Pooja Hegde: ರಶ್ಮಿಕಾಗೆ ಪೈಪೋಟಿ ನೀಡುವ ಕನ್ನಡತಿ ಪೂಜಾ ಹೆಗ್ಡೆಗೆ ಕಾಲಿವುಡ್​ನಲ್ಲಿ ಸಿಕ್ತು ಬಂಪರ್​ ಆಫರ್​!

Thalapathy 65: ತೆಲುಗು, ತಮಿಳು ಚಿತ್ರರಂಗದಲ್ಲಿ ಕನ್ನಡತಿಯರ ಹವಾ ಜೋರಾಗಿದೆ. ಅಲ್ಲಿನ ಸ್ಟಾರ್​ ಸಿನಿಮಾಗಳಿಗೆ ಕನ್ನಡದ ಹುಡುಗಿಯರು ಆಯ್ಕೆ ಆಗುತ್ತಿದ್ದಾರೆ.

Pooja Hegde: ರಶ್ಮಿಕಾಗೆ ಪೈಪೋಟಿ ನೀಡುವ ಕನ್ನಡತಿ ಪೂಜಾ ಹೆಗ್ಡೆಗೆ ಕಾಲಿವುಡ್​ನಲ್ಲಿ ಸಿಕ್ತು ಬಂಪರ್​ ಆಫರ್​!
ಪೂಜಾ ಹೆಗ್ಡೆ
Edited By:

Updated on: Mar 25, 2021 | 12:14 PM

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಕರ್ನಾಟಕದವರೇ ಆದರೂ ಈವರೆಗೆ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ಅವರು ಮಿಂಚುತ್ತಿರುವುದೆಲ್ಲ ಪರಭಾಷೆಯಲ್ಲಿ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಅಲ್ಲಿನ ಸ್ಟಾರ್​ ಹೀರೋಗಳ ಸಿನಿಮಾಗಳಿಗೆ ನಾಯಕಿಯಾಗುವ ಅವಕಾಶವನ್ನು ಪೂಜಾ ಬ್ಯಾಕ್​ ಟು ಬ್ಯಾಕ್​ ಪಡೆದುಕೊಳ್ಳುತ್ತಿದ್ದಾರೆ. ಈಗ ಪೂಜಾ ಅಭಿಮಾನಿಗಳಿಗೆ ಇನ್ನೊಂದು ಗುಡ್​ ನ್ಯೂಸ್​ ಸಿಕ್ಕಿದೆ.

ಹಲವು ದಿನಗಳ ಬಳಿಕ ಕಾಲಿವುಡ್​ಗೆ ಪೂಜಾ ಮರಳಿದ್ದಾರೆ. 2012ರಲ್ಲಿ ಅವರು ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ತಮಿಳು ಸಿನಿಮಾ ಮೂಲಕ. ಆದರೆ ಆ ಬಳಿಕ ಅವರು ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಅದರ ನಡುವೆ ಬಾಲಿವುಡ್​ನಲ್ಲೂ ಅದೃಷ್ಟಪರೀಕ್ಷೆಗೆ ಇಳಿದಿದ್ದರು. ಇಷ್ಟೆಲ್ಲ ಆದ ಬಳಿಕ ಮತ್ತೆ ತಮಿಳು ಚಿತ್ರರಂಗದತ್ತ ಗಮನ ಹರಿಸುತ್ತಿದ್ದಾರೆ. ಈ ಬಾರಿ ಅವರಿಗೆ ಬಂಪರ್​ ಆಫರ್​ ಸಿಕ್ಕಿದೆ.

ಹೌದು, ಕಾಲಿವುಡ್​ನ ಸ್ಟಾರ್​ ನಟ ‘ದಳಪತಿ’ ವಿಜಯ್​ ಜೊತೆ ಅಭಿನಯಿಸುವ ಅವಕಾಶವನ್ನು ಪೂಜಾ ಪಡೆದುಕೊಂಡಿದ್ದಾರೆ. ವಿಜಯ್​ ನಟಿಸಲಿರುವ 65ನೇ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ‘ಸನ್​ ಪಿಕ್ಚರ್ಸ್​’ ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಪೂಜಾ ಹೆಗ್ಡೆ ಅಭಿಮಾನಿಗಳು ಸಖತ್​ ಖುಷಿ ಆಗಿದ್ದಾರೆ.

ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ ಕನ್ನಡತಿಯರ ಹವಾ ಜೋರಾಗಿದೆ. ಅಲ್ಲಿನ ಸ್ಟಾರ್​ ಸಿನಿಮಾಗಳಿಗೆ ಕನ್ನಡದ ಹುಡುಗಿಯರು ಆಯ್ಕೆ ಆಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಅವರ ಜೊತೆಗೆ ಈಗ ಕೃತಿ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಇಂಥ ಹೊಸ ನಟಿಯರಿಗೆಲ್ಲ ಸ್ಪರ್ಧೆ ನೀಡಿ ಪೂಜಾ ಈಗಲೂ ಮೇಲುಗೈ ಸಾಧಿಸುತ್ತಿದ್ದಾರೆ.

ವಿಜಯ್​ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಪೂಜಾ ಸಂತಸ ವ್ಯಕ್ತಪಡಿಸಿದ್ದಾರೆ. ‘ಅದ್ಭುತ ನಟ ವಿಜಯ್​ ಜೊತೆ ಇಂಥ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬ ಎಗ್ಸೈಟ್​ ಆಗಿದ್ದೇನೆ. ಶೂಟಿಂಗ್​ ಶುರುವಾಗಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಪೂಜಾ ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ನಲ್ಲಿ ರಣವೀರ್​ ಸಿಂಗ್​ ಜೊತೆ ಅವರು ‘ಸರ್ಕಸ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್​ ನಟನೆಯ ರಾಧೆ ಶ್ಯಾಮ್​ ಚಿತ್ರಕ್ಕೂ ಪೂಜಾ ನಾಯಕಿ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ಪೂಜಾ ಹೆಗ್ಡೆಗೆ ಟಫ್​ ಕಾಂಪಿಟೀಷನ್​ ಕೊಡೋಕೆ ಬಂದ್ರು ಮತ್ತೋರ್ವ ನಟಿ!

Published On - 8:37 am, Thu, 25 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us