ನೆಟ್​ಫ್ಲಿಕ್ಸ್​ ಮಾಡಿದ ಅಚಾತುರ್ಯದಿಂದ ರಿವೀಲ್ ಆಯ್ತು ‘ಸ್ಕ್ವಿಡ್ ಗೇಮ್ 3’ ರಿಲೀಸ್ ದಿನಾಂಕ

‘ಸ್ಕ್ವಿಡ್ ಗೇಮ್ ಸೀಸನ್ 2’ರ ಅಂತ್ಯದಲ್ಲಿ ಸೀಸನ್ 3ರ ಟೀಸರ್ ತೋರಿಸಲಾಗಿದೆ. ಈ ಸೀಸನ್ ರಿಲೀಸ್ ಆಗುವ ಸುಳಿವು ನೆಟ್‌ಫ್ಲಿಕ್ಸ್‌ನಿಂದ ಸೋರಿಕೆಯಾಗಿದೆ. ಟೀಸರ್​ನಲ್ಲಿ ಹುಡುಗನ ಗೊಂಬೆಯನ್ನು ಸೇರಿಸಿರುವುದು ಆಟ ಮತ್ತಷ್ಟು ಅಪಾಯಕಾರಿಯಾಗಲಿದೆ ಎಂದು ಸೂಚಿಸುತ್ತದೆ. ಪ್ಲೇಯರ್ 456ನ ಭವಿಷ್ಯ ಮತ್ತು 001ರ ವಂಚನೆ ಜಾಲದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ನೆಟ್​ಫ್ಲಿಕ್ಸ್​ ಮಾಡಿದ ಅಚಾತುರ್ಯದಿಂದ ರಿವೀಲ್ ಆಯ್ತು ‘ಸ್ಕ್ವಿಡ್ ಗೇಮ್ 3’ ರಿಲೀಸ್ ದಿನಾಂಕ
ಸ್ಕ್ವಿಡ್ ಗೇಮ್
Follow us
ರಾಜೇಶ್ ದುಗ್ಗುಮನೆ
|

Updated on: Jan 03, 2025 | 11:49 AM

ಇತ್ತೀಚೆಗಷ್ಟೇ ‘ಸ್ಕ್ವಿಡ್ ಗೇಮ್’ ವೆಬ್​ ಸೀರಿಸ್​ನ ಎರಡನೇ ಸೀಸನ್ ಪ್ರಸಾರ ಕಂಡಿದೆ. ಕ್ರಿಸ್​ಮಸ್ ಸಂದರ್ಭದಲ್ಲಿ ಈ ಸರಣಿ ಪ್ರಸಾರ ಆರಂಭಿಸಿದೆ. ಈ ಬಾರಿ ಗೇಮ್ ಮಾತ್ರ ಇರಲಿಲ್ಲ. ಆಟ ನಡೆಯುವ ಜಾಗಕ್ಕೆ ನುಗ್ಗುವ ಕಥಾ ನಾಯಕ ರೆಬೆಲ್ ಆಗುವ ಮೂಲಕ ಅಲ್ಲಿನ ಚಿತ್ರಣವನ್ನೇ ಬದಲಿಸಿಬಿಡುತ್ತಾನೆ. ಕೊನೆಯ ಎಪಿಸೋಡ್​ನಲ್ಲಿ ಈ ಕಥೆ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೊಡಲಾಗಿತ್ತು. ಈಗ ಮೂರನೇ ಸರಣಿಯ ಪ್ರಸಾರ ದಿನಾಂಕ ರಿವೀಲ್ ಆಗಿದೆ.

ಸೀಸನ್ 2ರ ಕೊನೆಯಲ್ಲಿ ಮೂರನೇ ಸೀಸನ್​ನ ಟೀಸರ್ ತೋರಿಸಲಾಗುತ್ತದೆ. ‘ರೆಡ್ ಲೈಟ್ ಗ್ರೀನ್​ ಲೈಟ್’ ಗೇಮ್​ನಲ್ಲಿ ಈ ಮೊದಲು ಹುಡುಗಿಯ ಗೊಂಬೆ ಮಾತ್ರ ಇತ್ತು. ಆದರೆ, ಈಗ ತೋರಿಸಿರೋ ಟೀಸರ್​ನಲ್ಲಿ ಹುಡುಗನ ಗೊಂಬೆಯನ್ನೂ ತೋರಿಸಲಾಗಿದೆ. ಈ ಮೂಲಕ ಮುಂದಿನ ಆಟ ಮತ್ತಷ್ಟು ಡೆಡ್ಲಿ ಆಗಿರಲಿದೆ ಎನ್ನುವ ಸೂಚನೆ ನೀಡಲಾಗಿದೆ. 2025ರಲ್ಲಿ ಹೊಸ ಸೀಸನ್ ಬರಲಿದೆ ಎಂದು ಉಲ್ಲೇಖಿಸಲಾಗಿದೆ.

ಇದೇ ಟೀಸರ್​ನ ನೆಟ್​ಫ್ಲಿಕ್ಸ್ ಯೂಟ್ಯೂಬ್​ನಲ್ಲೂ ಅಪ್​​ಲೋಡ್ ಮಾಡಿತ್ತು. ಈ ವೇಳೆ ‘2025ರ ಜೂನ್ 27’ ಎಂಬ ಡೇಟ್ ಕೂಡ ಕ್ಯಾಪ್ಶನ್​ನಲ್ಲಿ ಹಾಕಲಾಗಿತ್ತು. ಆ ಬಳಿಕ ಅಚಾತುರ್ಯವನ್ನು ಅರಿತ ನೆಟ್​ಫ್ಲಿಕ್ಸ್ ವಿಡಿಯೋನ ಪ್ರೈವೇಟ್ ಮಾಡಿ, ಕ್ಯಾಪ್ಶನ್ ಬದಲಿಸಿದೆ. ಆದರೆ, ಆಗಲೇ ಎಲ್ಲಕಡೆಗಳಲ್ಲಿ ಇದರ ಸ್ಕ್ರೀನ್​ಶಾಟ್​ಗಳು ಹರಿದಾಡಿವೆ.

ಕೆಲವರು ಜೂನ್ 27ಕ್ಕೆ ‘ಸ್ಕ್ವಿಡ್​ ಗೇಮ್​’ನ ಮೂರನೇ ಸೀಸನ್ ಪ್ರಸಾರ ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಇದು ನೆಟ್​ಫ್ಲಿಕ್ಸ್​ನವರು ವೀಕ್ಷಕರ ದಾರಿ ತಪ್ಪಿಸಲು ಮಾಡಿದ ತಂತ್ರ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. ಈ ಬಗ್ಗೆ  ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನ ಹಳೆಯ ದಾಖಲೆಗಳನ್ನು ಮುರಿದ ‘ಸ್ಕ್ವಿಡ್ ಗೇಮ್ಸ್ 2’

ಈಗಾಗಲೇ ‘ಸ್ಕ್ವಿಡ್ ಗೇಮ್ 3’ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಪ್ಲೇಯರ್ 456 ರೆಬೆಲ್ ಆಗಿದ್ದಾನೆ. 001 ಪ್ಲೇಯರ್ ಮಾಡಿದ ವಂಚನೆ ಜಾಲಕ್ಕೆ ಸಿಲುಕಿದ್ದಾನೆ. 456 ಪ್ಲೇಯರ್​ನ ಆಪ್ತನ ಹತ್ಯೆ ಮಾಡಿ,  ಆತನ ಉಳಿಸಲಾಗಿದೆ. ಮುಂದಿನ ಸೀಸನ್​ನಲ್ಲಿ ಪ್ಲೇಯರ್ 456 ಹೇಗೆ ಬಚಾವ್ ಆಗುತ್ತಾನೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.