ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?

Ustaad Bhagat Singh: ಪ್ರತಿ ಬಾರಿ ಪವನ್ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು, ಆದರೆ ಈ ಬಾರಿ ಹಾಗಾಗಿಲ್ಲ. ‘ಧುರಂಧರ್ 2’ ಸಿನಿಮಾದ ಕಾರಣಕ್ಕಾಗಿ ಸಿನಿಮಾಕ್ಕೆ ಹೆಚ್ಚಿನ ಶೋಗಳು ಸಿಕ್ಕಿಲ್ಲ ಹಾಗೆಂದು ತೀರ ಕಡಿಮೆ ಶೋಗಳು ಮಾತ್ರವೇ ದೊರೆತಿವೆ ಎಂದೂ ಸಹ ಅಲ್ಲ. ಸಾಧಾರಣ ಸಂಖ್ಯೆಯ ಶೋಗಳು ಸಿಕ್ಕಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಸ್ಪೆಷಲ್ ಶೋಗಳನ್ನು ಸಹ ಆಯೋಜನೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಅಡ್ವಾನ್ಸ್ ಬುಕಿಂಗ್ ಪ್ರಾರಂಭ: ಟಿಕೆಟ್ ಬೆಲೆ ಎಷ್ಟು?
Ustaad Bhagat Singh

Updated on: Mar 17, 2026 | 11:55 AM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಮಾರ್ಚ್ 19ರಂದು ಆಗಲಿದೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಹಿಂದಿನ ದಿನ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ 18ರಂದು ‘ಧುರಂಧರ್ 2’ ಪೇಯ್ಡ್ ಪ್ರೀಮಿಯರ್ ಶೋ ಆಯೋಜನೆ ಮಾಡಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸ್ಪೆಷನ್ ಶೋಗಳನ್ನು ಮಾತ್ರವೇ ಪ್ರದರ್ಶಿಸುತ್ತಿದೆ. ಬಿಡುಗಡೆಯ ದಿನ ಅಂದರೆ ಮಾರ್ಚ್ 19ರಂದು ಬೆಳಿಗಿನ ಜಾವ ಸಿನಿಮಾದ ಸ್ಪೆಷಲ್ ಶೋಗಳನ್ನು ಆಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ ಸಹ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.

ಪ್ರತಿ ಬಾರಿ ಪವನ್ ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಬೆಂಗಳೂರಿನಲ್ಲಿ ಸಿಗುತ್ತಿದ್ದವು, ಆದರೆ ಈ ಬಾರಿ ಹಾಗಾಗಿಲ್ಲ. ‘ಧುರಂಧರ್ 2’ ಸಿನಿಮಾದ ಕಾರಣಕ್ಕಾಗಿ ಸಿನಿಮಾಕ್ಕೆ ಹೆಚ್ಚಿನ ಶೋಗಳು ಸಿಕ್ಕಿಲ್ಲ ಹಾಗೆಂದು ತೀರ ಕಡಿಮೆ ಶೋಗಳು ಮಾತ್ರವೇ ದೊರೆತಿವೆ ಎಂದೂ ಸಹ ಅಲ್ಲ. ಸಾಧಾರಣ ಸಂಖ್ಯೆಯ ಶೋಗಳು ಸಿಕ್ಕಿದ್ದು, ಹಲವಾರು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ ಸ್ಪೆಷಲ್ ಶೋಗಳನ್ನು ಸಹ ಆಯೋಜನೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಬೆಳಿಗಿನ ಜಾವ 6:30 ಇಂದ ಶೋಗಳು ಆರಂಭವಾಗುತ್ತಿವೆ. ಕೆಲವು ಚಿತ್ರಮಂದಿರಗಳಲ್ಲಿ 7 ಗಂಟೆಗೆ ಶೋ ಪ್ರದರ್ಶಿಸಲಾಗುತ್ತಿದೆ. ವಿಶೇಷ ಶೋಗಳಿಗೆ ಬೆಂಗಳೂರಿನಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೆ ತೀರ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿಲ್ಲ. ‘ಧುರಂಧರ್ 2’ ಸಿನಿಮಾದ ಟಿಕೆಟ್​​ ಬೆಲೆಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ನ ವಿಶೇಷ ಶೋನ ಟಿಕೆಟ್ ಬೆಲೆಗಳು ಕಡಿಮೆಯೇ ಇವೆ. ವಿಶೇಷ ಶೋಗೆ ಕೆಲವೆಡೆ 400 ಹಾಗೂ 500 ರೂಪಾಯಿಗಳಿವೆ. ಅದೇ ಚಿತ್ರಮಂದಿರದ 10 ಗಂಟೆ ಶೋಗೆ ಟಿಕೆಟ್ ಬೆಲೆ 350 ಅಥವಾ 250 ರೂಪಾಯಿಗಳಿವೆ. ಕೆಲವೆಡೆ ಇನ್ನೂ ಕಡಿಮೆ ಇವೆ.

ಇದನ್ನೂ ಓದಿ:‘ಕಾಲರ್ ಎತ್ತರ’ ಎಂದು ಕುಣಿದ ಪವನ್ ಕಲ್ಯಾಣ್: ಸ್ಟೆಪ್ಪು ನೋಡಿ

ಈ ಬಾರಿ ಪವನ್ ಕಲ್ಯಾಣ್ ಸಿನಿಮಾಕ್ಕೆ ಬಹಳ ಕಡಿಮೆ ಶೋಗಳು ದೊರೆತಿವೆ. ಮಂಗಳವಾರ ಬುಕ್​​ಮೈಶೋನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ 150ಕ್ಕೂ ಕಡಿಮೆ ಶೋಗಳು ದೊರೆತಿವೆ. ಸ್ಕ್ರೀನ್​​ಗಳ ಸಂಖ್ಯೆ 35 ದಾಟಿಲ್ಲ. ಈ ಹಿಂದಿನ ‘ಓಜಿ’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯ ಸ್ಕ್ರೀನ್​​ಗಳು ಮತ್ತು ಶೋಗಳು ಲಭ್ಯವಾಗಿದ್ದವು. ಆದರೆ ಈ ಬಾರಿ ‘ಧುರಂಧರ್ 2’ ಹೊಡೆತಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಭಾರಿ ಪೆಟ್ಟುಣ್ಣುತ್ತಿದೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಪವನ್ ಕಲ್ಯಾಣ್ ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ರಾಶಿ ಖನ್ನಾ ಸಹ ಇದ್ದಾರೆ. ಈ ಸಿನಿಮಾನಲ್ಲಿ ವಿಂಟೇಜ್ ಪವನ್ ಕಲ್ಯಾಣ್ ಅವರನ್ನು ಕಾಣುತ್ತೀರಿ ಎಂದು ನಿರ್ದೇಶಕ ಹರೀಶ್ ಭರವಸೆ ಕೊಟ್ಟಿದ್ದಾರೆ. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us