ಮಗನ ‘ಪೆದ್ದಿ’ ಸಿನಿಮಾ ಸೆಟ್​ನಲ್ಲಿ ಅರ್ಧ ಗಂಟೆಯೂ ಇರಲಾಗಲಿಲ್ಲ ಚಿರಂಜೀವಿಗೆ: ಕಾರಣ?

Peddi movie: ‘ಪೆದ್ದಿ’ ಸಿನಿಮಾದ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಟಿಸಿದ್ದು, ಸಿನಿಮಾ ಅನ್ನು ನಿರ್​ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಬುಚ್ಚಿ ಬಾಬು ಸನಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಪೆದ್ದಿ’ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಆ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಬಂದಿದ್ದರಾದರೂ ಅವರಿಗೆ ಅರ್ಧ ಗಂಟೆ ಸಹ ಸೆಟ್​​ನಲ್ಲಿ ಇರಲಾಗಲಿಲ್ಲ ಎಂದರು. ಅವರೇ ಕಾರಣವನ್ನೂ ತಿಳಿಸಿದ್ದಾರೆ.

ಮಗನ ‘ಪೆದ್ದಿ’ ಸಿನಿಮಾ ಸೆಟ್​ನಲ್ಲಿ ಅರ್ಧ ಗಂಟೆಯೂ ಇರಲಾಗಲಿಲ್ಲ ಚಿರಂಜೀವಿಗೆ: ಕಾರಣ?
Chiru Ram Charan

Updated on: May 17, 2026 | 6:07 PM

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ಜಾನ್ಹವಿ ಕಪೂರ್ ನಟಿಸಿದ್ದು, ಸಿನಿಮಾ ಅನ್ನು ನಿರ್​ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಬುಚ್ಚಿ ಬಾಬು ಸನಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಪೆದ್ದಿ’ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡಿದ್ದರು. ಆ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಬಂದಿದ್ದರಾದರೂ ಅವರಿಗೆ ಅರ್ಧ ಗಂಟೆ ಸಹ ಸೆಟ್​​ನಲ್ಲಿ ಇರಲಾಗಲಿಲ್ಲ ಎಂದರು. ಅವರೇ ಕಾರಣವನ್ನೂ ತಿಳಿಸಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್​ ಶೂಟಿಂಗ್ ವೇಳೆ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಭೇಟಿ ನೀಡಿದ್ದರು. ಚಿರಂಜೀವಿ ಅವರು ಸೆಟ್​​ಗೆ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಸರಿಯಾಗಿ ಕುಸ್ತಿ ಪಂದ್ಯದ ಶೂಟಿಂಗ್ ನಡೆಯುವಾಗಲೇ ಮೆಗಾಸ್ಟಾರ್ ಚಿರಂಜೀವಿ ಅವರು ಸೆಟ್​​ಗೆ ಹಾಜರಿ ಹಾಕಿದ್ದರು. ಆದರೆ ಅರ್ಧ ಗಂಟೆ ಸಹ ಅವರು ಇರಲಿಲ್ಲವಂತೆ. ಕೂಡಲೇ ಅಲ್ಲಿಂದ ಹೊರಟು ಬಿಟ್ಟರಂತೆ.

ಏಕೆಂದರೆ, ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಫೈಟ್​​ನಲ್ಲಿ ರಾಮ್ ಚರಣ್ ಅವರಿಗೆ ಬಹಳಷ್ಟು ಅಪಾಯಕಾರಿ ಶಾಟ್​​ಗಳು ಇದ್ದವಂತೆ. ಎಲ್ಲವನ್ನೂ ಖುದ್ದು ರಾಮ್ ಚರಣ್ ಅವರೇ ಮಾಡುತ್ತಿದ್ದರಂತೆ. ಮಗ ತನ್ನನ್ನು ತಾನು ಅಷ್ಟು ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ನೋಡಲಾಗದೆ ಚಿರಂಜೀವಿ ಅವರು ಸೆಟ್​​ನಿಂದಲೇ ಹೊರಟು ಹೋದರಂತೆ. ಇದೇ ವಿಷಯವನ್ನು ಬುಚ್ಚಿ ಬಾಬು ಸನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಪೆದ್ದಿ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಸಾಕಷ್ಟು ರಿಸ್ಕಿ ಶಾಟ್​​ಗಳನ್ನು ರಾಮ್ ಚರಣ್ ಅವರಿಗಾಗಿ ಕಂಪೋಸ್ ಮಾಡಲಾಗಿತ್ತಂತೆ. ಕೆಲ ಶಾಟ್​​ಗಳು ಅದೆಷ್ಟು ರಿಸ್ಕಿ ಆಗಿದ್ದುವೆಂದರೆ ರಾಮ್ ಚರಣ್ ಅವರನ್ನು ಆ ಸ್ಥಿತಿಯಲ್ಲಿ ನೋಡಲು ಸಹ ಚಿರಂಜೀವಿ ಅವರು ಭಯಪಟ್ಟು ಅಲ್ಲಿಂದ ಹೊರಟು ಹೋದರಂತೆ. ಬುಚ್ಚಿ ಬಾಬು ಸನಾ ಹೇಳಿರುವಂತೆ ಸಿನಿಮಾದ ಕ್ಲೈಮ್ಯಾಕ್ಸ್, ‘ಪೆದ್ದಿ’ ಸಿನಿಮಾದ ಜೀವ. ಆಕ್ಷನ್ ಜೊತೆಗೆ ಅತೀವ ಭಾವುಕವಾದ ದೃಶ್ಯಗಳು ಸಿನಿಮಾದ ಕ್ಲೈಮ್ಯಾಕ್ಸ್​​ನಲ್ಲಿ ಇವೆಯಂತೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ‘ಗೌಡನಾಯ್ಡು’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ಹವಿ ಕಪೂರ್ ಸಿನಿಮಾದ ನಾಯಕಿ. ಜಗಪತಿ ಬಾಬು ಸಹ ಸಿನಿಮಾನಲ್ಲಿದ್ದಾರೆ. ಶ್ರುತಿ ಹಾಸನ್, ಸಿನಿಮಾನಲ್ಲಿ ಐಟಂ ಹಾಡಿನಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us