ಶಾರುಖ್, ರಣಬೀರ್ ದಾಖಲೆ ಮುರಿದ ಶ್ರದ್ಧಾ ಕಪೂರ್; ದಾಖಲೆ ಬರೆದ ‘ಸ್ತ್ರೀ 2’ ಸಿನಿಮಾ
‘ಸ್ತ್ರೀ’ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬಳಿಕ ತೆರೆಗೆ ಬಂದಿದ್ದು ‘ಸ್ತ್ರೀ 2’. ಈ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇರಲಿಲ್ಲ. ಈ ಚಿತ್ರ ಹಾರರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಅಲ್ಲದೆ ಭರ್ಜರಿ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ.
ಶ್ರದ್ಧಾ ಕಪೂರ್ ಅವರು ಹಾಗೂ ರಾಜ್ಕುಮಾರ್ ರಾವ್ ನಟನೆಯ ‘ಸ್ತ್ರೀ 2’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಈಗಲೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ ಅನ್ನೋದು ವಿಶೇಷ. ಈ ಸಿನಿಮಾ ಕೇವಲ 39 ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುತ್ತಿರುವುದು ಇದೇ ಮೊದಲು ಅನ್ನೋದು ವಿಶೇಷ.
ಈ ಮೊದಲು ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಪಠಾಣ್’, ಸನ್ನಿ ಡಿಯೋಲ್ ನಟನೆಯ ‘ಗಧರ್ 2’ ಮೊದಲಾದ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಆದರೆ, ಬಾಲಿವುಡ್ನ ಯಾವ ಸಿನಿಮಾ ಕೂಡ 600 ಕೋಟಿ ರೂಪಾಯಿ ಗಳಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ‘ಸ್ತ್ರೀ 2’ ಚಿತ್ರ ಈ ದಾಖಲೆಯನ್ನು ಮಾಡಿದೆ. ಈ ಮೂಲಕ ಸಿನಿಮಾ ಶಾರುಖ್ ಖಾನ್, ಸನ್ನಿ ಡಿಯೋಲ್, ರಣಬಿರ್ ಕಪೂರ್ ಅವರಂಥ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ.
ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ತರಣ್ ಆದರ್ಶ್ ಅವರು ಮಾಹಿತಿ ನೀಡಿದ್ದಾರೆ. ‘ಸ್ತ್ರೀ 2 ಸಿನಿಮಾ ಇತಿಹಾಸ ಬರೆದಿದೆ. 600 ಕೋಟಿ ರೂಪಾಯಿ ಕಲೆಕ್ಷನ್. ಮೆಟ್ರೋ ನಗರ ಸೇರಿ ಎಲ್ಲಾ ನಗರಗಳಲ್ಲೂ ಸಿನಿಮಾ ಗೆದ್ದಿದೆ. ಭಾನುವಾರ (ಸೆಪ್ಟೆಂಬರ್ 22) 5.32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 604 ಕೋಟಿ ರೂಪಾಯಿ’ ಎಂದಿದ್ದಾರೆ ಅವರು. ರಿಲೀಸ್ ಆದ ಒಂದೂವರೆ ತಿಂಗಳ ಬಳಿಕವೂ ಚಿತ್ರವೊಂದು 5+ ಕೋಟಿ ರೂಪಾಯಿ ಗಳಿಸುತ್ತದೆ ಎಂದರೆ ಅದು ದಾಖಲೆಯೇ ಸರಿ.
ಇದನ್ನೂ ಓದಿ: ‘ಸ್ತ್ರೀ 2’ ತಂದ ಅದೃಷ್ಟ, ಶ್ರದ್ಧಾ ಕಪೂರ್ಗೆ ಅವಕಾಶಗಳ ಸಾಗರ
‘ಸ್ತ್ರೀ’ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬಳಿಕ ತೆರೆಗೆ ಬಂದಿದ್ದು ‘ಸ್ತ್ರೀ 2’. ಈ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇರಲಿಲ್ಲ. ಈ ಚಿತ್ರ ಹಾರರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಅಲ್ಲದೆ ಭರ್ಜರಿ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಇದು ಜನರಿಗೆ ಇಷ್ಟ ಆಗಿದೆ. ಈ ಸಿನಿಮಾದ ಗ್ರಾಸ್ ಕಲೆಕ್ಷನ್ 713 ಕೋಟಿ ರೂಪಾಯಿದೆ. ವಿಶ್ವ ಬಾಕ್ಸ್ ಆಫೀಸ್ ಕೂಡ ಸೇರಿದರೆ ಗಳಿಕೆ ಮತ್ತಷ್ಟು ಹೆಚ್ಚಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.