ಸೂಪರ್ ಹಿಟ್ ಕೊರಿಯನ್ ಸೀರಿಸ್ ‘ಸ್ಕ್ವಿಡ್ ಗೇಡ್’ ದೊಡ್ಡ ಯಶಸ್ಸು ಕಂಡಿತ್ತು. ಇದು ಇಂಗ್ಲಿಷ್ಗೂ ಡಬ್ ಆಗಿ ಪ್ರಸಾರ ಕಂಡಿತ್ತು. ಈಗ ಈ ಸೀರಿಸ್ಗೆ ಸೀಕ್ವೆಲ್ ಬರುತ್ತಿದೆ. ಡಿಸೆಂಬರ್ 26ರಂದು ‘ಸ್ಕ್ವಿಡ್ ಗೇಮ್ 2’ ರಿಲೀಸ್ ಆಗಲಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ ಕಡೆಯಿಂದ ಘೋಷಣೆ ಆಗಿದೆ. ವಿಶೇಷ ಎಂದರೆ ‘ಸ್ಕ್ವಿಡ್ ಗೇಮ್ 3’ ಸೀರಿಸ್ ಕೂಡ ಬರಲಿದ್ದು, 2025ರಲ್ಲಿ ಅದನ್ನು ನಿರೀಕ್ಷಿಸಬಹುದು.
ಮೊದಲ ಸೀಸನ್ 2021ರ ಸೆಪ್ಟೆಂಬರ್ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ. ಹ್ವಾಂಗ್ ಡಾಂಗ್ ಹ್ಯೂಕ್ ಇದನ್ನು ನಿರ್ದೇಶಿಸಿದ್ದಾರೆ.
ಕೊರಿಯನ್ ಸ್ಟಾರ್ ಲೀ ಜುಂಗ್ ಜೀ ಅವರು ಈ ಸೀರಿಸ್ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೇ ಬ್ಯುಂಗ್ ಹುನ್ ರಹಸ್ಯ ಪಾತ್ರ ಫ್ರಂಟ್ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ವಿ ಹಾ ಜುನ್ ಹಾಗೂ ಗಾಂಗ್ ಯೂ ವಿಲ್ ಸೀರಿಸ್ಗೆ ಮರಳಲಿದ್ದಾರೆ. ರನ್ನಿಂಗ್ ರೇಸ್ ರೀತಿಯಲ್ಲಿ ‘ಸ್ಕ್ವಿಡ್ ಗೇಮ್ 2’ ಟೀಸರ್ ಮೂಡಿ ಬಂದಿದೆ. ‘ಈಗ ನಿಜವಾದ ಆಟ ಶುರು’ ಎನ್ನುವ ಅಡಿ ಬರಹ ನೀಡಲಾಗಿದೆ.
다시 운동장에 설 시간이 다가옵니다.
<오징어 게임> 시즌2, 12월 26일 공개.#오징어게임2 #SquidGame2 pic.twitter.com/NS8hTSjU83
— Netflix Korea|넷플릭스 코리아 (@NetflixKR) August 1, 2024
The real game begins. Squid Game Season 2 coming December 26. Final Season coming 2025. pic.twitter.com/qlek1ogGp9
— Squid Game (@squidgame) July 31, 2024
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ, ‘ಸ್ಕ್ವಿಡ್ ಗೇಮ್’ ವೃದ್ಧ ನಟನಿಗೆ ಕಾರಾಗೃಹ ಶಿಕ್ಷೆ
‘ಸ್ಕ್ವಿಡ್ ಗೇಮ್’ ಮಾಡು ಇಲ್ಲವೆ ಮಡಿ ಆಟ. ಮೊದಲ ಸೀಸನ್ನಲ್ಲಿ 456 ಜನರು ಭಾಗಿ ಆಗಿದ್ದರು. ಆಟದಲ್ಲಿ ಸೋತರೆ ಅಂಥವರನ್ನು ಸಾಯಿಸಲಾಗುತ್ತದೆ. ಈ ಪೈಕಿ ಕೊನೆಯಲ್ಲಿ ಬದುಕೋದು ಓರ್ವ ಮಾತ್ರ. ಈ ರೀತಿಯಲ್ಲಿ ಮೊದಲ ಸೀಸನ್ ಮೂಡಿ ಬಂದಿತ್ತು. ಎರಡನೇ ಸೀಸನ್ನಲ್ಲಿ ಯಾವ ರೀತಿಯ ಗೇಮ್ಗಳನ್ನು ನೀಡಲಾಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.