ನಟಿ ತಮನ್ನಾ ಭಾಟಿಯಾ ಇದೇ ಮೊದಲ ಬಾರಿಗೆ ಹೊಸ ಅವತಾರ ತಾಳಿದ್ದರು. ಕಳೆದ 18 ವರ್ಷಗಳಿಂದ ‘ನೋ ಕಿಸ್’ ಪಾಲಿಸಿ ಹಾಕಿಕೊಂಡು ಬಂದಿದ್ದ ಅವರು ಅದನ್ನೂ ಬ್ರೇಕ್ ಮಾಡಿದರು. ‘ಲಸ್ಟ್ ಸ್ಟೋರೀಸ್ 2’ ಚಿತ್ರದಲ್ಲಿ (Lust Stories 2) ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಒಂದು ವರ್ಗದ ಜನರಿಂದ ಟೀಕೆ ವ್ಯಕ್ತವಾಗಿದೆ. ಅನೇಕರು ನಟಿಯನ್ನು ಕಟುವಾಗಿ ಟೀಕಿಸಿದ್ದಾರೆ. ಅಶ್ಲೀಲ ಕಮೆಂಟ್ ಕೂಡ ಹಾಕಿದ್ದಾರೆ. ಈ ಬಗ್ಗೆ ತಮನ್ನಾ ಮಾತನಾಡಿದ್ದಾರೆ.
ಮೋಜೋ ಸ್ಟೋರಿಗಾಗಿ ತಮನ್ನಾ ಸಂದರ್ಶನ ನೀಡಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಜೊತೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ‘ನಟನೆ ಆರಂಭಿಸಿದಾಗ ನಾನು ನಿಜವಾಗಿಯೂ ಚಿಕ್ಕವಳಾಗಿದ್ದೆ. ನಾನು ನೃತ್ಯ ಮಾಡುತ್ತಿದ್ದೆ ಮತ್ತು ಸಖತ್ ಗ್ಲಾಮರಸ್ ಆಗಿ ಕಾಣುತ್ತಿದ್ದೆ. ಇದೆಲ್ಲವನ್ನು ಬದಿಗಿಟ್ಟು ಒಂದು ಹೊಸ ರೀತಿಯ ಪಾತ್ರ ಒಪ್ಪಿಕೊಂಡೆ. ನಟಿಯರು ಈ ರೀತಿಯ ಪಾತ್ರ ಮಾಡಿದಾಗ ವೈಯಕ್ತಿಕವಾಗಿ ದಾಳಿ ಮಾಡುವುದು ಏಕೆ’ ಎಂದು ತಮನ್ನಾ ಪ್ರಶ್ನೆ ಮಾಡಿದ್ದಾರೆ.
‘ಪುರುಷ ಕಲಾವಿದರು ಈ ರೀತಿಯ ಪಾತ್ರಗಳನ್ನು ಮಾಡುವುದನ್ನು ನೋಡಿದ್ದೇನೆ. ನಿಂದನೀಯ, ಹಿಂಸೆ, ಕಾನೂನುಬಾಹಿರ ವಿಚಾರ ಇರುವ ಎಲ್ಲಾ ಪಾತ್ರಗಳನ್ನು ಮಾಡುತ್ತಾರೆ. ಆದರೆ ಅವರು ಸೂಪರ್ಸ್ಟಾರ್ ಆಗುತ್ತಾರೆ. ಆದರೆ ಓರ್ವ ನಟಿ ಈ ರೀತಿಯ ಪಾತ್ರ ಮಾಡಿದರೆ ಅದು ಕೆಟ್ಟ ಪಾತ್ರ. ಇದಕ್ಕೆ ಯಾವುದೇ ಅರ್ಥವಿಲ್ಲ. ಇದರ ಬಗ್ಗೆ ಆಲೋಚಿಸಲು ನನಗೆ ಇಷ್ಟವಿಲ್ಲ’ ಎಂದಿದ್ದಾರೆ ತಮನ್ನಾ.
‘ಈ ರೀತಿಯ ಪಾತ್ರ ಮಾಡುವ ಅವಶ್ಯಕತೆ ಏನಿತ್ತು? ಎಂಬಿತ್ಯಾದಿ ಕಮೆಂಟ್ಗಳು ನನ್ನ ಪಾತ್ರಕ್ಕೆ ಬಂದಿವೆ. ನಾನು ಆ ಕಮೆಂಟ್ಗಳನ್ನು ಓದಿದ್ದೇನೆ. ಇದು ನಿಜಕ್ಕೂ ವಿಚಿತ್ರ. ನಾಳೆ ನಾನು ಸರಣಿ ಹಂತಕನ ಪಾತ್ರ ಮಾಡಿದರೆ ಅದು ನನ್ನನ್ನು ಕೆಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆಯೇ’ ಎಂದು ಪ್ರಶ್ನೆ ಮಾಡುತ್ತಾರೆ ತಮನ್ನಾ.
ಇದನ್ನೂ ಓದಿ: ‘ಅವರ ಜೊತೆ ಹಸಿಬಿಸಿ ದೃಶ್ಯಗಳನ್ನು ನೋಡುತ್ತಿರಲಿಲ್ಲ, ನನಗೆ ಇರಿಸುಮುರುಸು ಆಗುತ್ತಿತ್ತು’: ನಟಿ ತಮನ್ನಾ
ತಮನ್ನಾ ಹಾಗೂ ವಿಜಯ್ ವರ್ಮಾ ಅವರು ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ದು, ಇಂಟಿಮೇಟ್ ದೃಶ್ಯದಲ್ಲಿ ನಟಿಸಿದ್ದಾರೆ. ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾ ರಿಲೀಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:30 am, Wed, 5 July 23