ನಟ ವಿಜಯ್ ಸೇತುಪತಿ (Vijay Sethupathi) ಅವರು ದಕ್ಷಿಣ ಭಾರತದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಈಗ ಅವರು ಬಾಲಿವುಡ್ಗೂ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಹಿಂದಿ ಸಿನಿಮಾ ‘ಮುಂಬೈಕರ್’ (Mumbaikar) ನೇರವಾಗಿ ಒಟಿಟಿ ಮೂಲಕ ಬಿಡುಗಡೆ ಆಗಲಿದೆ. ‘ಜೀಯೋ ಸಿನಿಮಾ’ದಲ್ಲಿ (Jio Cinema) ಈ ಚಿತ್ರ ಸ್ಟ್ರೀಮ್ ಆಗಲಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ವಿಕ್ರಾಂತ್ ಮೆಸ್ಸಿ ಕೂಡ ನಟಿಸಿದ್ದಾರೆ. ಜೂನ್ 2ರಿಂದ ‘ಮುಂಬೈಕರ್’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ಶಿವನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಇದು ತಮಿಳಿನ ‘ಮಾನಗರಂ’ ಸಿನಿಮಾದ ಹಿಂದಿ ರಿಮೇಕ್. ಮೂಲ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದರು.
ಹೈಪರ್ ಲಿಂಕ್ ರೀತಿಯ ಕಥಾಹಂದರ ‘ಮುಂಬೈಕರ್’ ಸಿನಿಮಾದಲ್ಲಿದೆ. ‘ಜಿಯೋ ಸಿನಿಮಾ’ದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ ಎಂಬುದನ್ನು ತಿಳಿಸಲು ಹೊಸ ಟೀಸರ್ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಜಯ್ ಸೇತುಪತಿ ಜೊತೆ ನಟಿಸಿದ್ದಕ್ಕೆ ವಿಕ್ರಾಂತ್ ಮೆಸ್ಸಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಸಂತೋಷ್ ಶಿವನ್ ಅವರ ಕೆಲಸವನ್ನು ವಿಕ್ರಾಂತ್ ಮೆಸ್ಸಿ ಕೊಂಡಾಡಿದ್ದಾರೆ. ಒಟಿಟಿಯಲ್ಲಿ ಈ ಸಿನಿಮಾ ನೋಡಿದ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
Mumbai sheher, ek kidnapping aur bohot saara confusion! Kya yeh galti se hui mistake padegi sab pe bhaari? #Mumbaikar streaming from 2nd June for free, only on @officialjiocinema#Mumbaikar #JioCinema #JioStudios #MumbaikarOnJioCinema pic.twitter.com/C9l1PQ4e2g
— Jio Studios (@jiostudios) May 25, 2023
ಮೊದಲ ಲಾಕ್ ಡೌನ್ ಬಳಿಕ ಪ್ರೇಕ್ಷಕರಲ್ಲಿ ಒಟಿಟಿ ಬಳಕೆ ಜಾಸ್ತಿ ಆಯಿತು. ಹಲವು ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಹೊಸ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಮೂಲಕ ಜನರನ್ನು ಸೆಳೆಯಲು ಎಲ್ಲ ಒಟಿಟಿಗಳು ಪ್ರಯತ್ನಿಸುತ್ತಿವೆ. ಈ ಸಾಲಿಗೆ ‘ಜಿಯೋ ಸಿನಿಮಾ’ ಕೂಡ ಸೇರ್ಪಡೆ ಆಗಿದೆ. ಇದರಲ್ಲಿ ಹಲವು ಸಿನಿಮಾಗಳು ಲಭ್ಯವಾಗಿವೆ. ಈಗ ಹೊಸದೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ವಿಕ್ರಮ್ ವೇದ’ ಸಿನಿಮಾದ ಪ್ರೀಮಿಯರ್ ನಂತರ, ಜಿಯೋ ಸಿನಿಮಾ ಥ್ರಿಲ್ಲಿಂಗ್ ಆ್ಯಕ್ಷನ್ ಡ್ರಾಮಾ ‘ಇನ್‌ಸ್ಟೆಕ್ಟರ್ ಅವಿನಾಶ್’ ಚಿತ್ರದ ಪ್ರೀಮಿಯರ್ ಮಾಡಿತು. ಪ್ರತಿಭಾವಂತ ನಟ ರಣದೀಪ್ ಹೂಡಾ ಅವರು ಆ ಸಿನಿಮಾದಲ್ಲಿ ಇನ್‌ಸ್ಟೆಕ್ಟರ್ ಅವಿನಾಶ್ ಆಗಿ ಕಾಣಿಸಿಕೊಂಡಿದ್ದಾರೆ. ಮೇ 18ರಿಂದ ಈ ಸಿನಿಮಾ ಉಚಿತವಾಗಿ ಬಿತ್ತರ ಆಗುತ್ತಿದೆ.
ಇದನ್ನೂ ಓದಿ: ‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್ ಜೋಹರ್ಗೆ ಅನಿಲ್ ಕಪೂರ್ ವಾರ್ನಿಂಗ್; ವಿಡಿಯೋ ವೈರಲ್
ಲವ್ ಯೂ ಅಭಿ:
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಿಕ್ರಮ್ ರವಿಚಂದ್ರನ್ ಮತ್ತು ಅದಿತಿ ಪ್ರಭುದೇವ ಅವರು ಇದೇ ಮೊದಲ ಬಾರಿಗೆ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಇವರಿಬ್ಬರು ಜೊತೆಯಾಗಿ ಒಂದು ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ‘ಲವ್ ಯೂ ಅಭಿ’ ಎಂಬುದು ಇದರ ಶೀರ್ಷಿಕೆ. ‘ಜಿಯೋ ಸಿನಿಮಾ’ ಮೂಲಕ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿ ವೆಬ್ ಸಿರೀಸ್ಗಳ ಸಂಖ್ಯೆ ಕಡಿಮೆ. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಲವ್ ಯೂ ಅಭಿ’ ಸೇರ್ಪಡೆ ಆಗಿದೆ. ಅಂದಹಾಗೆ, ಇದನ್ನು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ವೀಕ್ಷಿಸಬಹುದು. ಮೇ 19ರಂದು ಈ ವೆಬ್ ಸಿರೀಸ್ ಬಿಡುಗಡೆ ಆಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.