
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ನಟಿಸಿರುವ ‘ಓಜಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಮತ್ತು ಸಿನಿಮಾದ ಟ್ರೈಲರ್ ಬಿಡುಗಡೆ ಇಂದು ಹೈದರಾಬಾದ್ನಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ಸಿನಿಮಾದ ಬಿಡುಗಡೆಗೆ ಕೆಲವು ದಿನಗಳು ಇರುವಂತೆಯೇ ಸಿನಿಮಾದ ಟಿಕೆಟ್ಗಳ ಮುಂಗಡ ಮಾರಾಟ ಆರಂಭವಾಗಿದೆ. ಅದರಲ್ಲೂ ಸಿನಿಮಾದ ಬೆನಿಫಿಟ್ ಶೋ ಟಿಕೆಟ್ ಒಂದು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಕೇವಲ ಒಂದು ಟಿಕೆಟ್ಗೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದಾನೆ ಅಭಿಮಾನಿಯೊಬ್ಬ.
ಆಂಧ್ರ ಪ್ರದೇಶದ ಚೌಟುಪಲ್ ಪುರಸಭೆ ವ್ಯಾಪ್ತಿಯ ಲಕ್ಕಾರ ಗ್ರಾಮದ ಅಮುದಾಲ ಪರಮೇಶ್ ಎಂಬುವರು ಪವನ್ ಕಲ್ಯಾಣ್ ಅವರ ಪಕ್ಕಾ ಅಭಿಮಾನಿ ಆಗಿದ್ದು, ‘ಓಜಿ’ ಸಿನಿಮಾದ ಬೆನಿಫಿಟ್ ಶೋ ಟಿಕೆಟ್ ಅನ್ನು ಬರೋಬ್ಬರಿ 1.30 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಬೆನಿಫಿಟ್ ಶೋ ಟಿಕೆಟ್ ಅನ್ನು ಚೌಟುಪಲ್ ನಲ್ಲಿ ಹರಾಜು ಹಾಕಲಾಗಿತ್ತು. ಈ ಹರಾಜಿನಲ್ಲಿ ಬರೋಬ್ಬರಿ 1.30 ಲಕ್ಷ ರೂಪಾಯಿಗಳಿಗೆ ಹರಾಜು ಕೂಗಿ ಟಿಕೆಟ್ ಅನ್ನು ಖರೀದಿ ಮಾಡಿದ್ದಾರೆ ಅಮುದಾಲ ಪರಮೇಶ್.
ಜಬರ್ದಸ್ತ್ ವಿನೋದಿನಿ ಅವರು ಅಮುದಾಲ ಪರಮೇಶ್ ಅವರಿಗೆ ಬೆನಿಫಿಟ್ ಶೋ ಮೊದಲ ಟಿಕೆಟ್ ಅನ್ನು ನೀಡಿದರು. ಪವನ್ ಅಭಿಮಾನಿಗಳು ಕೆಲವರು ಪರಮೇಶ್ಗೆ ಹಾರ, ಶಾಲು ಹಾಕಿ ಸನ್ಮಾನ ಸಹ ಮಾಡಿದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪರಮೇಶ್, ‘ಈ ಹಣವನ್ನು ತಾವು ನೇರವಾಗಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಕಚೇರಿಗೆ ನೀಡುವುದಾಗಿ ಹೇಳಿದರು.
ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆ ‘ಓಜಿ’ ಟ್ರೈಲರ್ ಬಿಡುಗಡೆ ತಡ, ಆದರೆ ಅದ್ಧೂರಿ
ಕೆಲ ದಿನಗಳ ಹಿಂದೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನದಂದು ಸಹ ‘ಓಜಿ’ ಸಿನಿಮಾದ ನೈಜಾಮ್ ಫ್ಯಾನ್ಸ್ ಶೋ ಮೊದಲ ಟಿಕೆಟ್ ಅನ್ನು ಆನ್ಲೈನ್ನಲ್ಲಿ ಹರಾಜು ಹಾಕಲಾಯ್ತು. ಆ ಟಿಕೆಟ್ ಅನ್ನು ನಾರ್ಥ್ ಅಮೆರಿಕ ಪವನ್ ಕಲ್ಯಾಣ್ ಅಭಿಮಾನಿಗಳ ಸಂಘ ಆ ಟಿಕೆಟ್ ಅನ್ನು ಬರೋಬ್ಬರಿ ಐದು ಲಕ್ಷ ರೂಪಾಯಿಗೆ ಹರಾಜು ಕೂಗಿ ಖರೀದಿ ಮಾಡಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಕೆಲ ದಿನಗಳ ಹಿಂದೆ ಕುಕಟಪಲ್ಲಿಯ ವಿಶ್ವನಾಥ್ ಚಿತ್ರಮಂದಿರದ ಫ್ಯಾನ್ಸ್ ಶೋ ಮೊದಲ ಟಿಕೆಟ್ 1.12 ಲಕ್ಷ ರೂಪಾಯಿಗೆ ಹರಾಜಾಗಿತ್ತು. ಚೆನ್ನೈನಲ್ಲಿ ಇದೇ ಸಿನಿಮಾದ ಫ್ಯಾನ್ಸ್ ಶೋ ಟಿಕೆಟ್ ಬರೋಬ್ಬರಿ ಒಂದು ಲಕ್ಷ ರೂಪಾಯಿಗೆ ಹರಾಜಾಗಿತ್ತು. ಇದೀಗ ಚೌಟುಪಲ್ ಫ್ಯಾನ್ಸ್ ಶೋ ಟಿಕೆಟ್ಟು 1.30 ಲಕ್ಷ ರೂಪಾಯಿಗೆ ಹರಾಜಾಗಿದೆ.
ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಸೆಪ್ಟೆಂಬರ್ 25 ರಂದು ಬಿಡುಗಡೆ ಆಗಲಿದೆ. ಸಿನಿಮಾ ಅನ್ನು ಸುಜಿತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ ವಿಲನ್. ಸಿನಿಮಾಕ್ಕೆ ತಮನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ