟೆಗಳ ಸ್ಟ್ರೀಮಿಂಗ್ ಅನ್ನು ನೆಟ್​ಫ್ಲಿಕ್ಸ್​ನಲ್ಲಿ ದಾಖಲಿಸಿತ್ತು. ಇದೀಗ ‘ಸ್ಕ್ವಿಡ್ ಗೇಮ್ಸ್ 2’ ನೆಟ್​ಫ್ಲಿಕ್ಸ್​ನ ಹಲವು ದಾಖಲೆಗಳನ್ನು ಮುರಿದಿದೆ.

ಇದನ್ನೂ ಓದಿ:OTT Release: ಈ ವಾರ ಒಟಿಟಿಗೆ ಬಂದಿವೆ ಬೊಂಬಾಟ್ ಸಿನಿಮಾಗಳು

‘ಸ್ಕ್ವಿಡ್ ಗೇಮ್ಸ್ 2’ ಬಿಡುಗಡೆ ಆಗಿ ಒಂದೇ ವಾರದಲ್ಲಿ 60.8 ಮಿಲಿಯನ್ ವೀವ್ಸ್ ಕಂಡಿದೆ. ಅಂದರೆ ಸುಮಾರು ಏಳು ಕೋಟಿ ಜನ ಮೊದಲ ವಾರದಲ್ಲಿಯೇ ‘ಸ್ಕ್ವಿಡ್ ಗೇಮ್ಸ್ 2’ ವೆಬ್ ಸರಣಿ ವೀಕ್ಷಣೆ ಮಾಡಿದ್ದಾರೆ. ಇದು ನೆಟ್​ಫ್ಲಿಕ್ಸ್​ನ ಈವರೆಗಿನ ದಾಖಲೆ ಆಗಿದೆ. ಈ ಹಿಂದೆ ‘ವೆಡ್​ನಸ್​ ಡೇ’ ವೆಬ್ ಸರಣಿಯಲ್ಲಿ ಮೊದಲ ವಾರದಲ್ಲಿ ಸುಮಾರು 5 ಕೋಟಿ ಜನ ವೀಕ್ಷಣೆ ಮಾಡಿದ್ದರು. ‘ಸ್ಕ್ವಿಡ್ ಗೇಮ್ಸ್ 2’ ಬಿಡುಗಡೆ ಆದ ಒಂದೇ ವಾರದಲ್ಲಿ ಅತ್ಯಂತ ಜನಪ್ರಿಯ ಇಂಗ್ಲೀಷ್​ಯೇತರ ವೆಬ್ ಸರಣಿಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ. ಈ ವೆಬ್ ಸರಣಿ ಮೊದಲ ಸ್ಥಾನ ಪಡೆದುಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ.

ಅಂದಹಾಗೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವೆಬ್ ಸರಣಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ‘ಸ್ಕ್ವಿಡ್ ಗೇಮ್ಸ್ ಸೀಸನ್ 1’ ಇದೆ. ಕೊರಿಯನ್ ಸೀರೀಸ್ ಇದಾಗಿದ್ದರೂ ಸಹ ‘ಸ್ಟ್ರೇಂಜರ್ ಥಿಂಗ್ಸ್’, ‘ವೆಡ್​ನೆಸ್​ಡೇ’, ‘ಬ್ರಿಡ್ಜರ್​ಟನ್’ ಅಂಥಹಾ ಜನಪ್ರಿಯ ಇಂಗ್ಲೀಷ್ ವೆಬ್ ಸರಣಿಗಳನ್ನೇ ಹಿಂದಿಕ್ಕಿದೆ. ‘ಮನಿ ಹೈಸ್ಟ್’ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇದೀಗ ‘ಸ್ಕ್ವಿಡ್ ಗೇಮ್ಸ್ 2’ ಸಹ ಭರ್ಜರಿ ಜನಪ್ರಿಯತೆ ಗಳಿಸುತ್ತಿದ್ದು, ಇದು ಮೊದಲ ಅಥವಾ ಎರಡನೇ ಸ್ಥಾನಕ್ಕೆ ಏರುವ ನಿರೀಕ್ಷೆ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ