Sonu Sood: ಸೋನು ಸೂದ್​ ಕಾಲಿಗೆ ಬೀಳಲು ಮುಂದಾದ ಜನ; ಕೈ ಮುಗಿದು ದೊಡ್ಡವರಾದ ರಿಯಲ್​ ಹೀರೋ

ಸೋನು ಸೂದ್​ ಮನೆಯ ಎದುರು ಇತ್ತೀಚೆಗೆ ಕೆಲವರು ಬಂದು ಸಹಾಯ ಕೇಳಿದ್ದಾರೆ. ತಮ್ಮ ಕಷ್ಟಕ್ಕೆ ಸ್ಪಂದಿಸಿದ ನಟನ ಕಾಲಿಗೆ ಬೀಳಲು ಅವರೆಲ್ಲ ಮುಂದಾಗಿದ್ದಾರೆ.

Sonu Sood: ಸೋನು ಸೂದ್​ ಕಾಲಿಗೆ ಬೀಳಲು ಮುಂದಾದ ಜನ; ಕೈ ಮುಗಿದು ದೊಡ್ಡವರಾದ ರಿಯಲ್​ ಹೀರೋ
ಸೋನು ಸೂದ್​ - ಕಾಲಿಗೆ ಬಿದ್ದು ನಮಸ್ಕರಿಸಲು ಬಂದ ಜನ

Updated on: May 24, 2021 | 9:32 AM

ನಟ ಸೋನು ಸೂದ್​ ಮಾಡುತ್ತಿರುವ ಕೆಲಸಗಳಿಗೆ ಬೆಲೆ ಕಟ್ಟಲಾಗದು. ಕಳೆದ ವರ್ಷ ಲಾಕ್​ಡೌನ್​ ಜಾರಿ ಆದಾಗಿನಿಂದಲೂ ಅವರು ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ದೇಶದಲ್ಲಿ ಕೊವಿಡ್​ 2ನೇ ಅಲೆ ಜೋರಾದ ನಂತರವಂತೂ ಈ ರಿಯಲ್ ಹೀರೋ ಸಮಾಜಮುಖಿ ಕಾರ್ಯಗಳು ಹೆಚ್ಚಾಗಿವೆ. ಅನೇಕರಿಗೆ ಅವರು ಆಸ್ಪತ್ರೆ ಬೆಡ್​ ವ್ಯವಸ್ಥೆ ಮಾಡಿಸಿದ್ದಾರೆ. ಆಕ್ಸಿಜನ್​ ಸಿಲಿಂಡರ್​ಗಳು ದೊರೆಯುವಂತೆ ಮಾಡಿದ್ದಾರೆ. ಚಿಕಿತ್ಸೆಗೆ ಹಣ ಇಲ್ಲದವರಿಗೆ ಆರ್ಥಿಕ ನೆರವು ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಪ್ರತಿದಿನ ಸಾವಿರಾರು ಜನರು ಸೋನು ಸೂದ್​ ಬಳಿ ಸಹಾಯಕ್ಕಾಗಿ ಕೈ ಚಾಚುತ್ತಾರೆ. ಅಲ್ಲದೆ, ಕೆಲವರು ಮನೆ ಎದುರು ಹೋಗಿ ಮನವಿ ಮಾಡಿಕೊಳ್ಳುತ್ತಾರೆ.

ಸೋನು ಸೂದ್​ ಬಳಿ ಕಷ್ಟ ಹೇಳಿಕೊಂಡರೆ ಅದಕ್ಕೆ ಖಂಡಿತ ಪರಿಹಾರ ಸಿಗುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅವರನ್ನು ಜನರು ದೇವರ ರೀತಿ ನೋಡುತ್ತಾರೆ. ತಮಗೆ ಜನಿಸಿದ ಮಕ್ಕಳಿಗೆ ಸೋನು ಸೂದ್​ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದವರೂ ಇದ್ದಾರೆ.

ಮುಂಬೈನಲ್ಲಿರುವ ಸೋನು ಸೂದ್​ ಮನೆಯ ಎದುರು ಇತ್ತೀಚೆಗೆ ಕೆಲವರು ಬಂದು ಸಹಾಯ ಕೇಳಿದ್ದಾರೆ. ತಮ್ಮ ಕಷ್ಟಕ್ಕೆ ಸ್ಪಂದಿಸಿದ ನಟನ ಕಾಲಿಗೆ ಬೀಳಲು ಅವರೆಲ್ಲ ಮುಂದಾಗಿದ್ದಾರೆ. ವಯಸ್ಸಿನಲ್ಲಿ ಹಿರಿಯರಾದವರು ಕೂಡ ಭಾವುಕರಾಗಿ ಸೋನು ಪಾದ ಮುಟ್ಟಿ ನಮಸ್ಕರಿಸಲು ಬಂದಿದ್ದಾರೆ. ಆದರೆ ಅದಕ್ಕೆ ಸೋನು ಅವಕಾಶ ನೀಡಿಲ್ಲ. ವಿನಯವಂತಿಕೆಯಿಂದ ಹಿಂದೆ ಸರಿದು, ಎಲ್ಲರಿಗೂ ಕೈ ಮುಗಿದಿದ್ದಾರೆ ರಿಯಲ್​ ಹೀರೋ.

ಒಂದೆಡೆ ಸೋನು ಸೂದ್​ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಸೋನು ಸೂದ್​ ಹೆಸರಿನಲ್ಲಿ ಹಣ ಮಾಡಲು ಕೂಡ ಕೆಲವು ಕಿಡಿಗೇಡಿಗಳು ಮುಂದಾಗಿದ್ದಾರೆ. ಸೋನು ಸೂದ್​ ಫೌಂಡೇಶನ್​ಗೆ ಹಣ ದೇಣಿಗೆ ನೀಡಿ ಎಂದು ನಕಲಿ ಗೂಗಲ್​ ಪೇ ನಂಬರ್​ ಇರುವ ಪೋಸ್ಟರ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಹರಿದಾಡಿದ್ದವು. ಅವುಗಳ ಸ್ಕ್ರೀನ್​ ಶಾಟ್​ ಹಂಚಿಕೊಂಡ ಸೋನು ಸೂದ್​, ಇದೆಲ್ಲವೂ ಫೇಕ್​ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈ ವಿಚಾರದಲ್ಲಿ ಜನರು ಜಾಗರೂಕತೆ ವಹಿಸಲೇಬೇಕು.

ಇದನ್ನೂ ಓದಿ:

Sonu Sood: ಸೋನು ಸೂದ್​ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು

ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್​; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್​ ಸಿಲಿಂಡರ್

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us