ನಿನ್ನೆಯಷ್ಟೆ (ಆಗಸ್ಟ್ 25) 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Awards) ಘೋಷಣೆಯಾಗಿದೆ. ಕನ್ನಡದ ‘777 ಚಾರ್ಲಿ‘ (777 Charlie) ಸೇರಿದಂತೆ ವಿವಿಧ ಭಾಷೆಯ ಹಲವಾರು ಸಿನಿಮಾಗಳಿಗೆ ಪ್ರಶಸ್ತಿ ಘೋಷಣೆ ಆಗಿದೆ. ಅತ್ಯುತ್ತಮ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಗಳಿಗೆ ಘೋಷಣೆ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾಗಳನ್ನು ಸಿನಿಮಾ ಆಸಕ್ತರು ಎಲ್ಲಿ ನೋಡಬಹುದು? ಯಾವ ಸಿನಿಮಾ ಯಾವ ಒಟಿಟಿಯಲ್ಲಿದೆ? ಇಲ್ಲಿದೆ ಮಾಹಿತಿ.
ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಜಿಯೋ ಸಿನಿಮಾ ಹಾಗೂ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಸ್ಟ್ರೀಮ್ ಆಗುತ್ತಿದೆ. ಅತ್ಯುತ್ತಮ ಮನೊರಂಜನಾ ಸಿನಿಮಾ ಪ್ರಶಸ್ತಿ ಪಡೆದ ‘ಆರ್ಆರ್ಆರ್’ ನೆಟ್ಫ್ಲಿಕ್ಸ್, ಜೀ5 ಹಾಗೂ ಹಾಟ್ಸ್ಟಾರ್ ಮೂರೂ ಒಟಿಟಿಗಳಲ್ಲಿ ವಿವಿಧ ಭಾಷೆಗಳಲ್ಲಿ ಸ್ಟ್ರೀಂ ಆಗುತ್ತಿದೆ. ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದ ‘777 ಚಾರ್ಲಿ’ ವೂಟ್ನಲ್ಲಿ ಸ್ಟ್ರೀಂ ಆಗುತ್ತಿದೆ.
ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಗಂಗೂಬಾಯಿ ಕಾಠಿವಾಡಿಗೆ ನಾಲ್ಕು ಪ್ರಶಸ್ತಿ, ಆರ್ಆರ್ಆರ್ಗೆ ಸಿಕ್ಕಿದ್ದೆಷ್ಟು?
ಅಲ್ಲು ಅರ್ಜುನ್ಗೆ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟ ‘ಪುಷ್ಪ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ನೋಡಬಹುದಾಗಿದೆ. ಆಲಿಯಾ ಭಟ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಇತರೆ ಮೂರು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ‘ಗಂಗೂಬಾಯಿ ಕಾಠಿಯಾವಾಡಿ’ ನೆಟ್ಫ್ಲಿಕ್ಸ್ನಲ್ಲಿದೆ. ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದ ‘ಮಿಮಿ’ ಸಿನಿಮಾ ಸಹ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗುತ್ತಿದೆ. ಹೆಚ್ಚು ಪ್ರಶಸ್ತಿ ಬಾಚಿಕೊಂಡ ಸಿನಿಮಾಗಳಲ್ಲಿ ಒಂದಾದ ‘ಸರ್ದಾರ್ ಉದ್ಧಮ್’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.
ತೀರ್ಪುಗಾರರ ವಿಶೇಷ ಮೆಚ್ಚುಗೆ ಪ್ರಶಸ್ತಿ ಪಡೆದ ‘ಶೇರ್ಷಾ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿದೆ. ನ್ಯಾಷನಲ್ ಇಂಟಿಗ್ರಿಟಿ ಪ್ರಶಸ್ತಿ ಪಡೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಜೀ5 ನಲ್ಲಿ ಸ್ಟ್ರೀಂ ಆಗುತ್ತಿದೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದ ‘ಚೆಲ್ಲೊ ಶೋ’ ಗುಜರಾತಿ ಸಿನಿಮಾ ಅಮೆಜಾನ್ ಪ್ರೈಂನಲ್ಲಿದೆ. ಅತ್ಯುತ್ತಮ ತೆಲುಗು ಸಿನಿಮಾ ಪ್ರಶಸ್ತಿ ಪಡೆದ ‘ಉಪ್ಪೆನ’ ನೆಟ್ಫ್ಲಿಕ್ಸ್, ತಮಿಳು ಸಿನಿಮಾ ‘ಕಡೈಸಿ ವ್ಯವಸಾಯಿ’ ಸೋನಿ ಲಿವ್, ಮಲಯಾಳಂ ಸಿನಿಮಾ ‘ಹೋಮ್’ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಂ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ