ಒಟಿಟಿಗೆ ಬರುತ್ತಿದೆ ಸುದೀಪ್​ ನಟನೆಯ ‘ಮಾರ್ಕ್’: ಎಲ್ಲಿ? ಯಾವಾಗ ನೋಡಬಹುದು?

Mark Kannada movie: ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ. ಆದರೆ ಹೀಗಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ ಸಿನಿಮಾ. ಈಗಾಗಲೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಘೋಷಣೆ ಮಾಡಲಾಗಿದೆ? ಮಾರ್ಕ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಮತ್ತು ಎಂದಿನಿಂದ ಪ್ರದರ್ಶನ ಆರಂಭಿಸಲಿದೆ? ಇಲ್ಲಿದೆ ಮಾಹಿತಿ...

ಒಟಿಟಿಗೆ ಬರುತ್ತಿದೆ ಸುದೀಪ್​ ನಟನೆಯ ‘ಮಾರ್ಕ್’: ಎಲ್ಲಿ? ಯಾವಾಗ ನೋಡಬಹುದು?
ಮಾರ್ಕ್ ಸಿನಿಮಾ

Updated on: Jan 17, 2026 | 7:07 PM

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ. ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ ಸಿನಿಮಾ. ಈಗಾಗಲೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಘೋಷಣೆ ಮಾಡಲಾಗಿದೆ? ಮಾರ್ಕ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಮತ್ತು ಎಂದಿನಿಂದ ಪ್ರದರ್ಶನ ಆರಂಭಿಸಲಿದೆ? ಇಲ್ಲಿದೆ ಮಾಹಿತಿ…

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜಿಯೋ ಹಾರ್ಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಒಟಿಟಿ ಬಿಡುಗಡೆಯ ಜಾಹೀರಾತುಗಳು ಈಗಾಗಲೇ ಪ್ರಸಾರವಾಗುತ್ತಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಜನವರಿ 23 ರಂದು ‘ಮಾರ್ಕ್’ ಸಿನಿಮಾ ಸ್ಟ್ರೀಮಿಂಗ್ ಆರಂಭ ಮಾಡಲಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಮಾರ್ಕ್’ ಸಿನಿಮಾ ಪ್ರಸಾರ ಆಗಲಿರುವುದನ್ನು ಒಟಿಟಿಯು ಚೆನ್ನಾಗಿಯೇ ಪ್ರಚಾರ ಮಾಡುತ್ತಿದೆ. ಬೇರೆ ಸಿನಿಮಾಗಳ ನಡುವೆ ‘ಮಾರ್ಕ್’ ಸಿನಿಮಾದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಮಾರ್ಕ್’ ಸಿನಿಮಾ ಕನ್ನಡ ಮಾತ್ರವೇ ಅಲ್ಲದೆ ಇನ್ನೂ ಕೆಲ ಭಾರತೀಯ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ:ವಯಸ್ಸು ನಂಬರ್ ಮಾತ್ರ; ಸಿಸಿಎಲ್​​ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಕಿಚ್ಚ ಸುದೀಪ್ 

‘ಮಾರ್ಕ್’ ಸಿನಿಮಾವು 2025 ರಲ್ಲಿ ಬಿಡುಗಡೆ ಆದ ಸುದೀಪ್ ನಟನೆಯ ಏಕೈಕ ಸಿನಿಮಾ ಆಗಿದ್ದು, ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದೆ. ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ಪೈರಸಿ ಮಾಡುವ ಬೆದರಿಕೆ ಹಾಕಲಾಗಿತ್ತು, ಅಲ್ಲದೆ ಸಿನಿಮಾದ ಬಗ್ಗೆ ನೆಗಟಿವ್ ಪ್ರಚಾರ ಇನ್ನಿತರೆಗಳನ್ನು ಸಹ ಮಾಡಲಾಗಿತ್ತು, ಅದೆಲ್ಲವನ್ನೂ ಮೀರಿ ‘ಮಾರ್ಕ್’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುವಲ್ಲಿ ಯಶಸ್ವಿ ಆಗಿದೆ. ಈಗಲೂ ಸಹ ಬೆಂಗಳೂರು ಸೇರಿದಂತೆ ಇನ್ನೂ ಕೆಲ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ 30 ಚಿತ್ರಮಂದಿರಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಆಗುತ್ತಿವೆ. ಆದರೆ ಅಷ್ಟರಲ್ಲೇ ಸಿನಿಮಾವನ್ನು ಒಟಿಟಿಗೆ ತರಲಾಗುತ್ತಿದೆ.

‘ಮಾರ್ಕ್’ ಸಿನಿಮಾವು ಸುದೀಪ್ ಅವರ ಈ ಹಿಂದಿನ ‘ಮ್ಯಾಕ್ಸ್’ ಸಿನಿಮಾದ ರೀತಿಯೇ ಕಡಿಮೆ ಅವಧಿಯಲ್ಲಿ ನಡೆಯುವ ಕತೆಯೊಂದನ್ನು ಆಧರಿಸಿದ ಆಕ್ಷನ್ ಥ್ರಿಲ್ಲರ್ ಜಾನರ್​​ನ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ನಾಯಕಿಯಾದ ನಿಶ್ವಿಕಾ ನಾಯ್ಡು, ರೋಷಿನಿ ಪ್ರಕಾಶ್ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ