
ಪವನ್ ಕಲ್ಯಾಣ್ (Pawan Kalyan), ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಜೊತೆಗೆ ಕೆಲವು ಪ್ರಮುಖ ಖಾತೆಗಳ ಸಚಿವರೂ ಸಹ ಹೌದು. ರಾಜಕೀಯ, ಆಡಳಿತದ ಜೊತೆಗೆ ಸಿನಿಮಾ ಕೆಲಸಗಳಲ್ಲಿಯೂ ಪವನ್ ಕಲ್ಯಾಣ್ ತೊಡಗಿಸಿಕೊಂಡಿದ್ದಾರೆ. ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆ ಒಪ್ಪಿಕೊಂಡಿದ್ದ ಮೂರು ಸಿನಿಮಾಗಳಲ್ಲಿ ಎರಡು ಸಿನಿಮಾಗಳನ್ನು ಮುಗಿಸಿರುವ ಪವನ್ ಕಲ್ಯಾಣ್ ಈಗ ಮೂರನೇ ಸಿನಿಮಾನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಡುವೆ ನಿರ್ದೇಶಕರೊಬ್ಬರಿಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಪವನ್ ಕಲ್ಯಾಣ್. ಅದಕ್ಕೆ ಕಾರಣವೇನು? ಯಾವ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ? ಇಲ್ಲಿದೆ ಮಾಹಿತಿ…
ಪವನ್ ಕಲ್ಯಾಣ್, ಆಂಧ್ರ ವಿಧಾನಸಭೆ ಚುನಾವಣೆಗೆ ಮುಂಚೆ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅವುಗಳಲ್ಲಿ ‘ಹರಿ ಹರ ವೀರ ಮಲ್ಲು’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಈಗಾಗಲೇ ಬಿಡುಗಡೆ ಆಗಿವೆ. ಇನ್ನು ಸಮಯ ಸಿಕ್ಕಾಗೆಲ್ಲ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಚಿತ್ರೀಕರಣದಲ್ಲಿ ಪವನ್ ಭಾಗಿ ಆಗುತ್ತಿದ್ದಾರೆ. ಈ ಸಿನಿಮಾದ ನಾಯಕಿ, ಕನ್ನಡತಿ ಶ್ರೀಲೀಲಾ. ಈ ನಡುವೆ ನಿರ್ದೇಶಕರೊಬ್ಬರಿಗೆ ಕಾರೊಂದನ್ನು ಪವನ್ ಉಡುಗೊರೆಯಾಗಿ ಕೊಟ್ಟಿದ್ದು ಸುದ್ದಿಯಾಗಿದೆ.
ಪವನ್ ಕಲ್ಯಾಣ್ ಅವರು ತಮ್ಮ ನಟನೆಯ ‘ಓಜಿ’ ಸಿನಿಮಾದ ನಿರ್ದೇಶಕ ಸುಜೀತ್ ಅವರಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದ ‘ಓಜಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಪವನ್ ಕಲ್ಯಾಣ್, ಮಾಫಿಯಾ ಡಾನ್ ಒಬ್ಬನ ಬಲಗೈ ಭಂಟನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾನಲ್ಲಿ ಬಾಲಿವುಡ್ ಸ್ಟಾರ್ ನಟ ಹಿಮೇಶ್ ರೆಷಮಿಯಾ ವಿಲನ್.
ಇದನ್ನೂ ಓದಿ:ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಪಡೆದ ಪವನ್ ಕಲ್ಯಾಣ್
ಆಂಧ್ರ ವಿಧಾನಸಭೆ ಚುನಾವಣೆ ವೇಳೆಯೇ ಪವನ್ ಕಲ್ಯಾಣ್ ಅವರು ‘ಓಜಿ’ ಸಿನಿಮಾದ ಕತೆ ಚೆನ್ನಾಗಿದೆ ಎಲ್ಲರೂ ತಪ್ಪದೆ ನೋಡಿ ಎಂದು ಮನವಿ ಮಾಡಿದ್ದರು. ಅದರಂತೆ ‘ಓಜಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸನ್ನೇ ಗಳಿಸಿತು. ಪವನ್ ಕಲ್ಯಾಣ್ ಅವರನ್ನು ಸಖತ್ ಸ್ಟೈಲಿಷ್ ಆಗಿಯೂ ಸಹ ಸಿನಿಮಾನಲ್ಲಿ ತೋರಿಸಲಾಗಿತ್ತು. ಇದೇ ಕಾರಣಕ್ಕೆ ಈಗ ಸುಜಿತ್ ಅವರಿಗೆ ಹೊಸ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಪವನ್ ಕಲ್ಯಾಣ್.
ಪವನ್ ಕಲ್ಯಾಣ್ ಅವರು ಸುಜಿತ್ ಅವರಿಗೆ ಕಪ್ಪು ಬಣ್ಣದ ‘ಡಿಫೆಂಡರ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಒಂದು ಕೋಟಿಯಿಂದ ಮೂರು ಕೋಟಿ ರೂಪಾಯಿ ಬೆಲೆಯನ್ನು ಈ ಕಾರು ಭಾರತದಲ್ಲಿ ಹೊಂದಿದೆ. ಸುಜೀತ್ ಅವರಿಗೆ ಪವನ್ ಕಲ್ಯಾಣ್, ಕಾರು ಉಡುಗೊರೆ ನೀಡಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುಜಿತ್ ಅವರು ಪವನ್ ಕಲ್ಯಾಣ್ ಅವರಿಗಾಗಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Tue, 16 December 25