ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ಟಿಕೆಟ್ ದರ ಹೆಚ್ಚಿಸಲಾಗುತ್ತದೆ. ಮೊದಲ ದಿನವಂತೂ ಟಿಕೆಟ್ ದರ ಮಿತಿ ಮೀರುತ್ತದೆ. ಈ ಕಾರಣಕ್ಕೆ ಅನೇಕ ಅಭಿಮಾನಿಗಳಿಗೆ ಸಿನಿಮಾ ನೋಡೋಕೆ ಸಾಧ್ಯವಾಗುವುದೇ ಇಲ್ಲ. ಆದರೆ, ಸಾಯಿ ಧರಮ್ ತೇಜ್ ಹಾಗೂ ಪವನ್ ಕಲ್ಯಾಣ್ (Pawan Kalyan) ಅಭಿನಯದ ‘ಬ್ರೋ’ ಸಿನಿಮಾ (Bro Movie) ವಿಚಾರದಲ್ಲಿ ಹಾಗಾಗುವುದಿಲ್ಲ. ಈ ಬಗ್ಗೆ ನಿರ್ಮಾಪಕರ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಈ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ.
ಸಾಯಿ ಧರಮ್ ತೇಜ್ ಅವರಿಗೆ ಪವನ್ ಕಲ್ಯಾಣ್ ಸೋದರ ಮಾವ. ಇವರು ಒಟ್ಟಾಗಿ ತೆರೆ ಹಂಚಿಕೊಂಡಿದ್ದು ಫ್ಯಾನ್ಸ್ಗೆ ಖುಷಿ ನೀಡಿದೆ. ಈ ಮೊದಲು ತೆರೆಗೆ ಬಂದ ತಮಿಳಿನ ‘ವಿನೋಧ್ಯ ಸೀತಂ’ ಚಿತ್ರದ ತೆಲುಗು ರಿಮೇಕ್ ‘ಬ್ರೋ’. ಮೂಲ ಚಿತ್ರದಲ್ಲಿ ತಂಬಿ ರಾಮಯ್ಯ ಹಾಗೂ ಸಮುದ್ರಖಣಿ ನಟಿಸಿದ್ದರು. ಇದರ ರಿಮೇಕ್ನಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇದರ ಜೊತೆಗೆ ಸಿನಿಮಾ ಟಿಕೆಟ್ ದರ ಹೆಚ್ಚಬಹುದು ಎಂದು ಅನೇಕರು ಊಹಿಸಿದ್ದರು. ಆದರೆ, ಹಾಗಾಗುವುದಿಲ್ಲ.
‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ‘ಜೀ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ಟಿಜಿ ವಿಶ್ವಪ್ರಸಾದ್ ಹಾಗೂ ವಿವೇಕ್ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ವಿಶ್ವಪ್ರಸಾದ್ ಅವರು ಸಿನಿಪ್ರೇಮಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ‘ಬ್ರೋ ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ. ಸೀಮಿತ ಬಜೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಹೀಗಾಗಿ ಪವನ್ ಕಲ್ಯಾಣ್, ತೇಜ್ ಸಿನಿಮಾದ ಟಿಕೆಟ್ ದರ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ’ ಎಂದು ವಿಶ್ವಪ್ರಸಾದ್ ತಿಳಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.
Turn ambassadors for BRO Mania with #BroTheAvatar Merchandise ?
Get your vibe now on @amazonINhttps://t.co/eug1YGw0mJ
Grand Worldwide Release on July 28th ?@PawanKalyan @IamSaiDharamTej @TheKetikaSharma @thondankani @MusicThaman @vishwaprasadtg @vivekkuchibotla… pic.twitter.com/lKQf0MD1vx
— People Media Factory (@peoplemediafcy) July 19, 2023
ಇದನ್ನೂ ಓದಿ: ಸಾಯಿ ಧರಮ್ ತೇಜ್ಗೆ ಮತ್ತೆ ಸಂಕಷ್ಟ; ಹೈದರಾಬಾದ್ ಪೊಲೀಸರಿಂದ ಬಂತು ನೋಟಿಸ್
‘ಬ್ರೋ’ ಸಿನಿಮಾ ಜುಲೈ 28ರಂದು ರಿಲೀಸ್ ಆಗಲಿದೆ. ಜುಲೈ 21ರಂದು ಟ್ರೇಲರ್ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ವಿಶೇಷ ಎಂದರೆ ‘ಪ್ರಾಜೆಕ್ಟ್ ಕೆ’ ಚಿತ್ರದ ಗ್ಲಿಂಪ್ಸ್ ಕೂಡ ಜುಲೈ 21ಕ್ಕೇ ರಿಲೀಸ್ ಆಗುತ್ತಿದೆ. ಹೀಗಾಗಿ, ಸಿನಿಪ್ರಿಯರ ಪಾಲಿಗೆ ಡಬಲ್ ಧಮಾಕ ಸಿಕ್ಕಂತೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ