OTT Release: ಈ ವಾರ ಒಟಿಟಿಗೆ ಬಂದಿವೆ ಬೊಂಬಾಟ್ ಸಿನಿಮಾಗಳು
OTT Release: ಈ ವಾರ ಸಿನಿಮಾ ಪ್ರೇಮಿಗಳಿಗೆ ಒಳ್ಳೆಯ ವಾರ. ಚಿತ್ರಮಂದಿರದಲ್ಲಿ ಈ ವಾರ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಇದೇ ವಾರ ಒಟಿಟಿಯಲ್ಲಿಯೂ ಸಹ ಕೆಲವು ಬಹಳ ಒಳ್ಳೆಯ ಸಿನಿಮಾ ಹಾಗೂ ವೆಬ್ ಸರಣಿಗಳು ಬಿಡುಗಡೆ ಆಗಿವೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಹಿಟ್ ಆದ ಸಿನಿಮಾಗಳು ಕೆಲವು ಒಟಿಟಿಯಲ್ಲಿ ಈ ವಾರ ತೆರೆಗೆ ಬರುತ್ತಿವೆ.
ಈ ವಾರ ಸಿನಿಮಾ ಪ್ರೇಮಿಗಳಿಗೆ ಹಬ್ಬ. ಚಿತ್ರಮಂದಿರದಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಸುದೀಪ್ ನಟನೆಯ ‘ಮ್ಯಾಕ್ಸ್’, ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾಗಳು ಚಿತ್ರಮಂದಿರದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿವೆ. ಇದರ ಜೊತೆಗೆ ತೆಲುಗಿನ ‘ಪುಷ್ಪ 2’ ತಮಿಳಿನ ‘ವಿಡುದಲೈ 2’ ಸಿನಿಮಾಗಳು ಸಹ ಚಿತ್ರಮಂದಿರದಲ್ಲಿವೆ. ಇದರ ನಡುವೆ ಒಟಿಟಿಯಲ್ಲಿಯೂ ಸಹ ಈ ವಾರ ಕೆಲವು ಒಳ್ಳೆಯ ಸಿನಿಮಾ ಹಾಗೂ ವೆಬ್ ಸರಣಿಗಳು ಬಿಡುಗಡೆ ಕಂಡಿವೆ. ಆ ಮೂಲಕ ಸಿನಿಮಾ ಪ್ರೇಮಿಗಳಿಗೆ ಈ ವಾರ ಬೊಂಬಾಟ್ ಸಿನಿಮಾಗಳು ವೀಕ್ಷಣೆಗೆ ಲಭ್ಯವಿವೆ.
ಸಿಂಘಂ ಅಗೇನ್
ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ಗಳು ನಟಿಸಿ, ರೋಹಿತ್ ಶೆಟ್ಟಿ ನಿರ್ದೇಶನ ಮಾಡಿರುವ ‘ಸಿಂಘಂ ಅಗೇನ್’ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ರಾಮಾಯಣದ ಕತೆಯ ಹೋಲಿಕೆಯೊಂದಿಗೆ ಮಾಡಲಾಗಿರುವ ಸಿನಿಮಾ ಇದಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು.
ಭೂಲ್ ಭುಲಯ್ಯ 3
‘ಸಿಂಘಂ ಅಗೇನ್’ ಸಿನಿಮಾ ಬಿಡುಗಡೆ ಆದ ದಿನವೇ ಬಿಡುಗಡೆ ಆಗಿದ್ದ ‘ಭೂಲ್ ಭುಲಯ್ಯ 3’ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಬಾಕ್ಸ್ ಆಫೀಸ್ನಲ್ಲಿ ಪರಸ್ಪರ ಸ್ಪರ್ಧೆಗೆ ಇಳಿದಿದ್ದ ಈ ಎರಡು ಸಿನಿಮಾಗಳು ಈಗ ಒಟಿಟಿಯಲ್ಲಿಯೂ ಸ್ಪರ್ಧೆಗೆ ಇಳಿದಿವೆ. ‘ಸಿಂಘಂ ಅಗೇನ್’ ಒಟಿಟಿಗೆ ಬಿಡುಗಡೆ ಆದ ದಿನವೇ (ಡಿಸೆಂಬರ್ 27) ‘ಭೂಲ್ ಭುಲಯ್ಯ 3’ ನೆಟ್ಫ್ಲಿಕ್ಸ್ಗೆ ಬಿಡುಗಡೆ ಆಗಿದೆ.
ಸ್ಕಿಡ್ ಗೇಮ್ಸ್ 2
2021 ರಲ್ಲಿ ಬಿಡುಗಡೆ ಆಗಿ ವಿಶ್ವದಾದ್ಯಂತ ಸೂಪರ್ ಹಿಟ್ ಆಗಿದ್ದ ‘ಸ್ಕ್ವಿಡ್ ಗೇಮ್’ ಕೊರಿಯನ್ ವೆಬ್ ಸರಣಿಯ ಎರಡನೇ ಸೀಸನ್ ಈಗ ಬಿಡುಗಡೆ ಆಗಿದೆ. 2021ರ ವೆಬ್ ಸರಣಿಯ ಮುಂದಿನ ಕತೆಯೇ ಇದಾಗಿದೆ. ಮೊದಲ ಸೀಸನ್ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಲೋ ಜುಂಗ್ ಜೇ ಈ ಸೀಸನ್ನಲ್ಲೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಸೀಸನ್ನಲ್ಲಿ ನಡೆದ ಆಟಗಳೇ ಪುನರಾವರ್ತನೆ ಆಗುತ್ತಿವೆ ಆದರೆ ಕತೆ ಮಾತ್ರ ಬೇರೆ.
ಇದನ್ನೂ ಓದಿ:ಒಟಿಟಿಗೆ ಬಂತು ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ
ಸೊರ್ಗವಾಸಲ್
ಜೈಲುವಾಸಿಗಳು ಮತ್ತು ಅವರನ್ನು ಕಾವಲು ಕಾಯುವ ಪೊಲೀಸರ ಕತೆ ಒಳಗೊಂಡ ಸೊರ್ಗವಾಸಲ್ ಇಂದು (ಡಿಸೆಂಬರ್ 27) ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಸೆಲ್ವರಾಘವನ್ ಮತ್ತು ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ಬಂಧಿಖಾನೆಯಲ್ಲಿ ನಡೆಯುತ್ತಿದ್ದು, ಜೈಲುವಾಸಿಗಳು ಹಾಗೂ ಪೊಲೀಸರ ನಡುವೆ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಮುರಾ
ಮಲಯಾಳಂ ಸಿನಿಮಾ ‘ಮುರಾ’ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ. ನಾಲ್ಕು ಬಿಸಿ ರಕ್ತದ ಯುವಕರು ಅವರನ್ನು ಬಳಸಿಕೊಂಡು ತನ್ನ ಕೆಲಸ ಮಾಡಿಕೊಳ್ಳುವ ರಾಜಕಾರಣಿ, ಆ ಯುವಕರು ಸಿಲುಕಿಕೊಳ್ಳುವ ಭೀಕರ ಸನ್ನಿವೇಶ ಹೀಗೆ ಹಲವು ಥ್ರಿಲ್ಲರ್ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ. ಸೂಪರ್ ಹಿಟ್ ಸಿನಿಮಾ ‘ಕಪ್ಪೆಲ’ ನಿರ್ದೇಶಿಸಿದ್ದ ಮೊಹಮ್ಮದ್ ಮುಸ್ತಫಾ ಈ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ