ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮೊದಲಾದವರು ನಟಿಸಿರೋ ‘ಸ್ತ್ರೀ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಬೆನ್ನಲ್ಲೇ ‘ಸ್ತ್ರೀ 2’ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಿಸಬಹುದು. ಆದರೆ, ಇದಕ್ಕೆ ನೀವು ಬಾಡಿಗೆ ಪಾವತಿ ಮಾಡಬೇಕು.
ಅಮೇಜಾನ್ ಪ್ರೈಮ್ ವಿಡಿಯೋ ಹೊಸ ತಂತ್ರ ರೂಪಿಸಿದೆ. ಬೇಡಿಕೆ ಇರುವ ಸಿನಿಮಾಗಳನ್ನು ರೆಂಟ್ ಕ್ಯಾಟಗರಿ ಅಡಿಯಲ್ಲಿ ಪ್ರಸಾರ ಮಾಡುತ್ತಿದೆ. ಇದನ್ನು ನೋಡಬೇಕು ಎಂದರೆ ನಿಗದಿಪಡಿಸಿದ ಹಣ ಪಾವತಿ ಮಾಡಬೇಕು. ‘ಸ್ತ್ರೀ 2’ ಚಿತ್ರಕ್ಕೂ ಇದೇ ತಂತ್ರವನ್ನು ರೂಪಿಸುವ ಕೆಲಸ ಆಗಿದೆ.
‘ಸ್ತ್ರೀ 2’ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ 349 ರೂಪಾಯಿಗೆ ಲಭ್ಯವಿದೆ. ಹಿಂದಿ ಭಾಷೆಯಲ್ಲಿ ಮಾತ್ರ ಸಿನಿಮಾನ ನೋಡಬಹುದು. ಚಂದಾದಾರರು ಇದನ್ನು ಉಚಿತವಾಗಿ ವೀಕ್ಷಿಸಬೇಕು ಎಂದರೆ ಮತ್ತಷ್ಟು ದಿನ ಕಾಯಬೇಕು. ಅಲ್ಲಿಯವರೆಗೆ ಬಾಡಿಗೆ ನೀಡಿಯೇ ಹಣ ಪಾವತಿ ಮಾಡಬೇಕು.
⭐️ Available on Rent
Ott – @PrimeVideoIN
Price – 349Rs
Production house: #MaddockFilms #JioStudios
Producer(s):#DineshVijan
Director:#AmarKaushik
Cast:#ShraddhaKapoor,#RajkumarRao,#PankajTripathi, #AbhishekBanerjee& #AparshaktiKhuranna#Stree2onPrime pic.twitter.com/7aiga7dnuh— Filmy Interpretation (@FilmyInterpret) September 26, 2024
‘ಸ್ತ್ರೀ 2’ ಚಿತ್ರವನ್ನು ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಅಮರ್ ಕೌಶಿಕ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್, ವರುಣ್ ಧವನ್ ಮೊದಲಾದವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ಸ್ತ್ರೀ 3’ ಕೂಡ ಬರಲಿದ್ದು, ಇದಕ್ಕಾಗಿ ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿ ಆಗಿದೆ.
ಇದನ್ನೂ ಓದಿ: ಶಾರುಖ್, ರಣಬೀರ್ ದಾಖಲೆ ಮುರಿದ ಶ್ರದ್ಧಾ ಕಪೂರ್; ದಾಖಲೆ ಬರೆದ ‘ಸ್ತ್ರೀ 2’ ಸಿನಿಮಾ
ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್ ಬಾಲಿವುಡ್ನಲ್ಲಿ ಯಶಸ್ಸನ್ನು ಕಂಡವರು. ಅವರ ಸಿನಿಮಾಗಳು 100 ಕೋಟಿ ರೂಪಾಯಿ ಗಳಿಸಿದ ಉದಾಹರಣೆ ಇದೆ. ಆದರೆ, ಇದೇ ಮೊದಲ ಬಾರಿಗೆ ಅವರ ಚಿತ್ರ 600 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದು ಅವರ ವೃತ್ತಿ ಜೀವನದಲ್ಲಿ ಕಂಡ ದೊಡ್ಡ ಯಶಸ್ಸಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Thu, 26 September 24