ಪ್ರಭಾಕರ್ ವರ್ಕೌಟ್ ಯಾವ ರೀತಿ ಇರುತ್ತಿತ್ತು? ಫಿಟಸ್ನೆಸ್ ಗುಟ್ಟು ಹಸುವಿನ ಹಾಲು, ಸೇಬು  

ನಟ ಪ್ರಭಾಕರ್ ಅವರ ಕಟ್ಟುಮಸ್ತಾದ ದೇಹ ಹಾಗೂ ಗಡಸು ಧ್ವನಿ ಅಭಿಮಾನಿಗಳಿಗೆ ಬಹಳ ಇಷ್ಟವಾಗಿತ್ತು. ಅವರ ಕಠಿಣ ವ್ಯಾಯಾಮ ಮತ್ತು ಆಹಾರ ಕ್ರಮದ ಬಗ್ಗೆ ಅವರ ಮಗ ವಿನೋದ್ ಪ್ರಭಾಕರ್ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಐದೂವರೆಗೆ ಜಿಮ್, ಕಡಿಮೆ ಆಹಾರ ಸೇವನೆ ಮತ್ತು ಕಬ್ಬಿಣದ ಡಂಬೆಲ್‌ಗಳನ್ನು ಬಳಸುವುದು ಅವರ ದಿನಚರಿಯ ಭಾಗವಾಗಿತ್ತು.

ಪ್ರಭಾಕರ್ ವರ್ಕೌಟ್ ಯಾವ ರೀತಿ ಇರುತ್ತಿತ್ತು? ಫಿಟಸ್ನೆಸ್ ಗುಟ್ಟು ಹಸುವಿನ ಹಾಲು, ಸೇಬು  
ಪ್ರಭಾಕರ್

Updated on: Jun 17, 2025 | 10:41 AM

ನಟ ಪ್ರಭಾಕರ್ (Prabhakar) ಅವರು ವಿಲನ್ ಆಗಿ, ಪೊಲೀಸ್ ಅಧಿಕಾರಿಯಾಗಿ, ಹೀರೋ ಆಗಿ ಸಿನಿಮಾಗಳನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ ಅವರಲ್ಲಿ ಇಷ್ಟ ಆಗುತ್ತಿದ್ದುದು ಗಡಸು ಧ್ವನಿ ಹಾಗೂ ಅವರ ಕಟ್ಟುಮಸ್ತಾದ ಬಾಡಿ. ಫೈಟಿಂಗ್ ದೃಶ್ಯಗಳಿಗೆ ಈ ಬಾಡಿ ಬೇರೆಯದೇ ತೂಕ ಕೊಡುತ್ತಿತ್ತು. ಈಗ ಎಲ್ಲಾ ಹೀರೋಗಳು ಜಿಮ್​ಗೆ ಹೋಗಿ ಕಟ್ಟುಮಸ್ತಾದ ದೇಹ ಮಾಡಿಕೊಳ್ಳುತ್ತಾರೆ. ಆದರೆ, ಆಗಿನ ಕಾಲದಲ್ಲಿ ಈ ರೀತಿ ಇರಲಿಲ್ಲ. ದೇಹವನ್ನು ಹುರಿಗೊಳಿಸಿಕೊಳ್ಳಲು ಸಾಕಷ್ಟು ಕಸರತ್ತು ಮಾಡಬೇಕಿತ್ತು. ಪ್ರಭಾಕರ್ ದಿನಚರಿ ಯಾವ ರೀತಿ ಇರುತ್ತಿತ್ತು ಎಂಬುದನ್ನು ಅವರ ಮಗ ವಿನೋದ್ ಪ್ರಭಾಕರ್ ರಿವೀಲ್ ಮಾಡಿದ್ದಾರೆ.

‘ಮೆಟ್ರೋಸಾಗ’ ಯೂಟ್ಯೂಬ್ ಚಾನೆಲ್​ಗೆ ವಿನೋದ್ ಅವರು ಸಂದರ್ಶನ ನೀಡಿದ್ದಾರೆ. ಇವರನ್ನು ಸಂದರ್ಶನ ಮಾಡಿದ್ದು ಸೋನಲ್. ಇವರಿಬ್ಬರೂ ‘ಮಾದೇವ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದು,  ಜೂನ್ 6ರಂದು ಸಿನಿಮಾ ಬಿಡುಗಡೆಯಾಗಿದೆ. ಇದರ ಪ್ರಚಾರಕ್ಕಾಗಿ ಈ ಜೋಡಿ ಸಂದರ್ಶನ ಮಾಡಿದೆ. ಈ ವೇಳೆ ಪ್ರಭಾಕರ್ ಕಸರತ್ತಿನ ಬಗ್ಗೆ ಸೋನಲ್ ಅವರು ವಿನೋದ್​ಗೆ ಕೇಳಿದ್ದಾರೆ.

ಇದನ್ನೂ ಓದಿ
ಸಿನಿಮಾ ಸೆಟ್​ನಲ್ಲೇ ಹೀರೋನಾ ಮದುವೆ ಆಗಿದ್ರಾ ಜೆನಿಲಿಯಾ? ಉತ್ತರಿಸದ ನಟಿ
ಶೋಭಿತಾ ಹಾಗೂ ನಾಗ ಚೈತನ್ಯರನ್ನು ನಿರ್ಲಕ್ಷಿಸಿದ್ರಾ ಮಹೇಶ್ ಬಾಬು?
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ
ರವಿಚಂದ್ರನ್​ಗೆ ನೋವಾಗದಂತೆ ಸಿನಿಮಾ ಚೆನ್ನಾಗಿಲ್ಲ ಎಂದಿದ್ದ ತಂದೆ ವೀರಸ್ವಾಮಿ

‘ಬಹಳ ಕಡಿಮೆ ತಿನ್ನುತ್ತಿದ್ದರು. ಬೆಳಿಗ್ಗೆ ಐದೂವರೆಗೆ ಜಿಮ್ ಮಾಡುತ್ತಿದ್ದರು. ಮನೆ ಮೇಲೆ ಜಿಮ್ ಇತ್ತು.  ಆಗೆಲ್ಲ ರಬ್ಬರ್ ಡಂಬೆಲ್ ಇರಲಿಲ್ಲ. ಎಲ್ಲ ಕಬ್ಬಿಣದಲ್ಲೇ ಇರುತ್ತಿದ್ದರಿಂದ ಸೌಂಡ್ ಬರುತ್ತಿತ್ತು. ಆರು ತಿಂಗಳು ವರ್ಕೌಟ್ ಮಾಡಿದರೆ, ಮೂರು ತಿಂಗಳು ಬ್ರೇಕ್ ಪಡೆಯುತ್ತಿದ್ದರು’ ಎಂದಿದ್ದಾರೆ ವಿನೋದ್ ಪ್ರಭಾಕರ್.


‘ನನ್ನ ತಂದೆ ಮಿಸ್ಟರ್ ಮೈಸೂರ್​ಗೆ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಅವರು ಗರಡಿ ಪೈಲ್ವಾನ್. ವರ್ಕೌಟ್ ಬಿಟ್ಟರೆ ಸಣ್ಣ ಆಗುತ್ತಿದ್ದರು. ಬೆಳಿಗ್ಗೆ ಹಸುವಿನ ಹಾಲು ಕುಡಿಯುತ್ತಿದ್ದರು. ವರ್ಕೌಟ್​ಗೂ ಮೊದಲು ಸೇಬು ಹಣ್ಣನ್ನು ತಿನ್ನುತ್ತಿದ್ದರು. ಅವರು ಪ್ರೋಟಿನ್ ಶೇಕ್​ನ ಸೇವಿಸುತ್ತಿರಲಿಲ್ಲ’ ಎಂದು ವಿನೋದ್ ಹೇಳಿದ್ದಾರೆ.

ಇದನ್ನೂ ಓದಿ: ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್

ಪ್ರಭಾಕರ್ ಜನಿಸಿದ್ದು 1948ರಲ್ಲಿ. ಅವರು ಹುಟ್ಟಿದ್ದು ಬೆಂಗಳೂರಿನಲ್ಲೇ. ಅವರು ಕೇವಲ 52ನೇ ವಯಸ್ಸಿಗೆ (2001) ನಿಧನ ಹೊಂದಿದರು. 1969ರಲ್ಲಿ ಪ್ರಭಾಕರ್ ಮೊದಲ ಬಾರಿಗೆ ಬಣ್ಣ ಹಚ್ಚಿದರು. ‘ಕಾಡಿನ ರಹಸ್ಯ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಕಿಡ್ನಿ ಫೇಲ್ಯುವರ್​ನಿಂದ 2001ರ ಮಾರ್ಚ್ 25ರಂದು ಅವರು ನಿಧನ ಹೊಂದಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.